ಜಿಲ್ಲೆ

ಜೆಜೆಎಂ ಕಾಮಗಾರಿ ಪರಿಶೀಲನೆ; ಸಿಇಒ ರಾಹುಲ್ ಶಿಂಧೆ

ಮಂಜುನಾಥ ಕೋಳಿಗುಡ್ಡ

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಹುಕ್ಕೇರಿ ತಾಲೂಕಿನ ವಿವಿಧೆಡೆ ಭೇಟಿ ನೀಡಿ, ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳ ಬಗ್ಗೆ ಅವಲೋಕಿಸಿದರು.

ಬೆಳಗಾವಿ: ಹುಕ್ಕೇರಿ ತಾಲೂಕಿನ ಕೋಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳ್ಳಂಕಿ ಗ್ರಾಮ ಮತ್ತು ನಾಗನೂರ ಕೆ.ಡಿ. ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿದ್ರೇವಾಡಿ ಗ್ರಾಮಕ್ಕೆ ಭೇಟಿ ನೀಡಿ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳ ಸ್ಥಳ ವೀಕ್ಷಣೆ ಮಾಡಿ, ಓ. ಹೆಚ್. ಟಿ. (OHT-Over Head Tank) ಸ್ವಚ್ಛತೆ ಮತ್ತು ಸ್ವಚ್ಛತೆ ಮಾಡಿರುವ ದಿನಾಂಕವನ್ನು ಓ.ಹೆಚ್.ಟಿ. ಮೇಲೆ ಬರೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮನೆ ಮನೆಗೆ ಅಳವಡಿಸಲಾಗಿರುವ ನಳ ಸಂಪರ್ಕ ಕುರಿತು ಸ್ಥಳೀಯ ಫಲಾನುಭವಿಗಳ ಜೊತೆ ಚರ್ಚೆಮಾಡಿದರು. ಕಾರ್ಯತ್ಮಕ ನಳ ಸಂಪರ್ಕ ಬಗ್ಗೆ ರೇಖಾ ನಕ್ಷೆ ಮೂಲಕ ಮಾಹಿತಿ ಪಡೆದುಕೊಂಡು ಗ್ರಾಮ ಪಂಚಾಯತಿ ಸದಸ್ಯರೊಂದಿಗೆ ಚರ್ಚೆ ಮಾಡಿದರು. ನಂತರ ಬಿದ್ರೇವಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಚರ್ಚೆ ಮಾಡಿದರು.

ಮುಂದೆ ಸಂಜೀವಿನಿ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಡಿಯಲ್ಲಿ ರಚನೆಯಾದ ಶ್ರಮಜೀವಿ ಸಂಜೀವಿನಿ ವನ ಧನ ವಿಕಾಸ ಕೇಂದ್ರ, ಚಿಕ್ಕಾಲಗುಡ್ಡಕ್ಕೆ ಭೇಟಿ ನೀಡಿದರು. ವಿಕಾಸ ಕೇಂದ್ರಲ್ಲಿ ತಯಾರಾದ ಬ್ಯಾಗ, ಕುರ್ತಾ, ಕೌದಿ, ಬಾಳೆದಿಂಡಿನ ಸಾಮಗ್ರಿಗಳನ್ನು, ಇತರೆ ಉತ್ಪನನ್ನಗಳನ್ನು ವೀಕ್ಷಣೆ ಮಾಡಿದರು. ಮಹಿಳಾ ಸಂಘದ ಸದಸ್ಯರೊಂದಿಗೆ ಚರ್ಚಿಸಿದರು. ಇದರೊಂದಿಗೆ ಸಂಘದಲ್ಲಿ ಟಿ ಶರ್ಟಗಳನ್ನು ತಯಾರಿ ಮಾಡಿದರೆ ಇನ್ನೂ ಹೆಚ್ಚಿನ ಲಾಭ ಪಡೆಯಬಹುದು ಎಂದು ಸಲಹೆ ನೀಡಿದರು.

ಕೇಸ್ತಿ ಗ್ರಾಮ ಪಂಚಾಯತಿಯ ಅಕ್ಕಿವಾಟ ಮತ್ತು ಆಲೂರ ಕೆ.ಎಂ. ಗ್ರಾಮಗಳಿಗೆ ಭೇಟಿ ನೀಡಿ ಕಾರ್ಯಾತ್ಮಕ ನಳ ಸಂಪರ್ಕ ಸ್ಥಳ ಪರಿಶೀಲನೆ ಮಾಡಿದರು ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಜೊತೆ ಚರ್ಚೆ ಮಾಡಿ ಗ್ರಾಮದಲ್ಲಿ ಕುಡಿಯುವ ನೀರಿನ ಮೂಲಗಳ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕೆಂದು ತಿಳಿಸಿದರು. ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ನೀರಿನ ಪರೀಕ್ಷೆಯ ಮಾಹಿತಿಯನ್ನು ಪರಿಶೀಲನೆ ಮಾಡಿದರು. ನಲ್ಲಿಯ ಸಂಪರ್ಕ ಪಡೆದ ಪಲಾನುಭವಿಗಳ ಜೋತೆ ಚರ್ಚೆ ಮಾಡಿ ನೀರು ಸರಿಯಾಗಿ ಬರುತ್ತಿದೆ ಅಥವಾ ಇಲ್ಲ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಗ್ರಾ.ಕು.ನೀ.& ನೈ. ವಿಭಾಗ ಚಿಕ್ಕೋಡಿ ಇಇ ಪಾಂಡುರಂಗರಾವ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್. ಮಲ್ಲಾಡದ, ತಾಪಂ. ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ರಾಜು ಢಾಂಗೆ, ಸಹಾಯಕ ನಿರ್ದೇಶಕ (ಗ್ರಾ.ಉ) ಲಕ್ಷ್ಮೀನಾರಾಯಣ ಪಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಮಾರುತಿ ಕಳ್ಳಿಮನಿ, ಗ್ರಾ.ಕು.ನೀ. &. ನೈ ಉಪ ವಿಭಾಗ ವಲಯ ಶಾಖಾಧಿಕಾರಿಗಳಾದ ಚೇತನ ಕಡಕೋಳ, ಅಭೀಷೇಕ ಪವಾರ, ಜ್ಯೋತಿ ಬಡಗಾವಿ, ಸಂತೋಷ ಪಾಟೀಲ, ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.