ಜಿಲ್ಲೆ

ಹಳ್ಳಿಗಳ ಅಭಿವೃದ್ದಿಯಲ್ಲಿ ಗ್ರಾಪಂ ಸಿಬ್ಬಂದಿ ಪಾತ್ರ ದೊಡ್ಡದು

ಮಂಜುನಾಥ ಕೋಳಿಗುಡ್ಡ

-ಜನರ ಸಮಸ್ಯೆಗಳಿಗೆ ಸ್ಪಂದಿಸಿ; ನಿರ್ಲಕ್ಷ್ಯ ಬೇಡ

- ಜಿಪಂ ಸಿಇಒ ರಾಹುಲ ಶಿಂಧೆ ಕಿವಿ ಮಾತು

ಬೆಳಗಾವಿ: ಹಳ್ಳಿಗಳ ಸಮಗ್ರ ಅಭಿವೃದ್ಧಿ, ಸರ್ಕಾರ ಸವಲತ್ತುಗಳನ್ನು ಜನರಿಗೆ ಮುಟ್ಟಿಸುವಲ್ಲಿ ಗ್ರಾಪಂ ಸಿಬ್ಬಂದಿ ಪಾತ್ರ ದೊಡ್ಡದಿದೆ. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಆಗಬೇಕು ಎಂದು ಜಿಪಂ ಸಿಇಒ ರಾಹುಲ ಶಿಂಧೆ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಬೆಳಗಾವಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರವಸೂಲಿಗಾರ, ಕ್ಲರ್ಕ, ಡಾಟಾ ಎಂಟ್ರಿ ಆಪರೇಟರ, ವಾಟರಮನ್, ಸ್ವಚ್ಛತಾಗಾರ ಹಾಗೂ ಅಟೆಂಡರಗಳ ಕುಂದು ಕೊರತೆಗಳನ್ನು ಆಲಿಸುವ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಗ್ರಾಪಂಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು, ಸಿಬ್ಬಂದಿಗೆ ಹೆಚ್ಚುವರಿ ಕೆಲಸಗಳ ಹೊರೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತವೆ. ಯಾವುದೇ ಕಾರಣಕ್ಕೂ ಅಭಿವೃದ್ಧಿ ಕೆಲಸಗಳು ನಿಲ್ಲದಂತೆ ಕಾರ್ಯನಿರ್ವಹಿಸಿ. ಹಿರಿಯ ಅಧಿಕಾರಿಗಳಿಗೆ ಸಹಕಾರ ನೀಡಿ. ಎಲ್ಲರೂ ಒಟ್ಟಿಗೆ ಸಮನ್ವಯತೆಯಿಂದ ಕೆಲಸ‌ಮಾಡಿ ಎಂದು ಕಿವಿ ಮಾತು ಹೇಳಿದರು.

ಜಿಪಂ ಉಪಕಾರ್ಯದರ್ಶಿ(ಆಡಳಿತ) ಬಸವರಾಜ್ ಹೆಗ್ಗನಾಯಕ್, ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ್ ಅಡವಿಮಠ, ಸಹಾಯಕ ಕಾರ್ಯದರ್ಶಿ(ಆಡಳಿತ) ರಾಹುಲ್ ಕಾಂಬಳೆ, ಕಛೇರಿ ಅಧೀಕ್ಷಕರು ಬಸವರಾಜ್ ಮುರಘಾಮಠ ಇತರರಿದ್ದರು.