ಬೆಳಗಾವಿ: ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಜಿಪಂ ಸಿಇಒ ರಾಹುಲ್ ಶಿಂಧೆ ರವರು ಮಾತನಾಡಿದರು.
ಜಿಪಂ ಸಿಇಒ ರಾಹುಲ್ ಶಿಂಧೆ ವಿವಿಧ ಇಲಾಖೆಗಳನ್ನು ಉದ್ದೇಶಿಸಿ ಮಾತನಾಡಿ ಜಿಲ್ಲೆಗೆ ಹಂಚಿಕೆಯಾದ ಅನುದಾನವನ್ನು ಅಪವ್ಯಯಗೊಳಿಸದೆ ಸಂಪೂರ್ಣವಾಗಿ ಬಳಸಲು ಸೂಚಿಸಿದರು.
*ಕೃಷಿ ಇಲಾಖೆ*
ಜಿಪಂ ಸಿಇಒ ರಾಹುಲ್ ಶಿಂಧೆ ಮಾತನಾಡಿ ಉತ್ಪಾದಣೆ ಹೆಚ್ಚಿಸುವ ಕಾರ್ಯಕ್ರಮಗಳೊಂದಿಗೆ ಈಗಾಗಲೇ ರಚಿತವಾದ ರೈತ ಉತ್ಪಾದಕ ಸಂಸ್ಥೆಗಳ ಕೇಂದ್ರಿಕೃತವಾಗಿ ಅವುಗಳ ಪುನರುತ್ಸಾನ ಮಾಡುತ್ತಾ ವಿವಿಧ ಬೆಳೆಗಳು ವಿಶೇಷವಾಗಿ ಗೋವಿನಜೋಳ, ಸೋಯಾಬಿನ್, ಅರಿಶಿಣ ಜೇನು ಬೆಳೆಯುವ ರೈತರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ಖರೀದಿದಾರರು ಹಾಗೂ ರೈತರ ಸಭೆಗಳನ್ನು ಏರ್ಪಡಿಸಲು ಸೂಚಿಸಿದರು. ರೈತ ಉತ್ಪಾದಕ ಸಂಸ್ಥೆಗಳನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಕಾರ್ಯೋಣ್ಮುಖರಾಗಲು ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು ಅದರ ಜೊತೆಗೆ ನಾಲ್ಕನೆ ತ್ರೈಮಾಸಿಕದಲ್ಲಿ ಚುರುಕಾಗಿ ಕಾರ್ಯನಿರ್ವಹಿಸಲು ತಿಳಿಸಿದರು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ರಸ್ತೆ ಬದಿಯಲ್ಲಿ ತರಕಾರಿ ಮಾರಾಟ ಮಾಡುವುದನ್ನು ಬದಲಿಸಿ ಸೂಕ್ತ ಸ್ಥಳದಲ್ಲಿ ಮಾರುಕಟ್ಟೆ ಪ್ರಾಂಗಣವನ್ನು ಸ್ಥಾಪಿಸಲು ಕ್ರಿಯಾ ಯೋಜನೆಯನ್ನು ತಯಾರಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
*ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ*
ಉಪನಿರ್ದೇಶಕರು ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವೆ ಬೆಳಗಾವಿ ಇವರು ಮಾತನಾಡಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಜಾನುವಾರುಗಳ ಆರೋಗ್ಯ ರಕ್ಷಣೆ ತಳಿ ಅಭಿವೃದ್ಧಿಗೆ ಹಾಗೂ ರೈತರ ಆರ್ಥಿಕ ಮಟ್ಟವನ್ನು ಸುಧಾರಿಸಲು ಹಲವಾರು ಸಾಮಾಜಿಕ ಮತ್ತುಆರ್ಥಿಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ 2023-2024 ಹಾಗೂ 2024 -25ರಲ್ಲಿ ಪಶು ಸಂಗೋಪನ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ಮಾನ್ಯರಿಗೆ ತಿಳಿಸಿದರು. ಅದರಂತೆ
• ಜಾನುವಾರುಗಳ ತಳಿ ಅಭಿವೃದ್ಧಿಗಾಗಿ ಕೈಗೊಳ್ಳುವ ಕೃತಕ ಗರ್ಭಧಾರಣೆ, ಕಾರ್ಯಕ್ರಮದಲ್ಲಿ ಡಿಸೆಂಬರ್-2024ರ ವರೆಗೆ 3,25,205 ಕೃತಕ ಗರ್ಭಧಾರಣೆ ಮಾಡಿ ಶೇಕಡ 99 ರಷ್ಟು ಸಾಧನೆ ಮಾಡಲಾಗಿದೆ. ಇಲ್ಲಿಯವರೆಗೆ 96,543 ಜಾನುವಾರುಗಳು ಗರ್ಭದರ್ಶಿದ್ದು 62357 ಕರುಗಳ ಜನನವಾಗಿದೆ.
• ಜಾನುವಾರುಗಳಲ್ಲಿ ಕಂಡುಬರುವ ಸಾಂಕ್ರಾಮಿಕ ರೋಗಗಳಾದ ಕಾಲುಬಾಯಿರೋಗ, ಚಪ್ಪೆಬೇನೆರೋಗ ಗಂಟಲು, ಕರುಳು ಬೇನೆ ರೋಗಗಳ ವಿರುದ್ಧ ಮುಂಜಾಗ್ರತ ಕ್ರಮವಾಗಿ ಜಾನುವಾರುಗಳಲ್ಲಿ ಲಸಿಕೆ ಹಾಕಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲಾಗುತ್ತಿದೆ 2024-25ನೇ ಸಾಲಿನಲ್ಲಿ1235775 ಜಾನುವಾರುಗಳಿಗೆ ಕಾಲು ಬಾಯಿರೋಗದ ವಿರುದ್ಧ ಲಸಿಕೆ ನೀಡಲಾಗಿದೆ 1459420 ಕುರಿ ಮೇಕೆಗಳಿಗೆ ಕರುಳವೇನೆ ವಿರುದ್ಧ ಲಸಿಕೆ ನೀಡಲಾಗಿದೆ 14,54,700 ಕುರಿ ಮೇಕೆಗಳಿಗೆ ಪಿಪಿ ಆರ್ರೋಗದ ವಿರುದ್ಧ ಲಸಿಕೆ ನೀಡಲಾಗಿದೆ 40,5 19 ಹೆಣ್ಣು ಕರುಗಳಿಗೆ ಕಂದರೋಗದ ವಿರುದ್ಧ ಲಸಿಕೆ ನೀಡಲಾಗಿದೆ.
• ಸ್ಥಳೀಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ(ಎಬಿಐಪಿಎಸ್ಎಸ್) ಲಿಂಗ ಆಧಾರಿತ ವೀರ್ಯ ನಳಿಕೆಯನ್ನು ಬಳಸಿ ಕೃತಕ ಗರ್ಭಧಾರಣೆ ಮಾಡಿ ಕೇವಲ ಹೆಣ್ಣು ಕರುಗಳೇ ಹುಟ್ಟುವ ಸಾಮರ್ಥ್ಯ ಹೊಂದಿರುವ ವೀರ್ಯ ನಳಿಕೆಗಳನ್ನು ಬಳಸಿ ಕೃತಕ ಗರ್ಭಧಾರಣೆ ಮಾಡುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಜಿಲ್ಲೆಗೆ 2024-25ನೇ ಸಾಲಿನಲ್ಲಿ ಒಟ್ಟು ಹೆಚ್ಎಫ್ 1500 ಜರಸಿ 800 ಹೀಗೆ ಒಟ್ಟು 2300 ವೀರ ಹೇಳಿಕೆಗಳನ್ನು ನೀಡಿದ್ದು ಇಲ್ಲಿಯವರೆಗೆ 2156 ವೀರ್ಯನಳಿಕಗಳನ್ನು ಬಳಸಿ ಕೃತಕ ಗರ್ಭಧಾರಣೆ ಮಾಡಲಾಗಿದೆ ಡಿಸೆಂಬರ್ 2024 ರವರೆಗೆ 4 ಹೆಣ್ಣು ಕರಗಳ ಜನನವಾಗಿದೆ.
• ಜಾನುವಾರುಗಳ ರೋಗ ನಿರ್ಣಯಿಸಲು ಪಶು ಆಸ್ಪತ್ರೆ ಹುಕ್ಕೇರಿ ಮತ್ತು ಪಶು ಆಸ್ಪತ್ರೆಯ ಚಿಕ್ಕೋಡಿಯಲ್ಲಿ ಹೊಸದಾಗಿ ರೋಗನಿರ್ಣಯ ಪ್ರಯೋಗಾಲಯ ಪ್ರಾರಂಭಿಸಿ ಕ್ರಿಯಾಶೀಲಗೊಳಿಸಲಾಗಿದೆ.
• ರೈತ ಮಹಿಳೆಯರಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು 6% ಬಡ್ಡಿ ದರ ಮೊತ್ತವನ್ನುಸರಕಾರದಿಂದ ಬರಿಸಲಾಗುತ್ತಿದೆ ಈ ಯೋಜನೆ ಅಡಿಯಲ್ಲಿ ಸನ್ 2024-25 ನೇ ಸಾಲಿನಲ್ಲಿ ಏಪ್ರಿಲ್ 2024 ರಿಂದ ಗರಿಷ್ಟ65,000 ರೂಪಾಯಿಗಳಿಗೆ ಮಿತಿಗೊಳಿಸಿ ಹೈನುಗಾರಿಕೆಗಾಗಿ ಸಾಲ ಪಡೆದು ಸಕಾಲದಲ್ಲಿ ಮರುಪಾವತಿಸುವ ರೈತ ಮಹಿಳೆಯರಿಗೆ ಅವರು ಪಾವತಿಸುವ ಬಡ್ಡಿ ದರದಲ್ಲಿ 6%ರಷ್ಟನ್ನು ಸರಕಾರ ಇಲಾಖೆ ಮುಖಾಂತರ ಫಲಾನುಭವಯ ಖಾತೆಗೆ ಜಮೆ ಮಾಡಲಾಗುತ್ತದೆ, ಬೆಳಗಾವಿ ಜಿಲ್ಲೆಗೆ ಈ ಯೋಜನೆ ಅಡಿಯಲ್ಲಿ ಒಟ್ಟು 335 ಫಲಾನುಭವಿಗಳ ಗುರಿ ನಿಗದಿಪಡಿಸಲಾಗಿದ್ದು ಮೂರು ಲಕ್ಷ ಮೂರು ಸಾವಿರ ರೂಪಾಯಿಗಳನ್ನುಬಿಡುಗಡೆ ಮಾಡಲಾಗಿದ್ದುಈವರೆಗೆ 26 ಫಲಾನುಭವಿಗಳಿಗೆ 21,963 ಬಡ್ಡಿಸಹಾಯಧನವನ್ನುನೀಡಲಾಗಿದೆ.
• ಪಶು ಸಂಜೀವಿನಿ ಚಿಕಿತ್ಸಾ ಘಟಕದ ಮೂಲಕ ರೈತರ ಮನೆ ಬಾಗಿಲಿನಲ್ಲಿ ಜಾನುವಾರಗಳಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು ಜಿಲ್ಲೆಯಲ್ಲಿ 17 ಪಶು ಸಂಜೀವಿನಿ ಚಿಕಿತ್ಸಾ ಘಟಕದ ವಾಹನದ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಏಪ್ರಿಲ್ 2024 ರಿಂದ ಡಿಸೆಂಬರ್ 2024ರವರೆಗೆ 8054 ರೈತರ ಕರೆಗಳಿಗೆ ಸ್ಪಂದಿಸಿ 14 204 ಜಾನುವಾರುಗಳಿಗೆ ತುರ್ತು ಚಿಕಿತ್ಸೆಯನ್ನು ನೀಡಲಾಗುತ್ತಿದ್ದು ರೈತರು 1962 ಟೋಲ್ಫ್ರೀ ನಂಬರ್ಗೆ ಕರೆ ಮಾಡುವುದರ ಮುಖಾಂತರ ಈ ಸೇವೆಯನ್ನು ಪಡೆಯಬಹುದಾಗಿದೆ.
• ಜಿಲ್ಲೆಯಲ್ಲಿ ಜಾನುವಾರಗಳಲ್ಲಿ ಕೃತಕ ಗರ್ಭಧಾರಣೆ ಮತ್ತು ಜಾನುವಾರುಗಳ ಚಿಕಿತ್ಸೆಯಲ್ಲಿ ಸಹಾಯ ನೀಡಲು ನಿರುದ್ಯೋಗ ಯುವಕರನ್ನು ಮೈತ್ರಿ ಕಾರ್ಯಕರ್ತರನ್ನಾಗಿ ಹಾಗೂ ನಿರುದ್ಯೋಗ ಯುವತಿಯರನ್ನು ಪಶು ಸಖಿಯಾಗಿ ಕಾರ್ಯನಿರ್ವಹಿಸಲು ತರಬೇತಿ ನೀಡಲಾಗುತ್ತಿದ್ದುಇವರಿಗೆ 226 ಮೈತ್ರಿ ಕಾರ್ಯಕರ್ತರಿಗೆ ಹಾಗೂ 490 ಪಶು ಸಖಿಯರಿಗೆ ತರಬೇತಿ ನೀಡಿ ಕಾರ್ಯೋನ್ಮುಖಗೊಳಿಸಲಾಗಿದೆ ಎಂದು ಉಪ ನಿರ್ದೇಶಕರು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆ ಬೆಳಗಾವಿ ಇವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾಪಂಚಾಯತ್ ಬೆಳಗಾವಿ ಇವರಿಗೆ ವಿವರಣೆ ಮಾಡಿದರು. ಮಾನ್ಯರು ಮಾತನಾಡಿ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ 2024-25 ನೇ ಸಾಲಿನ ಯೋಜನೆಗಳಲ್ಲಿ ಉತ್ತಮ ರೀತಿಯಲ್ಲಿ ಪ್ರಗತಿ ಸಾಧಿಸಿರುವುದನ್ನು ಪರಿಗಣಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
*ಮೀನುಗಾರಿಕೆ ಇಲಾಖೆ*
ಉಪ ನಿರ್ದೇಶಕ ಮೀನುಗಾರಿಕೆ ಇಲಾಖೆ ರವರು ಮಾತನಾಡಿ ಮೀನುಗಾರರಿಗೆ ಸಲಕರಣೆ ಕಿಟ್ ವಿತರಣೆ ಕುರಿತು ಅರ್ಜಿಗಳ ಸ್ವೀಕೃತ ವಾಗಿರುವ ಬಗ್ಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದರು. ಅದೇ ರೀತಿ ಹಿಡಕಲ್ ಮೀನುಮರಿ ಪಾಲನಾ ಕೇಂದ್ರದಲ್ಲಿ ಪ್ರಸ್ತುತ ಸಾಲಿನಲ್ಲಿ ಇಲ್ಲಿಯವರೆಗೆ 16.00ಲಕ್ಷ ಬಿತ್ತನೆ ಮೀನುಮರಿಗಳನ್ನು ಹಾಗೂ ಮಲಪ್ರಭಾ ಮೀನುಮರಿ ಕೇಂದ್ರದಿಂದ 3.00ಲಕ್ಷ ಮೀನುಮರಿಗಳನ್ನು ಇಲ್ಲಿಯವರೆಗೆ ಸರಬರಾಜು ಮಾಡಿರುವ ಬಗ್ಗೆ ಮಾನ್ಯರಿಗೆ ತಿಳಿಸಿದರು.ಅದರ ಜೊತೆಗೆ ಇಲಾಖಾ ಕೆರೆಗಳು ಮೀನು ಪಾಶುವಾರು ಹಕ್ಕಿನ ವಿಲೇವಾರಿ ಪ್ರಗತಿ ಬಗ್ಗೆ ಚರ್ಚಿಸಿದರು.
ಜಿಪಂ ಸಿಇಒ ರಾಹುಲ್ ಶಿಂಧೆ ರವರು ಮಾತನಾಡಿ ಭೂತರಾಮನಹಟ್ಟಿ ಅಕ್ವೇರಿಯಂ ಪ್ರವೇಶ ದ್ವಾರವನ್ನು ಮಾರ್ಪಾಡು ಮಾಡುವುದು. ಸದರಿ ಅಕ್ವೇರಿಯಂ ಪ್ರವೇಶ ಫೀ ಕುರಿತು ಚರ್ಚಿಸಿದರು ಹಾಗೂ ಕೆ.ಎಫ್.ಡಿ.ಸಿ ಕ್ಯಾಂಟೀನ ನಿರ್ಮಿಸಲು ಜಾಗವನ್ನು (ನಿವೇಶನ) ಗುರುತಿಸಲು ಕೂಡಲೇ ಕ್ರಮ ವಹಿಸಹಿಸುವಂತೆ ಉಪ ನಿರ್ದೇಶಕ ಮೀನುಗಾರಿಕೆ ಇಲಾಖೆ ಅಧಿಕಾರಿಗೆ ಸೂಚಿಸಿದರು.
*ರೇಷ್ಮೆ ಇಲಾಖೆ*
ಜಿಪಂ ಸಿಇಒ ರಾಹುಲ್ ಶಿಂಧೆ ರವರು ಮಾತನಾಡತ್ತಾ ಹೊಸ ಹಿಪ್ಪು ನೇರಳೆ ನಾಟಿ ಪ್ರಗತಿ, ರೇಷ್ಮೆ ಮೊಟ್ಟೆ ಚಾಕಿ ಪ್ರಗತಿ, ರೇಷ್ಮೆ ಗೂಡು ಉತ್ಪಾದನೆ ಪ್ರಗತಿ, ರೇಷ್ಮೆ ಅಭಿವೃದ್ಧಿ ಯೋಜನೆ ಪ್ರಗತಿ ಹಾಗೂ ರೇಷ್ಮೆ ಕೃಷಿಕರಿಗೆ ತರಬೇತಿ ಕುರಿತು ಉಪ ನಿರ್ದೇಶಕ ರೇಷ್ಮೆ ಇಲಾಖೆ ಅಧಿಕಾರಿ ಮಹೇಶ ಕುಮಾರ ವಾಘೆ ರವರೊಂದಿಗೆ ಚರ್ಚಿಸಿದಾಗ ಉಪ ನಿರ್ದೇಶಕರು ಈ ಕೆಳಗಿನಂತೆ ತಮ್ಮ ಇಲಾಖೆಯ ಪ್ರಗತಿ ಕುರಿತು ವಿವರಣೆ ನೀಡಿದರು. ಹೊಸ ಹಿಪ್ಪುನೇರಳೆ ನಾಟಿ ಪ್ರಗತಿ - 79.92 ಹೆಕ್ಟೇರ್ ಹಿಪ್ಪುನೇರಳೆ ನಾಟಿ ಆಗಿರುತ್ತದೆ,ರೇಷ್ಮೆ ಮೊಟ್ಟೆ ಚಾಕಿ ಪ್ರಗತಿ - 4.41 ಲಕ್ಷ, ರೇಷ್ಮೆ ಗೂಡು ಉತ್ಪಾದನೆ ಪ್ರಗತಿ - 338 M.T, ರೇಷ್ಮೆ ಅಭಿವೃದ್ಧಿ ಯೋಜನೆ ಪ್ರಗತಿ - 9 ರೇಷ್ಮೆ ಹುಳು ಸಾಕಾಣಿಕೆ ಮನೆ ಸಹಾಯಧನ ಹಾಗೂ 41 ತಾತ್ಕಾಲಿಕ ಶೆಡ್ ಸಹಾಯಧನ ನೀಡಲಾಗಿದೆ. ಅದೇ ರೀತಿ
ರೇಷ್ಮೆ ಕೃಷಿಕರಿಗೆ ತರಬೇತಿ - ಜಿಲ್ಲೆಯಲ್ಲಿ 5 ತರಬೇತಿ ಕಾರ್ಯಕ್ರಮಗಳನ್ನು ರಾಯಾಪೂರ ತರಬೇತಿ ಸಂಸ್ಥೆಯಿಂದ ಆಯೋಜಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
*ತೋಟಗಾರಿಕೆ ಇಲಾಖೆ*
ಜಿಪಂ ಸಿಇಒ ರಾಹುಲ್ ಶಿಂಧೆ ತೋಟಗಾರಿಕೆ ಇಲಾಖೆ ಪ್ರಗತಿ ಕುರಿತು ಮಾತನಾಡಿ ತೋಟಗಾರಿಕೆ ಇಲಾಖೆ ಪ್ರಗತಿ ಉತ್ತಮ ರೀತಿಯಲ್ಲಿದ್ದು, ಬೆಳಗಾವಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ “ಪ್ಲವರ ಶೋ” ಚೆನ್ನಾಗಿ ಮಾಡಿದ್ದಾರೆ ಎಂದು ಉಪ ನಿರ್ದೇಶಕ ತೋಟಗಾರಿಕೆ ಇಲಾಖೆ ಮಹಾಂತೇಶ ಮುರಗೋಡ ರವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದುವರೆದು, ಸರಕಾರದಿಂದ ಹೊಸದಾಗಿ ಜೆಂಕಾರ ಎಂಬ ‘ಹನಿ ಬ್ರ್ಯಾಂಡ್’ ಮಾಡಿದ್ದು ಇದರು ಕುರಿತು ಜಿಲ್ಲೆಯಾದ್ಯಂತ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಬೆಳಗಾವಿಯಲ್ಲಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಎಕ್ಷಪೋರ್ಟ್ ಬಗ್ಗೆ ಬಾಯರ್ ಮತ್ತು ಸೇಲ್ಲರ ಮೀಟ್ ಏರ್ಪಡಿಸುವುದು ಹಾಗೂ ಮ್ಯಾಂಗೋ ಸೀಜನ್ ವೇಳೆಯಲ್ಲಿ ಬೆಳಗಾವಿಯಲ್ಲಿ ಮ್ಯಾಂಗೋ ಮೇಳ ಏರ್ಪಡಿಸುವಂತೆ ಉಪ ನಿರ್ದೇಶಕರು ತೋಟಗಾರಿಕೆ ಇಲಾಖೆ ರವರಿಗೆ ಸೂಕ್ತ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ್ ಅಡವಿಮಠ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ, ಜಂಟಿ ನಿರ್ದೇಶಕ ಕೃಷಿ ಶಿವನಗೌಡ ಪಾಟೀಲ, ಉಪನಿರ್ದೇಶಕ ಮಹಾಂತೇಶ ಮುರಗೋಡ ತೋಟಗಾರಿಕೆ ಇಲಾಖೆ, ಉಪ ನಿರ್ದೇಶಕ ರಾಜು ಕುಲೇರ ಪಶು ಸಂಗೋಪನಾ ಇಲಾಖೆ, ಉಪ ನಿರ್ದೇಶಕ ಸಂತೋಷ ಕೊಪ್ಪದ ಮೀನುಗಾರಿಕೆ ಇಲಾಖೆ, ಉಪ ನಿರ್ದೇಶಕ ಮಹೇಶ ಕುಮಾರ ವಾಘೆ ರೇಷ್ಮೆ ಇಲಾಖೆ,ಸಹಾಯಕ ನಿರ್ದೇಶಕ ಕೃಷಿ ಇಲಾಖೆ, ಉಪ ನಿರ್ದೇಶಕ ಕೃಷಿ ಮಾರುಕಟ್ಟೆ, ಲೀಡ್ ಬ್ಯಾಂಕ್ ಪ್ರತಿನಿಧಿ, ನಬಾರ್ಡ ಪ್ರತಿನಿಧಿ ಹಾಗೂ ಇತರೆ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.