ಜಿಲ್ಲೆ

ಅಸ್ಮಿತೆ ವ್ಯಾಪಾರ ಮೇಳ: 4 ದಿನದಲ್ಲಿ 1.4 ಕೋಟಿ ರೂ. ವಹಿವಾಟು

ಮಂಜುನಾಥ ಕೋಳಿಗುಡ್ಡ

-ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ರಾಹುಲ ಶಿಂಧೆ ಮಾಹಿತಿ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಮಹಿಳಾ ಸ್ವ-ಸಹಾಯ ಸಂಘಗಳ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಆಸ್ಮತೆ ವ್ಯಾಪಾರ ಮಳೆದಲ್ಲಿ ಕೇವಲ ನಾಲ್ಕು ದಿನದಲ್ಲಿ 1.4 ಕೋಟಿ ರೂ. ವ್ಯಾಪಾರವಾಗಿದೆ ಎಂದು ಜಿಪಂ ಸಿಇಒ ರಾಹುಲ ಶಿಂಧೆ ಹೇಳಿದರು.

ನಗರದ ಸರ್ದಾರ ಮೈದಾನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜೀವನೋಪಾಯ ಅಭಿಯಾನ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಸಹಭಾಗಿತ್ವದಲ್ಲಿ ಡಿ.26ರಿಂದ ಹಮ್ಮಿಕೊಂಡಿರುವ ಆಸ್ಮಿತೆ ವ್ಯಾಪಾರ ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರಕಿದೆ ಎಂದರು.

ಸರ್ದಾರ ಮೈದಾನದಲ್ಲಿ ಆರಂಭವಾಗಿರುವ ಆಸ್ಮಿತೆ ವ್ಯಾಪಾರ ಮೇಳದಲ್ಲಿ 150 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 10 ಆಹಾರ ಮೇಳದ ಮಳಿಗೆಗಳು ಮತ್ತು 50 ಖಾದಿ ಉತ್ಸನ್ನಗಳ ಮಳಿಗೆಗಳನ್ನು ಒಳಗೊಂಡಿದೆ. ಈ ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸ್ವ ಸಹಾಯ ಗುಂಪಿನ ಮಹಿಳೆಯರು ತಮ್ಮ ಜಿಲ್ಲೆಯ ಪ್ರಮುಖ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದಾರೆ. ಈ ಮೇಳದ ಲಾಭಾಂಶ ಸಂಪೂರ್ಣ ಮಹಿಳಾ ಸ್ವಹಾಯ ಸಂಘಗಳಿಗೆ ಸಲ್ಲುತ್ತದೆ. ಹಾಗಾಗಿ ಹೆಚ್ಚಿನ ಭಾಗಿಸಿ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ವಿನಂತಿಸಿದರು.

ಶಾಸಕ ಆಸೀಫ್ ಸೇಠ್ ಮಾತನಾಡಿ, ಈ ಮೇಳದ ಮಳಿಗೆಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸ್ವ ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳಾದ ಮರದ ಗೊಂಬೆಗಳು, ಆಟದ ಸಾಮಾನುಗಳು, ಸೀರೆಗಳು, ಖಾದಿ ಉತ್ಪನಗಳು ಹೀಗೆ ವಿವಿಧ ಉತ್ಪನ್ನಗಳನ್ನು ಲಭ್ಯವಿವೆ. ಖಾದಿ ಬಟ್ಟೆಗಳನ್ನು ಹೆಚ್ಚುಚ್ಚು ಬಳಕೆ ಮಾಡುವ ಮೂಲಕ ಖಾದಿ ಉದ್ಯಮ ಉಳಿಸಿ ಬೆಳಸಬೇಕು. ಸರ್ಕಾರವು ಎಲ್ಲ ಉತ್ಪನ್ನಗಳಿಗೆ ಆಲ್‌ನೈಲ್ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.

ಜಿಪಂ ಯೋಜನಾ ನಿರ್ದೇಶಕ ರವೀಂದ್ರ ಬಂಗಾರೆಪ್ಪನವರ, ಜಿಲ್ಲಾ ಖಾದಿ ಅಭಿವೃದ್ಧಿ ಅಧಿಕಾರಿ ಸಾವಿತ್ರಿ ದಳವಾಯಿ, ಎಸ್.ಬೆಳಗೌಡ ಇತರರಿದ್ದರು.