ಬೆಳಗಾವಿ : ವಿದ್ಯಾರ್ಥಿಗಳಿಗೆ ಪ್ರೌಡ ಶಾಲಾ ಹಂತದಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ, ಸಾಮಾನ್ಯ ಜ್ಞಾನ ಜೊತೆಗೆ ಮಾನಸಿಕ ಸಾಮರ್ಥ್ಯ ವಿಷಯಗಳಲ್ಲಿ ಪ್ರತಿಭಾನ್ವೇಷಣೆ ಪರೀಕ್ಷೆ ನಡೆಸಲು
ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಪಂ ಸಿಇಒ ರಾಹುಲ ಶಿಂಧೆ ಸೂಚಿಸಿದೆಉ.
ನಗರದ ಜಿಲ್ಲಾ ಪಂಚಾಯತ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಲ್ಲ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ಎಲ್ಲ ಸರಕಾರಿ ಪ್ರೌಡ ಶಾಲಾ ಮುಖ್ಯೋಪಾಧ್ಯಾಯರಿಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆ ಹಾಗೂ ಪ್ರತಿಭಾನ್ವೇಷಣೆ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
*ಮಗುವಿನ ಶೈಕ್ಷಣಿಕ ಪ್ರಗತಿಗೆ ಸಂಚಿತ ದಾಖಲೆ ಅವಶ್ಯ* :
ಜಿಪಂ ಸಿಇಒ ರಾಹುಲ್ ಶಿಂಧೆ ಮಾತನಾಡಿ ಪ್ರೌಡ ಶಾಲೆ 8ನೇ ತರಗತಿಗೆ ದಾಖಲಾದ ಮಗುವಿನ ಶೈಕ್ಷಣಿಕ ಪ್ರಗತಿಯನ್ನು ದಾಖಲಿಸಲು ರಜಿಸ್ಟರ ನಿರ್ವಹಿಸಿ, ಮಗುವಿನ ವರ್ಷವಾರು ಪ್ರಗತಿ ದಾಖಲಿಸುವುದು. ಸದರಿ ದಾಖಲೆಯನ್ನು ಮುಖ್ಯ ಶಿಕ್ಷಕರು ನಿರ್ವಹಿಸಿ ಪಾಲಕರಿಗೆ ಮಗುವಿನ ಪ್ರಗತಿಯ ಕುರಿತು ಮನವರಿಕೆ ಮಾಡಿಕೊಡುವುದು ಹಾಗೂ ಎಸ್ ಎಸ್ ಎಲ್ ಸಿ ನಂತರದಲ್ಲಿ ಮಗುವಿಗೆ ಸಿಗುವ ಉದ್ಯೋಗಾವಕಾಶಗಳ ಕುರಿತು ಹತ್ತನೇ ತರಗತಿಯಲ್ಲಿ ಪರಿಚಯಿಸುವುದು. ಭವಿಷ್ಯದಲ್ಲಿ ವಿದ್ಯಾರ್ಥಿ ಹೊಂದಿದ ಉದ್ಯೋಗದ ಕುರಿತು ಶಾಲಾ ಹಂತದಲ್ಲಿ ದಾಖಲೀಕರಣ ಮಾಡಲು ತಿಳಿಸಿದರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೀತಾರಾಮ್ ರವರು ಮಾತನಾಡುತ್ತಾ ಅಖಂಡ ಬೆಳಗಾವಿ ಜಿಲ್ಲೆಯಲ್ಲಿ ಮಾನ್ಯರ ಮಾರ್ಗದರ್ಶನದಂತೆ ಕಲಿಕಾ ಸುಧಾರಣೆಗೆ ಪ್ರತಿ ಸೋಮವಾರ ಪಾಲಕರ ಮನೆ ಬೇಟಿ, ಪ್ರತಿ 4ನೇ ಶನಿವಾರ ಪಾಲಕರ ಸಭೆ, ಗೈರು ಮಕ್ಕಳ ಸುಧಾರಣೆಗೆ ಅಭಿಪ್ರೇರಣಾ ತರಗತಿ/ಕಾರ್ಯಾಗಾರಗಳ ಆಯೋಜನೆ, ವಿಶೇಷ ತರಗತಿ, ವಿಷಯವಾರು ಜಿಲ್ಲಾ ಮತ್ತು ತಾಲ್ಲೂಕಾ ಹಂತದಲ್ಲಿ ನೀಲನಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಕಾರ್ಯಾಗಾರ ಆಯೋಜನೆ ಮತ್ತು ಕಟ್ಟುನಿಟ್ಟಿನ ಅನುಷ್ಠಾನದ ಕುರಿತು ಸಭೆಗೆ ಪ್ರಸ್ತಾಪಿಸಿದರು.
*ಟ್ಯಾಲೆಂಟ್ ಸರ್ಚ್ ಪರೀಕ್ಷೆ ಸಿದ್ದತೆ* :
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸರಕಾರಿ ಪ್ರೌಡ ಶಾಲೆಯ ಹಾಗೂ ವಸತಿ ಶಾಲೆಗಳ 9 ಮತ್ತು 10 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿಭಾನ್ವೇಷಣೆ ಪರೀಕ್ಷೆಯನ್ನು ಕೈಗೊಳ್ಳುವ ಮೂಲಕ ಮಕ್ಕಳನ್ನು ಸ್ಪರ್ಧಾತ್ಮಕ ಯುಗಕ್ಕೆ ಅಣಿಗೋಳಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಪ್ರೌಡಾ ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ಮಾನ್ಯರು ನೀಡಿದರು. ಮೊದಲು ಶಾಲಾ ಹಂತದಲ್ಲಿ ಮಕ್ಕಳಿಗೆ ಸ್ಫರ್ಧೆಯನ್ನು ಏರ್ಪಡಿಸಿ ತಾಲೂಕಿನಿಂದ 30 ವಿದ್ಯಾರ್ಥಿಗಳನ್ನುಆಯ್ಕೆ ಮಾಡಿ, ಜಿಲ್ಲಾ ಹಂತದಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 100 ವಿದ್ಯಾರ್ಥಿಗಳನ್ನು ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಸನ್ಮಾನಿಸುವುದಾಗಿ ಸಭೆಗೆ ತಿಳಿಸಿದರು.
ಸದರಿ ಕಾರ್ಯಕ್ರಮದಲ್ಲಿ ಜಿಪಂ ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ್ ಅಡವಿಮಠ, ಬೆಳಗಾವಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಲೀಲಾವತಿ ಎಸ್ ಹಿರೇಮಠ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸೀತಾರಾಮ್, ಮಣ್ಣೂರ ಡಯಟ್ನ ಪ್ರಾಂಶುಪಾಲರಾದ ಬಸವರಾಜ್ ನಾಲತವಾಡ, ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕನ್ನೋಳಿ, ಜಿಲ್ಲಾ ಪರಿಶಿಷ್ಟ ಪಂಗಡಗಳ ಅಧಿಕಾರಿ ಬಸವರಾಜ್ ಕುರಿಹುಲಿ, ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿ ಅಬ್ದುಲ್ ರಸೀಬ್ ಮಿರಜಣ್ಣವರ, ಹಿರಿಯ ಉಪನ್ಯಾಸಕರು ಹಾಗೂ ಜಿಲ್ಲಾ ಟ್ಯಾಲೆಂಟ್ ಸರ್ಚ್ ನೋಡಲ್ ಅಧಿಕಾರಿ ಆಂಜನೇಯ ಆರ್.ಕೆ ಮುಂತಾದವರು ಹಾಜರಿದ್ದರು.