ಜಿಲ್ಲೆ

ಶತಕ ಬಾರಿಸಿದ ಟೊಮ್ಯಾಟೊ ದರ

ಸಂತೋಷ ಮುರಡಿ ಮುಂಡರಗಿ
ಪ್ರತಿ ಮನೆಯಲ್ಲಿ ಆಹಾರ ತಯಾರಿಕೆಯಲ್ಲಿ ಟೊಮ್ಯಾಟೊ ಬಳಸುವುದು ಸಾಮಾನ್ಯ. ಇದು ಅಡುಗೆಯ ರುಚಿ ಹೆಚ್ಚಿಸುತ್ತದೆ. ಪೋಷಕಾಂಶ ಒಳಗೊಂಡಿರುವ ಟೊಮ್ಯಾಟೊ ಆರೋಗ್ಯಕ್ಕೆ ತುಂಬ ಒಳ್ಳೆಯದು. ಇಂತಹ ಟೊಮ್ಯಾಟೊ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈಗ ಕೆ.ಜಿಗೆ ೧೦೦ ರೂಪಾಯಿ ದಾಟಿದೆ.
ವಾರದ ಹಿಂದೆ ಪ್ರತಿ ಕೆಜಿಗೆ ೫೦ ರಿಂದ ೬೦ ರೂ.ಗೆ ಮಾರಾಟವಾಗಿದ್ದ ಟೊಮ್ಯಾಟೊ ಈಗ ೧೦೦ ರಿಂದ ೧೨೦ರೂ.ಗೆ ಮಾರಾಟವಾಗುತ್ತಿದೆ. ಸಣ್ಣ ಪ್ರಮಾಣದಲ್ಲಿನ ಟೊಮ್ಯಾಟೊ ಕೆಜಿಗೆ ೧೦೦ ರೂಪಾಯಿಗೆ ಮಾರಾಟವಾಗುತ್ತಿದೆ. ತಾಲೂಕಿನಲ್ಲಿ ಟೊಮ್ಯಾಟೊ ಇಳುವರಿ ಪೂರ್ಣಪ್ರಮಾಣ ಕುಸಿತ ಕಂಡ ಹಿನ್ನೆಲೆಯಲ್ಲಿ ಪಟ್ಟಣದ ಮಾರುಕಟ್ಟೆಗೆ ದಾವಣಗೆರೆ, ಕೋಲಾರ, ಮಹಾರಾಷ್ಟ್ರ ಮೊದಲಾದ ಕಡೆಗಳಿಂದ ಟೊಮ್ಯಾಟೊ ಬರುತ್ತಿದೆ. ಹೀಗಾಗಿ ದರ ಹೆಚ್ಚಳ ಕಂಡಿದೆ. ಹಾಗೆಯೇ ಬೇಸಿಗೆಯಲ್ಲಿ ಸಮರ್ಪಕವಾಗಿ ಇಳುವರಿ ಬರದಿರುವುದರಿಂದಲೂ ದರ ಏರಿಕೆಯಾಗುತ್ತಿದೆ.
ಮಳೆಗಾಲದಲ್ಲಿ ಸಾಮಾನ್ಯವಾಗಿ ತೇವಾಂಶದಿಂದ ಬೆಳೆ ಹಾನಿಯಾಗುವುದು ಸಹಜ. ಹೀಗಾಗಿ ಟೊಮ್ಯಾಟೊ ಬೆಳೆ ಹಾನಿಯಾದರೆ ಈಗಿರುವಂತ ದರಕ್ಕಿಂತ ಮತ್ತಷ್ಟು ದರ ಹೆಚ್ಚಳವಾಗಬಹುದೇ? ಎಂಬ ಆತಂಕ ಗ್ರಾಹಕರಲ್ಲಿದೆ. ಮುಂದಿನ ದಿನದಲ್ಲಿ ಟೊಮ್ಯಾಟೊ ದರ ಹೆಚ್ಚಳವಾಗುತ್ತದೆಯೋ ಅಥವಾ ಇಳಿಕೆಯಾಗುತ್ತದೆಯೋ ಕಾದು par ನೋಡಬೇಕಿದೆ.---ಬಾಕ್ಸ್---
ವಿವಿಧ ತರಕಾರಿ ದರ ಏರಿಕೆ…
ಟೊಮ್ಯಾಟೊ ದರ ಮಾತ್ರವಲ್ಲ, ನಿತ್ಯದ ಅಡುಗೆಗೆ ಅವಶ್ಯವಿರುವ ವಿವಿಧ ತರಕಾರಿ ಬೆಲೆಯೂ ಹೆಚ್ಚಳಗೊಂಡಿದೆ. ಕಳೆದೊಂದು ತಿಂಗಳಿಂದ ಬೆಲೆ ಏರಿಕೆಯಾಗುತ್ತಿದೆ. ಪ್ರತಿ ಕೆಜಿ ಉಳ್ಳಾಗಡ್ಡಿಗೆ ಹಿಂದೆ ೨೦ ರೂ.ಇತ್ತು. ಈಗ ೪೦ ರೂ. ಇದೆ. ೪೦ ರೂ.ಗೆ ಇದ್ದಂತ ಕ್ಯಾರೆಟ್ ೬೦ ರಿಂದ ೮೦ ರೂ.ಆಗಿದೆ. ೪೦ ರೂ.ಇದ್ದಂತ ಸೌತೆಕಾಯಿ ೬೦ ರಿಂದ ೮೦ ರೂ.ಗೆ ತಲುಪಿದೆ. ದೊಣ್ಣೆಮೆಣಸಿನಕಾಯಿ ಕೆಜಿಗೆ ೧೦೦ರೂ. ಇದೆ. ಇನ್ನೂ ಕತಂಬರಿ ದೊಡ್ಡ ಕಟ್ಟು ೪೦ ರೂ., ಮೆಂತೆ ೪೦ ರೂ. ಇದೆ. ಒಟ್ಟಾರೆ ತರಕಾರಿ ದರ ಏರಿಕೆ ಗ್ರಾಹಕರಿಗೆ ತಲೆಬಿಸಿ ಮಾಡಿದೆ.

ಟೊಮ್ಯಾಟೊ ಅಡುಗೆಗೆ ಅತಿಅವಶ್ಯ. ಸದ್ಯ ದರವನ್ನು ಕೇಳಿದರೆ ಟೊಮ್ಯಾಟೊ ಖರೀದಿಸುವುದಾದರೂ ಹೇಗೆ? ಎಂಬತಾಗಿದೆ. ಹುಣಸೆಹಣ್ಣು ಹಾಕುವುದನ್ನು ಬಿಟ್ಟು ಟೊಮ್ಯಾಟೊಗೆ ಹೊಂದಿಕೊಂಡಿದ್ದೇವೆ. ಈಗ ದರ ಹೆಚ್ಚಳದಿಂದ ಬೇಸರವಾಗಿದೆ. ವಿವಿಧ ತರಕಾರಿಗಳ ದರವೂ ಏರಿಕೆಯಾಗಿದೆ. ಹೀಗಾದರೆ ಜೀವನ ನಡೆಸುವುದು ಕಷ್ಟವಾಗುತ್ತದೆ.ಚ್ಟ ಡಿ.ವಿ. ಪವಾರ, ಗ್ರಾಹಕ par ಮುಂಡರಗಿ---ಕೋಟ್---ಈ ಭಾಗದಲ್ಲಿ ಟೊಮ್ಯಾಟೊ ಇಳುವರಿ ಕಡಿಮೆಯಾಗಿದೆ. ಬೇರೆ ಭಾಗಗಳಿಂದ ಟೊಮ್ಯಾಟೊ ಬರುತ್ತಿದೆ. ಹೀಗಾಗಿ ದರ ಹೆಚ್ಚಳವಾಗಿದೆ. ಮಳೆ ಪ್ರಾರಂಭವಾಗಿದ್ದರಿಂದ ಇರುವಂತಹ ಟೊಮ್ಯಾಟೊ ಕೆಡುತ್ತದೆ. ಇದರಿಂದ ಸದ್ಯ ೧೦೦ ರೂ.ಗೆ ತಲುಪಿದೆ. ಟೊಮ್ಯಾಟೊ ಜತೆಗೆ ಕೆಲವೊಂದು ತರಕಾರಿ ದರವೂ ಹೆಚ್ಚಳವಿದೆ.-ಬಸವರಾಜ ಹವಳದ, ತರಕಾರಿ ವ್ಯಾಪಾರಿ, ಮುಂಡರಗಿ