ಸಾಂದರ್ಭಿಕ ಚಿತ್ರ 
ಜಿಲ್ಲೆ

3ನೇ ಹಂತದ ನಮ್ಮ ಮೆಟ್ರೋ ಯೋಜನೆಗೆ ಗ್ರೀನ್​ ಸಿಗ್ನಲ್​; ಎರಡು ಕಾರಿಡಾರ್​ ನಿರ್ಮಾಣಕ್ಕೆ ಕ್ಯಾಬಿನೆಟ್​ ಅನುಮೋದನೆ

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಮ್ಮ ಮೆಟ್ರೋ ಯೋಜನೆಯ ಹಂತ&3ರ ಕಾರಿಡಾರ್​-1 ಹಾಗೂ ಕಾರಿಡಾರ್​-2 ಮಾರ್ಗ ನಿರ್ಮಾಣಕ್ಕೆ ಅನುಮೋದನೆ ಲಭಿಸಿದೆ. ಯೋಜನೆಯ ಒಟ್ಟು ಒಟ್ಟು ವೆಚ್ಚ 15,611 ಕೋಟಿ ರೂ. ಆಗಿರಲಿದೆ. ಇದರೊಂದಿಗೆ ಬೆಂಗಳೂರಿನ ಮೆಟ್ರೋ ಮಾರ್ಗ ಇನ್ನಷ್ಟು ವಿಸ್ತರಣೆಯಾಗಲಿದೆ. 2029ರ ವೇಳೆಗೆ ಹೊಸ ಮಾರ್ಗ ಕಾರ್ಯಾರಂಭಿಸುವ ನಿರೀಕ್ಷೆ ಹೊಂದಲಾಗಿದೆ.

3ನೇ ಹಂತದ ಕಾರಿಡಾರ್​&1 ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರದವರೆಗೆ ಇರಲಿದೆ. 32.15 ಕಿ.ಮೀ. ಉದ್ದದ ಈ ಮಾರ್ಗದಲ್ಲಿ 21 ನಿಲ್ದಾಣಗಳು ಬರಲಿವೆ. ಕಾರಿಡಾರ್​&2ರಲ್ಲಿ ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆ ವರೆಗೆ ಇರಲಿದೆ. 12.50 ಕಿ.ಮೀ ಉದ್ದದ ಈ ಮಾರ್ಗದಲ್ಲಿ 9 ನಿಲ್ದಾಣಗಳು ಇರಲಿವೆ. ಪ್ರಮುಖ 11 ನಿಲ್ದಾಣಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.

3ನೇ ಹಂತದಲ್ಲಿ ಪಶ್ಚಿಮ ಭಾಗದ 44.65 ಕಿ.ಮೀ ಹೊಸ ಮೆಟ್ರೋ ಮಾರ್ಗಗಳು ಜೋಡಣೆಯಾಗುತ್ತವೆ. ನಗರದ ಪ್ರಮುಖ ಪ್ರದೇಶಗಳಾದ ಪೀಣ್ಯ ಕೈಗಾರಿಕಾ ಪ್ರದೇಶ, ಬನ್ನೇರುಟ್ಟ ರಸ್ತೆ ಮತ್ತು ಹೊರ ವರ್ತುಲ ರಸ್ತೆಯಲ್ಲಿನ ಐಟಿ&ಬಿಟಿ ಕಂಪನಿಗಳು, ತುಮಕೂರು ರಸ್ತೆ, ಔಟರ್​ ರಿಂಗ್​ರಸ್ತೆ, ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ (ಬಿಇಎಲ್​), ಪಿಇಎಸ್​ ನಂತಹ ಪ್ರಮುಖ ಶಿಣ ಸಂಸ್ಥೆಗಳಿಗೆ ಸಂಪರ್ಕ ಸಾಧ್ಯವಾಗಲಿದೆ. ಅಂಬೇಡ್ಕರ್​ ಕಾಲೇಜು, ಪಾಲಿಟೆಕ್ನಿಕ್​ ಕಾಲೇಜು, ದಯಾನಂದ ಸಾಗರ ವಿಶ್ವವಿದ್ಯಾಲಯ, ಮಾಗಡಿ ರಸ್ತೆ ಮತ್ತು ಸುತ್ತಲಿನ ವಿವಿಧ ಪ್ರದೇಶಗಳಿಗೆ ಸಂಪರ್ಕವನ್ನು ಒದಗಿಸುತ್ತದೆ.

ಸಂಚಾರ ದಟ್ಟಣೆಯಲ್ಲಿ ಕಡಿತ

ಮೆಟ್ರೊ ರೈಲು ದ ಪರ್ಯಾಯ ರಸ್ತೆ ಸಾರಿಗೆಯಾಗಿ ಮತ್ತು ಬೆಂಗಳೂರು ನಗರದಲ್ಲಿ ಮೆಟ್ರೊ ರೈಲು ಜಾಲಕ್ಕೆ ವಿಸ್ತರಣೆಯಾಗಿ ಹಂತ&3 ನೊಂದಿಗೆ ಸಂಚಾರ ದಟ್ಟಣೆಯನ್ನು ನಿವಾರಿಸುವ ನಿರೀಕ್ಷೆಯಿದೆ ಮತ್ತು ಹೊರ ವರ್ತುಲ ರಸ್ತೆ ಪಶ್ಚಿಮ, ಮಾಗಡಿ ರಸ್ತೆ ಮತ್ತು ಹೆಚ್ಚು ದಟ್ಟಣೆಯ ಮಾರ್ಗಗಳಲ್ಲಿ ವಿಶೇಷವಾಗಿ ಪರಿಣಾಮ ಬೀರುತ್ತದೆ. ನಗರದ ಇತರ ಪ್ರಮುಖ ರಸ್ತೆಗಳು. ರಸ್ತೆ ಸಂಚಾರದಲ್ಲಿನ ಕಡಿತವು ವಾಹನಗಳ ಸುಗಮ ಸಂಚಾರಕ್ಕೆ ಕಾರಣವಾಗಬಹುದು, ಪ್ರಯಾಣದ ಸಮಯದಲ್ಲಿ ಕಡಿತ, ಒಟ್ಟಾರೆ ರಸ್ತೆ ಸುರತೆಯನ್ನು ಹೆಚ್ಚಿಸುವುದು ಇತ್ಯಾದಿ.

ಕಾರಿಡಾರ್​-1 ನಿಲ್ದಾಣಗಳು

ಜೆ.ಪಿ. ನಗರ 4ನೇ ಹಂತ, ಜೆ.ಪಿ ನಗರ 5ನೇ ಹಂತ, ಜೆ.ಪಿ ನಗರ, ಕದಿರೇನಹಳ್ಳಿ, ಕಾಮಾಕ್ಯ ಬಸ್​ ನಿಲ್ದಾಣ, ಹೊಸಕೆರೆ ಹಳ್ಳಿ ಕ್ರಾಸ್​, ಪಿಇಎಸ್​ ಕಾಲೇಜು, ಮೈಸೂರು ರಸ್ತೆ ನಾಗರಬಾವಿ ವೃತ್ತ, ವಿನಾಯಕ ಬಡಾವಣೆ, ಅಂಬೇಡ್ಕರ್​ ಇನ್ಸ್ಟಿಟ್ಯೂಟ್​ ಆಫ್​ ಇಂಜಿನಿಯರಿಂಗ್​, ಬಿಡಿಎ ಕಾಂಪ್ಲೆಕ್ಸ್​, ಸುಮನಹಳ್ಳಿ ಕ್ರಾಸ್​, ಚೌಡೇಶ್ವರಿ ನಗರ, ಕಂಠೀರವ ಸ್ಟುಡಿಯೋ, ಪೀಣ್ಯ, ಬಾಹುಬಲಿ ನಗರ, ಬಿಇಎಲ್​ ವೃತ್ತ, ಪಟೇಲಪ್ಪ ಬಡಾವಣೆ, ಹೆಬ್ಬಾಳ, ಕೆಂಪಾಪುರ.

ಕಾರಿಡಾರ್​-2 ನಿಲ್ದಾಣಗಳು

ಹೊಸ ಹಳ್ಳಿ, ಕೆಎಚ್​ಬಿ ಕಾಲನಿ, ವಿನಾಯಕ ನಗರ, ಸುಮನಹಳ್ಳಿ ಕ್ರಾಸ್​, ಸುಂಕದ ಕಟ್ಟೆ, ಹೇರೋಹಳ್ಳಿ, ಬ್ಯಾಡರ ಹಳ್ಳಿ, ಫಾರೆಸ್ಟ್​ ಗೇಟ್​, ಕಡಬಗೆರೆ.

ಸಂಚಾರ ದಟ್ಟಣೆ ನಿಯಂತ್ರಣ

ಹಂತ-3 ಮಾರ್ಗಗಳಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾದರೆ ದೊಡ್ಡ ಪ್ರಮಾಣದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರಲಿದೆ. ಕಾರಿಡಾರ್​&1, 2 ಮಾರ್ಗಗಳು ಹೊರವರ್ತುಲ ರಸ್ತೆ ಹಾಗೂ ಮಾಗಡಿ ರಸ್ತೆಯಲ್ಲಿ ನಿತ್ಯ ಉಂಟಾಗುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸಲಿದೆ.

ಮೆಟ್ರೋ ಜಾಲ 220.20 ಕಿ.ಮೀ.!

ಪ್ರಸ್ತುತ ನಮ್ಮ ಮೆಟ್ರೋ 73.81 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿದೆ. ವಷಾಂತ್ಯದಿಂದ ಹಳದಿ ಮಾರ್ಗದಲ್ಲಿ ಸಂಚಾರ ಆರಂಭವಾಗುವ ನಿರೀಕ್ಷೆಯಿದ್ದು, ಈ ಮಾರ್ಗ 19.15 ಕಿ.ಮೀ. ಹೊಂದಿದೆ. ಇದರೊಂದಿಗೆ 21.26 ಕಿ.ಮೀ. ಉದ್ದದ ಗುಲಾಬಿ ಮಾರ್ಗ ಹಾಗೂ 58.18 ಕಿ.ಮೀ ನೀಲಿ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಒಟ್ಟಾರೆ ಹಂತ-3 ಮಾರ್ಗಗಳಲ್ಲಿ ಕಾರ್ಯಾಚರಣೆ ಆರಂಭವಾಗುವ ವೇಳೆಗೆ ರಾಜಧಾನಿಯಲ್ಲಿ ನಮ್ಮ ಮೆಟ್ರೋ ಸೇವೆ 220.20 ಕಿ.ಮೀ. ಇರಲಿದೆ.

2029ಕ್ಕೆ ಕಾರ್ಯಾರಂಭ!

ನಮ್ಮ ಮೆಟ್ರೋ ಹಂತ-3 ಸುಮಾರು 44.65 ಕಿ.ಮೀ. ಮಾರ್ಗವನ್ನು ಒಳಗೊಂಡಿದ್ದು, ಪ್ರಮುಖವಾಗಿ ಬೆಂಗಳೂರಿನ ದಕ್ಷಿಣ ಭಾಗದ ಪ್ರದೇಶಗಳಿಗೆ ಸಂಪರ್ಕ ಸಾಧಿಸುತ್ತದೆ. ಪೀಣ್ಯ ಕೈಗಾರಿಕಾ ಪ್ರದೇಶ, ಬನ್ನೇರು ಟ್ಟ ರಸ್ತೆ, ಹೊರ ವರ್ತುಲ ರಸ್ತೆ ಸೇರಿ ಹಲವು ಕೈಗಾರಿಕಾ ಕೇಂದ್ರ, ಹಲವು ಶಿಕ್ಷಣ ಸಂಸ್ಥೆಗಳಿಗೆ ನೇರ ಪ್ರಯಾಣ ಸಾಧ್ಯವಾಗಿಸುತ್ತದೆ. 2029ರ ವೇಳೆಗೆ ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಗುವ ನಿರೀೆಯಿದೆ.

ಹೊಸದಾಗಿ ಎರಡು ಕಾರಿಡಾರ್​ಗಳನ್ನು ಅನುಮೋದಿಸುವ ಮೂಲಕ ನಮ್ಮ ಮೆಟ್ರೋ ಜಾಲವನ್ನು ಇನ್ನಷ್ಟು ವಿಸ್ತರಿಸಲಾಗಿದೆ. ಇದರಿಂದ ಬೆಂಗಳೂರಿನ ಮೂಲಸೌಕರ್ಯಕ್ಕೆ ಉತ್ತೇಜನ ಸಿಗಲಿದೆ. ಹೊಸದಾಗಿ 30 ನಿಲ್ದಾಣಗಳು ಸೇರ್ಪಡೆಯಾಗಲಿದ್ದು, ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿದ್ದು, ಈಸ್​ ಆ್​ ಲಿವಿಂಗ್​ ಅನ್ನು ಹೆಚ್ಚಿಸುತ್ತದೆ.

-ನರೇಂದ್ರ ಮೋದಿ, ಪ್ರಧಾನಮಂತ್ರಿ

ನಮ್ಮ ಮೆಟ್ರೋ ರೈಲು ಯೋಜನೆ 3ನೇ ಹಂತದ 2 ಕಾರಿಡಾರ್​ಗಳನ್ನು ಅನುಮೋದಿಸುವ ಮೂಲಕ ಕೇಂದ್ರ ಸರ್ಕಾರ ಕರ್ನಾಟಕದ ರಾಜಧಾನಿಗೆ ಮಹತ್ತರ ಕೊಡುಗೆ ನೀಡಿದೆ. ಕೇಂದ್ರ ಸರ್ಕಾರದ ಈ ಕಾರ್ಯತತ್ಪರತೆ ಬೆಂಗಳೂರಿನ ಟ್ರಾಫಿಕ್​ ಸಮಸ್ಯೆ ಕಡಿಮೆ ಮಾಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳಿಂದ ಸಮರ್ಥ ಆಡಳಿತ ನಡೆಸುವುದರೊಂದಿಗೆ ರಾಷ್ಟ್ರದ ಸಂಪೂರ್ಣ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ.

-ಪ್ರಲ್ಹಾದ ಜೋಶಿ, ಕೇಂದ್ರ ಸಚಿವ

ಕೇಂದ್ರ ಸರ್ಕಾರವು ಬೆಂಗಳೂರು ನಗರದ ಜನತೆಗೆ ನೀಡಿರುವ ವರ ಮಹಾಲ್ಮ ಹಬ್ಬದ ಉಡುಗೊರೆ ಎಂದೇ ನಾನು ಭಾವಿಸಿದ್ದೇನೆ. ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಸಾಕಷ್ಟು ಉತ್ತೇಜನ ನೀಡುತ್ತಿರುವ ಮಾನ್ಯ ಪ್ರಧಾನಿಗಳಿಗೆ ನನ್ನ ಧನ್ಯವಾದಗಳು.

-ಎಚ್​.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

ಹಂತ-3ರ ನಿರ್ಮಾಣಕ್ಕೆ ಒಂದೂವರೆ ವರ್ಷಗಳ ಹಿಂದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಡಿಪಿಆರ್​ ಸಿದ್ದಪಡಿಸಿ, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಯೋಜನೆಗೆ ಕಳೆದ ವಾರ ಕೇಂದ್ರ ಹಣಕಾಸು ಸಚಿವಾಲಯದಿಂದ ಒಪ್ಪಿಗೆ ಸಿಕ್ಕಿತ್ತು. ಅಂತಿಮವಾಗಿ ಪರಿಷತ ಡಿಪಿಆರ್​ ಸಲ್ಲಿಸಿದ ತಿಂಗಳೊಳಗೆ ಅನುಮೋದನೆ ಲಭಿಸಿದೆ.

- ತೇಜಸ್ವಿ ಸೂರ್ಯ, ಸಂಸದ