ಜಿಲ್ಲೆ

ಕೇಂದ್ರ ಸರ್ಕಾರ ಭದ್ರತೆ ಒದಗಿಸಲಿ

ಎಂ.ಎಸ್​.ಹಿರೇಮಠ ಬೆಳಗಾವಿ

ಸವದತ್ತಿ: ಕಾಶ್ಮೀರದ ಪಹಲ್ಗಾಮ್​ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿ ಖಂಡಿಸಿ ಉಗ್ರ ಸಂಟನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಹಾಗೂ ಹಲ್ಲೆಗೊಳಗಾದ ಹಾಗೂ ಪ್ರಾಣ ಕಳೆದುಕೊಂಡ ಪ್ರವಾಸಿಗರಿಗೆ ಸೂಕ್ತ ನ್ಯಾಯ ಒದಗಿಸುವಂತೆ ಆಗ್ರಹಿಸಿ ರಾಜ್ಯ ರೆತ ಸಂ ಹಾಗೂ ಹಸಿರು ಸೇನೆಯಿಂದ ತಹಸೀಲ್ದಾರ್​ ಮಲ್ಲಿಕಾರ್ಜುನ ಹೆಗ್ಗಣ್ಣವರ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಸಂದ ತಾಲೂಕಾಧ್ಯ ಸುರೇಶ ಸಂಪಗಾವಿ ಮಾತನಾಡಿ, ಕಾಶ್ಮೀರದ ಪಹಲ್ಗಾಮ್​ನಲ್ಲಿ ಪ್ರವಾಸಿಗರ ಮೇಲೆ ಉಗ್ರಗಾಮಿಗಳ ಗುಂಡಿನ ದಾಳಿ ನಡೆದಿದ್ದು ಖಂಡನೀಯ. ದಾಳಿಯಲ್ಲಿ ಸುಮಾರು 28 ಭಾರತೀಯರು ಹಾಗೂ ಇಬ್ಬರು ವಿದೇಶಿಯರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವಾರು ಜನರಿಗೆ ಗಂಭೀರವಾಗಿ ಗಾಯಗಳಾಗಿವೆ. ಉಗ್ರರಿಗೆ ಕಠಿಣ ಶಿೆಯಾಗಬೇಕು. ಕೇಂದ್ರ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.

ಸಂದ ರಾಜ್ಯ ಕಾರ್ಯಾಧ್ಯ ಬಸವರಾಜ ಬಿಜ್ಜುರ, ಶಿವಾನಂದ ಸರದಾರ, ಮಂಜುನಾಥ ಮುತ್ತಿನ, ಸುರೇಶ ಅಂಗಡಿ, ಎಸ್​.ಎಲ್​. ಗಾಣಿಗೇರ, ಅಖಿಲಾ ತಿವಾರಿ, ಕಲಾವತಿ ಎಲ್ಲಪ್ಪಗೌಡ್ರ, ಬಸವಣ್ಣವ್ವ ಚನ್ನಶೆಟ್ಟರ, ಗೌಡಪ್ಪ ಕಳಸಪ್ಪನವರ, ಬಿ.ಎಸ್​. ಸುಂಕದ, ಸಿದ್ದಪ್ಪ ಪಟ್ಟದಕಲ, ಎಲ್​.ವೈ. ಕಮ್ಮಾರ, ಮಲ್ಲಪ್ಪ ಮೇಟಿ, ಮಂಜುನಾಥ ಕುರಿ, ಈರಪ್ಪ ಕಾಳಗಿ ಇತರರು ಇದ್ದರು.