ಸಿಂಧನೂರಿನ ಗಾಂಧಿವೃತ್ತದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್‌ದಿಂದ ಮೌನ ಪ್ರತಿಭಟನೆ ನಡೆಸಲಾಯಿತು.  
ಜಿಲ್ಲೆ

ಕೇಂದ್ರ ಸರ್ಕಾರದ ಸೇಡಿನ ಕ್ರಮಕ್ಕೆ ಆಕ್ರೋಶ, ಕಾಂಗ್ರೆಸ್‌ದಿಂದ ಮೌನ ಪ್ರತಿಭಟನೆ

ಸಿಂಧನೂರು: ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ವಿರುದ್ಧ ಬಿಜೆಪಿ ಸೇಡಿನ ಕ್ರಮ ಅನುಸರಿಸುತ್ತಿರುವುದನ್ನು ಖಂಡಿಸಿ ಬುಧವಾರ ತಾಲೂಕು ಬ್ಲಾಕ್ ಕಾಂಗ್ರೆಸ್‌ದಿಂದ ಗಾಂಧಿವೃತ್ತದಲ್ಲಿ ಮೌನ ಪ್ರತಿಭಟನೆ ನಡೆಸಿತು.

ರಾಹುಲ್‌ಗಾಂಧಿ ಪ್ರಧಾನಿ ಮೋದಿ ಮತ್ತು ಅದಾನಿ ನಡುವಿನ ಸಂಬಂಧವನ್ನು ನಿರಂತರವಾಗಿ ಪ್ರಶ್ನಿಸುತ್ತಿರುವುದು ಹಾಗೂ ಅವರ ನಿರ್ಭೀತ ನಡವಳಿಕೆಯನ್ನು ಸಹಿಸಿಕೊಳ್ಳದೆ ಪ್ರಧಾನಿ ಮತ್ತು ಬಿಜೆಪಿಯು ರಾಹುಲ್‌ಗಾಂಧಿಯವರು ದೋಷಿ ಎಂದು ಸಾಬೀತುಪಡಿಸಲು ಹಾಗೂ ಅವರನ್ನು ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲು ಸೇಡಿನ ಕ್ರಮ ಅನುಸರಿಸುತ್ತಿದೆ. ರಾಹುಲ್‌ಗಾಂಧಿ ಅವರಿಗೆ ನೀಡುವ ಶಿಕ್ಷೆ ಮತ್ತು ಅನರ್ಹತೆಯನ್ನು ಕಾಂಗ್ರೆಸ್ ಪಕ್ಷ ಮಾತ್ರವಲ್ಲ, ರಾಷ್ಟ್ರವೇ ಖಂಡಿಸುತ್ತಿದೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ ನೇತೃತ್ವ ವಹಿಸಿದ್ದರು. ಲಿಂಗಪ್ಪ ದಢೇಸುಗೂರು, ಎನ್.ಅಮರೇಶ, ಛತ್ರಪ್ಪ ಕುರುಕುಂದಿ, ನಗರಸಭೆ ಸದಸ್ಯರಾದ ಶೇಖರಪ್ಪ ಗಿಣಿವಾರ, ಶಬ್ಬೀರ್ ನಾಯಕ, ಶರಣಪ್ಪ ಉಪ್ಪಲದೊಡ್ಡಿ, ಆಲಂಬಾಷಾ, ಎಚ್.ಬಾಷಾ, ಮುರ್ತುಜಾ ಹುಸೇನ್, ಚಂದ್ರಶೇಖರ ಮೇಟಿ, ರಾಮನಗೌಡ ಮಲ್ಕಾಪುರ, ಬಸವರಾಜ ಸಾಹುಕಾರ ವಕೀಲ, ಚಂದ್ರೇಗೌಡ ಹರಟೆನೂರು, ದುರುಗಪ್ಪ ಕಟಾಲಿ, ದ್ರಾಕ್ಷಾಯಣಿ ಗೋಮರ್ಸಿ, ಕವಿತಾ, ಅಶೋಕ ಉಮಲೂಟಿ, ದೊಡ್ಡನಗೌಡ ಕಲ್ಲೂರು, ಬಸಮ್ಮ, ಕಲಾವತಿ, ಸಂಗೀತ ಸಾರಂಗಮಠ ಇತರರಿದ್ದರು.