ಜಿಲ್ಲೆ

ಅನಧಿಕೃತ ತಂಬಾಕು ಬೆಳೆಗಾರರಿಗೆ ಕೇಂದ್ರದ ನೆರವು

ಮೈಸೂರು: ಅಧಿಕೃತ ಜತೆಗೆ ಅನಧಿಕೃತವಾಗಿ ಹೊಗೆಸೊಪ್ಪು ಬೆಳೆದವರ ನೆರವಿಗೆ ನಿಂತ ಪ್ರಧಾನಿ ನರೇಂದ್ರಮೋದಿ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ತಿಳಿಸಿದ್ದಾರೆ.

ರಾಜ್ಯದಲ್ಲಿ ತಂಬಾಕು ಬೆಳೆದ ಅಧಿಕೃತ ಹಾಗೂ ಅನಧಿಕೃತ ತಂಬಾಕನ್ನು ಯಾವುದೇ ದಂಡವಿಲ್ಲದೆ ಮಾರಿಕೊಳ್ಳುವುದಕ್ಕೆ ಅನುಮತಿ ನೀಡಿರುವ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಅನ್ವಯ ರಾಜ್ಯದಲ್ಲಿನ ನೋಂದಾಯಿತ ಹಾಗೂ ನೋಂದಾಯಿತವಲ್ಲದ ಹೊಗೆಸೊಪ್ಪು ಬೆಳೆಗಾರರು ತಮ್ಮಲ್ಲಿನ ಹೊಗೆಸೊಪ್ಪಿನ ಉತ್ಪನ್ನವನ್ನು ಯಾವುದೇ ಹೆಚ್ಚಿನ ಶುಲ್ಕವಿಲ್ಲದೇ ಮಾರಬಹುದಾಗಿದೆ. ಈ ಮಾರಾಟಕ್ಕೆ ಇದ್ದ ಮಿತಿಯನ್ನೂ ಕೂಡ ರದ್ದುಗೊಳಿಸಲಾಗಿದ್ದು, ಪ್ರಾಕೃತಿಕ ವಿಪತ್ತುಗಳಿಂದ ಸಂಕಷ್ಟಕ್ಕೊಳಗಾಗಿದ್ದ ಸಾವಿರಾರು ರೈತರಿಗೆ ಕೇಂದ್ರ ಸರ್ಕಾರದ ಈ ನಿರ್ಧಾರ ನೆಮ್ಮದಿಯನ್ನು ನೀಡಿದೆ ಎಂದು ಹೇಳಿದ್ದಾರೆ.