ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಮಾರುಕಟ್ಟೆ ಮೈದಾನದಲ್ಲಿ ಸೋಮವಾರ ಸಂಜೆ ಬಿಜೆಪಿ ಕಾರ್ಯಕರ್ತರ ಸಮಾವೇಶ ಏರ್ಪಾಟಾಗಿತ್ತು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಸಂಕಲ್ಪದೊಂದಿಗೆ ಭಾರತವನ್ನು ಮುನ್ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳು ಭಾರತೀಯರ ಮನೆ ಬಾಗಿಲಿಗೆ ತಲುಪುತ್ತಿದ್ದಾವೆ. ಭಾರತ ವಿಶ್ವಗುರು ಆಗಲು ತಾವೆಲ್ಲರೂ ಕೈಜೋಡಿಸಬೇಕು. ಮತ್ತೊಮ್ಮೆ ಮೋದಿ ಅವರನ್ನು ಗೆಲ್ಲಿಸಬೇಕೆಂದು ವಿನಂತಿಸಿದರು.
ಶಾಸಕ ಎಂ.ಆರ್. ಪಾಟೀಲ, ಬಿಜೆಪಿ ಗ್ರಾಮಾಂತರ ವಿಭಾಗದ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಪ್ರಮುಖರಾದ ಭರಮಪ್ಪ ಮುಗಳಿ, ಎನ್.ಎನ್. ಪಾಟೀಲ, ಡಿ.ವೈ. ಲಕ್ಕನಗೌಡ್ರ, ಸಿ.ವೈ. ಹಿರೇಗೌಡ್ರ, ರವಿಗೌಡ ಪಾಟೀಲ, ಮಾಲತೇಶ ಶ್ಯಾಗೋಟಿ, ಭರಮಗೌಡ ದ್ಯಾಮನಗೌಡ್ರ, ಗುರುಸಿದ್ದಗೌಡ ಬನ್ನೂರ ಇತರರು ಇದ್ದರು.