ರಾಯಚೂರು ಸಂಸ ಥಿಯೇಟರ್ ಸಂಸ್ಥೆ ಮತ್ತು ಗುರುಪುಟ್ಟ ಕಲಾ ಬಳಗ ಅಸ್ಕಿಹಾಳ ವತಿಯಿಂದ ಏ.೦೭ ರಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮAದಿರದಲ್ಲಿ ಶಾಂತರಸ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆಂದು ರಂಗಕರ್ಮಿ ಅಣ್ಣಿ ವೀರಯ್ಯ ಸ್ವಾಮಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ ೧೦ .೩೦ಕ್ಕೆ ಪ್ರಾರಂಭವಾಗಲಿರುವ ಕಾರ್ಯಕ್ರಮವನ್ನು ಹಿರಿಯ ಹೋರಾಟಗಾರ ಸಿದ್ದನಗೌಡ ಪಾಟೀಲ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಬಂಡುರಾವ ಚಾಗಿ ವಹಿಸಲಿದ್ದಾರೆ. ಅನ್ವೇಷಣೆ ಸಾಹಿತ್ಯ ಪ್ರತಿಕೆಯ ಶಾಂತರಸರ ಕುರಿತಾದ ವಿಶೇಷಾಂಕವನ್ನು ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು
ಬಿಡುಗಡೆಗೊಳಿಸಲಿದ್ದಾರೆ. ಉಷಾ ಜ್ಯೋತಿಯವರ ಇರುವಿಕೆಯ ಹಾದಿಯಲ್ಲಿ ಗಜಲ್ ಪುಸ್ತಕವನ್ನು ಅನ್ವೇಷಣೆ ಸಾಹಿತ್ಯ ಪತ್ರಿಕೆ ಸಂಪಾದಕ ಆರ್.ಜಿ.ಹಳ್ಳಿ ನಾಗರಾಜ ಬಿಡುಗಡೆಗೊಳಿಸಲಿದ್ದಾರೆ. ಗಡಿ ಪ್ರದೇಶದ ಅಭಿವೃದ್ದಿ ಪ್ರಾಽಕಾರದ ಸದಸ್ಯ ಭಗತರಾಜ್ ನಿಜಾಮಕಾರಿ, ರಾಮಣ್ಣ ಹವಳೆ, ಬಸವಪ್ರಭು, ಶಾಂತಾ ಕುಲ್ಕರ್ಣಿ, ಚಿತ್ರ ಕಲಾವಿದ ಕೃಷ್ಣ ರಾಯಚೂರು ಇವರು ಅತಿಥಿಗಳಾಗಿ ಭಾಗವಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ಒಟ್ಟು ಮೂರು ಗೋಷ್ಠಿಗಳು ನಡೆಯಲಿವೆ. ನಂತರ ಸಮಾರೋಪ ಸಮಾರಂಭ ನಡೆಯಲಿದ್ದು, ಹೋರಾಟಗಾರ ರಾಘವೇಂದ್ರ ಕುಷ್ಟಗಿ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಅಧ್ಯಕ್ಷತೆಯನ್ನು ರಂಗಕರ್ಮಿ ವಿ.ಎನ್.ಅಕ್ಕಿವಹಿಸಲಿದ್ದಾರೆ.ಅತಿಥಿಗಳಾಗಿ ಧನಗೂಡು µಡಕ್ಷರಿ ಪೀಠದ ಅಧ್ಯಕ್ಷ ಡಾ.ಕೂಡ್ಲೂರು, ವೆಂಕಟಪ್ಪ, ಕವಿ ಮೆಹೆಬೂಬ್ ಬೀ ಭಾಗವಹಿಸಲಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಕಾರ್ಯಕ್ರಮಕ್ಕೆ ಕೈ ಜೋಡಿಸಿವೆ ಎಂದರು.
ಈ ಸಂದರ್ಭದಲ್ಲಿ ಸುಧಾಕರ ಅಸ್ಕಿಹಾಳ, ವಿ.ಎನ್.ಅಕ್ಕಿ, ವೆಂಕಟ ನರಸಿಂಹ, ರಾಘವೇಂದ್ರ, ಸುಧಾಕರ ಅಸ್ಕಿಹಾಳ ಇದ್ದರು.