ನೆಲಮಂಗಲ ಬಸ್​ ನಿಲ್ದಾಣದ ಬಳಿ ಬಿಜೆಪಿ ಮುಂಖಡರು ಹಾಗೂ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ತಾಲೂಕು ಅಧ್ಯಕ್ಷ ಜಗದೀಶ್​ಚೌಧರಿ, ಪುರಸಭೆ ಮಾಜಿ ಅಧ್ಯಕ್ಷ ರವಿ, ನಗರಸಭೆ ಹೆಚ್ಚುವರಿ ಸದಸ್ಯ ಅಂಜನಮೂರ್ತಿ, ರಾಮಮೂರ್ತಿ, ಕೃಪಾನಂದ್​, ಮುನಿರಾಜು ಇದ್ದರು. 
ಜಿಲ್ಲೆ

ತೆರಿಗೆ ಇಳಿಕೆ ನಿರ್ಧಾರ ಸ್ವಾಗತಿಸಿ ಸಂಭ್ರಮಾಚರಣೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

ನೆಲಮಂಗಲ: ಕೇಂದ್ರ ಸರ್ಕಾರ ತೆಗೆದುಕೊಂಡ ಐತಿಹಾಸಿಕ ತೆರಿಗೆ ಇಳಿಕೆ ನಿರ್ಧಾರವನ್ನು ಸ್ವಾಗತಿಸಿ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ನಗರದ ಬಸ್​ ನಿಲ್ದಾಣ ಮುಂಭಾಗದಲ್ಲಿ ಮಂಗಳವಾರ ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್​ ಚೌಧರಿ ನೇತೃತ್ವದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಹಾಗೂ ಮುಖಂಡರು ಸಿಹಿ ಹಂಚಿ ಸಂಭ್ರಮಿಸಿದರು. ಪ್ರಧಾನಿ ನರೇಂದ್ರ ಮೋದಿ ಪರವಾಗಿ ಜೈಕಾರ ಹಾಕಿದರು. ಬಿಜೆಪಿ ತಾಲೂಕು ಅದ್ಯಕ್ಷ ಜಗದೀಶ್​ಚೌಧರಿ ಮಾತನಾಡಿ, ನಿತ್ಯ ಬಳಕೆಯ ಉತ್ಪನ್ನಗಳು, ಆಹಾರ ಉತ್ಪನ್ನಗಳು, ವಾಹನಗಳು ಸೇರಿ ಸುಮಾರು 375 ಉತ್ಪನ್ನಗಳ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಸಿರುವುದನ್ನು ಸ್ವಾಗತಾರ್ಹ. ದಸರಾ ಹಬ್ಬಕ್ಕೆ ಕೇಂದ್ರ ಸರ್ಕಾರ ವಿಶೇಷ ಉಡುಗೊರೆ ನೀಡಿದೆ ಎಂದರು.. ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, 75ನೇ ಸ್ವಾತಂತ್ರ$್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ದೇಶದ ಜನರಿಗೆ ಉತ್ತಮ ಉಡುಗೊರೆಯನ್ನು ಮೋದಿ ನೀಡಿದ್ದು, ಅಗತ್ಯ ವಸ್ತುಗಳ ಮೇಲಿನ ಜಿಎಸ್​ಟಿ ಇಳಿಕೆ ಮಾಡಿ ನುಡಿದಂತೆ ನಡೆದಿದ್ದಾರೆ ಎಂದರು.

ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ರಂಗನಾಥ್​ ಬಾಬು, ಸತೀಶ್​, ಮಹಿಳಾ ಮೋರ್ಚಾ ಅಧ್ಯೆ ಮಂಜುಳಾ ಸುರೇಶ್​, ಪ್ರಧಾನಕಾರ್ಯದರ್ಶಿ ಶೀಲಾ, ಎಸ್ಟಿ ಮೋರ್ಚಾ ಅಧ್ಯಕ್ಷ ಕೆಂಪರಾಮಯ್ಯ, ಒಬಿಸಿ ಮೋರ್ಚಾ ಅಧ್ಯಕ್ಷ ಲೋಕೇಶ್​, ಮುಖಂಡರಾದ ಸಪ್ತಗಿರಿಶಂಕರ್​ನಾಯಕ್​, ಸ್ಟುಡಿಯೋ ಮಂಜುನಾಥ್​, ಅರುಣ್​ಗೌಡ , ಎಂ.ಎಂ.ಗೌಡ, ಡಿ.ಸಿದ್ದರಾಜು, ಮಂಜುನಾಥ್​, ಶರಣಪ್ಪಗೌಡರ್​, ರಾಜಮ್ಮಪ್ರಕಾಶ್​, ಸೌಮ್ಯ, ನೀಲಮ್ಮ, ಸುಮ , ಶಾಂತಕುಮಾರಿ ಉಪಸ್ಥಿತರಿದ್ದರು.