ಹುಬ್ಬಳ್ಳಿ: ಸುಪ್ರೀಂಕೋರ್ಟ್ ನೀಡಿರುವ ಒಳಮೀಸಲಾತಿ ತೀರ್ಪು ಸ್ವಾಗತಿಸಿದ ಕರ್ನಾಟಕ ಮಾದಿಗ ದಂಡೋರ (ಮೀಸಲಾತಿ ಹೋರಾಟ ಸಮಿತಿ) ಪದಾಧಿಕಾರಿಗಳು, ಮುಂಬರುವ ನೇಮಕಾತಿಗಳಿಗೆ ಇದೇ ತೀರ್ಪಿನನ್ವಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಮನವಿಯನ್ನು ಬುಧವಾರ ನಗರದಲ್ಲಿ ತಹಸೀಲ್ದಾರ್‌ಗೆ ಸಲ್ಲಿಸಿದರು.
ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿರುವುದು ಐತಿಹಾಸಿಕ. ಮುಂದಿನ ಸರ್ಕಾರಿ ಹುದ್ದೆಗಳ ನೇಮಕ ಪ್ರಕ್ರಿಯೆ ಸ್ಥಗಿತಗೊಳಿಸಬೇಕು. ಕೋರ್ಟ್ ನೀಡಿದ ತೀರ್ಪಿನನ್ವಯ ನೇಮಕಾತಿ ನಡೆಸಬೇಕು ಎಂದು ಒತ್ತಾಯಿಸಿಲಾಯಿತು. ಇದಕ್ಕೂ ಮೊದಲು ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ಜಿಲ್ಲಾಧ್ಯಕ್ಷ ವೆಂಕಟೇಶ ಅನಂತಪುರ, ಪ್ರಮುಖರಾದ ಗಂಗಾಧರ ಪೆರೂರು, ಮಹೇಶ ಭಂಡಾರಿ, ಶ್ರೀನಿವಾಸ ರೆಟ್ಟಿ, ಹನುಮಂತ ಯರಗುಂಟಿ, ರಾಮಕೃಷ್ಣ ಅನಂತಪುರ, ನಾಗವೇಣಿ ಬೆಳ್ಡೋಣಿ, ರಾಜು ಪಾಮಡಿ, ಮೇಘರಾಜ ಹಿರೇಮನಿ, ತಿಪ್ಪಣ್ಣ ಭಂಡಾರಿ, ಸೋಮಶೇಖರ ಸಾಕಿನ್, ಗೋವಿಂದ ಬಂಡಮಿದಪಲ್ಲಿ, ಸುರೇಶಕುಮಾರ ಹುಬ್ಳಿಕರ, ಪ್ರಕಾಶ ಹುಬ್ಬಳ್ಳಿ, ನಾಗರಾಜ ಜಾಲಿಗಿಡದ, ಶಿವು ಬಳ್ಳಾರಿ, ಇತರರು ಉಪಸ್ಥಿತರಿದ್ದರು.