ಶಾಸಕ ಎನ್​.ಶ್ರೀನಿವಾಸ್​ ನೇತೃತ್ವದಲ್ಲಿ ಕಾಂಗ್ರೆಸ್​ ಮುಖಂಡರು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದರು. ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಸಿ.ಆರ್​.ಗೌಡ್ರು, ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣಗೌಡ, ಸದಸ್ಯ ಬಿ.ಜಿ.ವಾಸು, ಸೋಲೂರು, ಸೋಂಪುರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ತಟ್ಟೆಕೆರೆಬಾಬು,( ಶರ್ಮಾ) ತ್ಯಾಮಗೊಂಡ್ಲು ಬ್ಲಾಕ್​ ಹನುಮಂತೇಗೌಡ ಇದ್ದರು. 
ಜಿಲ್ಲೆ

ನೆಲಮಂಗಲಕ್ಕೆ ಸೋಲೂರು ಹೋಬಳಿ ಸೇರ್ಪಡೆಗೆ ಸಂಭ್ರಮ

ನೆಲಮಂಗಲ : ಸೋಲೂರು ಹೋಬಳಿ ನೆಲಮಂಗಲ ವಿಧಾನಸಭಾ ೇತ್ರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ೇತ್ರ ಸೇರಿದ್ದು, ಆಡಳಿತಾತ್ಮಕವಾಗಿ ಮಾಗಡಿ ತಾಲೂಕು ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿತ್ತು. ಶಾಸಕ ಎನ್​.ಶ್ರೀನಿವಾಸ್​ ಆ ಭಾಗದ ಜನರ ಸಮಸ್ಯೆಗಳ ಬಗ್ಗೆ ಸದನದಲ್ಲೂ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆದಿದ್ದರು. ಇದೀಗ ಏಳೆಂಟು ದಶಕಗಳ ಸಮಸ್ಯೆಗೆ ಮುಕ್ತಿ ದೊರೆತಿದ್ದು, ಜನರಲ್ಲಿ ಸಂಭ್ರಮ ಮನೆ ಮಾಡಿದೆ. ಸೋಲೂರು ಸೇರಿ ವಿಧಾನಸಭಾ ೇತ್ರದ ಕಾಂಗ್ರೆಸ್​ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಅಭಿವೃದ್ಧಿಗೆ ಸಹಕಾರ: ಸೋಲೂರು ಹೋಬಳಿ ಆಡಳಿತಾತ್ಮಕವಾಗಿ ಮಾಗಡಿ ತಾಲೂಕು ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿತ್ತು. ಅಭಿವೃದ್ಧಿ ವಿಚಾರವಾಗಿ ಮಾಗಡಿ ತಾಲೂಕು ಕುದೂರು ಹೋಬಳಿಗೆ ನೀಡುತ್ತಿದ್ದ ಪ್ರಾತಿನಿಧ್ಯ ಸೋಲೂರು ಹೋಬಳಿಗೆ ಸಿಗುತ್ತಿರಲಿಲ್ಲ. ಈಗ ಆಡಳಿತಾತ್ಮಕವಾಗಿ ಒತ್ತು ನೀಡುವುದರಿಂದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಮಠಾಧೀಶರಿಂದ ಮೆಚ್ಚುಗೆ: ವಿಧಾನಸಭಾ ೇತ್ರ ವ್ಯಾಪ್ತಿಯಲ್ಲಿ ಹಲವು ವೀರಶೈವಲಿಂಗಾಯತ ಮಠಗಳ ಮಠಾಧೀಶರು ಸೇರ್ಪಡೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಹೋಬಳಿ ಜನರ ಋಣ ತೀರಿಸಿದ ತೃಪ್ತಿ ದೊರೆತಿದೆ ಎಂದು ಶಾಸಕ ಎನ್​.

ಶ್ರೀನಿವಾಸ್​ ತಿಳಿಸಿದ್ದಾರೆ.

ಕಾಂಗ್ರೆಸ್​ ಮುಖಂಡರಿಂದ ಸನ್ಮಾನ: ಮಾಗಡಿ ತಾಲೂಕಿನ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಸೋಮವಾರ ಅರಿಶಿಣಕುಂಟೆ ಬಳಿ ಸಮಾವೇಶಗೊಂಡು ಶಾಸಕ ಎನ್​.ಶ್ರೀನಿವಾಸ್​ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್​ ಅವರನ್ನು ಸನ್ಮಾನಿಸಿದರು. ಮೊದಲಿಗೆ ಡಿಸಿಎಂ ನಿವಾಸ, ನಂತರ ಕೃಷ್ಣಾದಲ್ಲಿ ಸಿಎಂ.ಸಿದ್ದರಾಮಯ್ಯ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಬಳಿಕ ಶಾಸಕರ ಭವನದಲ್ಲಿ ಎಂ.ಎಲ್ಸಿ ರವಿ ಅವರನ್ನು ಸನ್ಮಾನಿಸಿದರು. ಸೋಲೂರು ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ಶಾಸಕರು ಸೇರಿ ಆ ಭಾಗದ ಮುಖಂಡರು, ಕಾರ್ಯಕರ್ತರ ಜತೆಗೆ ಜನರಿಗೂ ಒಳ್ಳೆಯದಾಗಲಿ ಎಂದು ಸಿಎಂ ಸಿದ್ದರಾಮಯ್ಯ ಹರಸಿದರು. ಶಾಸಕ ಶ್ರೀನಿವಾಸ್​ ಹಾಗೂ ಸೋಲೂರು ಭಾಗದ ಕಾರ್ಯಕರ್ತರ ಒತ್ತಾಸೆಯಂತೆ ಸೋಲೂರನ್ನು ನೆಲಮಂಗಲಕ್ಕೆ ಸೇರ್ಪಡೆ ಮಾಡಲಾಗಿದ್ದು, ಎಲ್ಲರಿಗೂ ಒಳ್ಳೆಯದಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹೇಳಿದರು. ಜನರ ಆಶೋತ್ತರಗಳನ್ನು ಈಡೇರಿಸುವುದು ಸರ್ಕಾರ ಹಾಗೂ ಜನಪ್ರತಿನಿಧಿಗಳ ಕರ್ತವ್ಯ. ಸೋಲೂರು ಜನರ ಕಷ್ಟ ಪರಿಹಾರವಾಗಿದೆ. ನೆಲಮಂಗಲ ನಗರದ ಬಸ್​ ನಿಲ್ದಾಣ ಅಭಿವೃದ್ಧಿ ಹಾಗೂ ಇನ್ನಿತರ ವಿಚಾರಗಳನ್ನು ಸೆ. 11 ರಂದು ಸಭೆ ನಡೆಸಿ ಪರಿಹಾರ ಒದಗಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ತಿಳಿಸಿದರು.