ಜಿಲ್ಲೆ

ಆರ್‌ಸಿಬಿ ಗೆಲವಿನ ಹಿನ್ನೆಲೆ ಸಂಭ್ರಮ

ಗಾಯತ್ರಿ ಮಾಲಿಪಾಟೀಲ್

ಗುರುಗುಂಟಾ: ಆರ್‌ಸಿಬಿ ತಂಡ ಗೆಲುವು ಸಾಧಿಸಿದ ಹಿನ್ನೆಲೆ ಗುರುಗುಂಟಾದಲ್ಲಿ ಯುವಕರು ಪರಸ್ಪರ ಗುಲಾಲು ಎರಚಿ, ಸಿಹಿ ಹಂಚಿ, ಪಟಾಕಿ ಸಿಡಿಸಿ, ತಮಟೆ ಬಾರಿಸುತ್ತಾ ಕುಣಿದು ಸಂಭ್ರಮಿಸಿದರು. ದೇವಸ್ಥಾನಗಳಲ್ಲಿ ಆರ್‌ಸಿಬಿ ಗೆಲುವಿಗಾಗಿ ಅಭಿಮಾನಿಗಳು ಸಲ್ಲಿಸಿದ ವಿಶೇಷ ಪೂಜೆ ಫಲ ನೀಡಿದೆ. ಪಂದ್ಯ ವೀಕ್ಷಿಸಲು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಲ್ ಕಪ್‌ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ಅಂತಿಮ ಹಣಾ ಹಣಿ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಕಪ್ ಎತ್ತಿ ಹಿಡಿದಿದೆ.