ಜಿಲ್ಲೆ

ಸಂಭ್ರಮದ ಸಿದ್ಧೇಶ್ವರ ಮೂರ್ತಿ ಮೆರವಣಿಗೆ

ಪ್ರಶಾಂತ ಹೂಗಾರ

ಕೊಟ್ಟಲಗಿ: ಗ್ರಾಮದಲ್ಲಿ ಶ್ರಾವಣ ಮಾಸದ ಕಡೆ ಸೋಮವಾರ ಅಂಗವಾಗಿ ಸಿದ್ಧೇಶ್ವರ ಮೂರ್ತಿ ಉತ್ಸವ ಅದ್ದೂರಿಯಾಗಿ ಜರುಗಿತು.

ಬೆಳಗ್ಗೆ ಸಿದ್ಧೇಶ್ವರ ದೇವರ ಮೂರ್ತಿ ಅಲಂಕರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಉತ್ಸವದಲ್ಲಿ ವಿವಿಧ ಜಾನಪದ ಕಲಾ ಮೇಳಗಳು, ಡೊಳ್ಳು ಕುಣಿತ, ವೀರಗಾಸೆ, ಭಜನೆ ತಂಡಗಳು ಉತ್ಸವದುದ್ದಕ್ಕೂ ಕಲಾ ಪ್ರದರ್ಶನ ನೀಡಿ, ಭಕ್ತರನ್ನು ರಂಜಿಸಿದವು.

ಅರ್ಚಕರಾದ ಶಿವನಿಂಗ ಮಾನಿಂಗಪ್ಪಗೋಳ, ಸಂಗಯ್ಯ ಡುಮ್ಮನವರ, ಮಹಾದೇವ ದೊಡ್ಡನಿಂಗಪ್ಪಗೋಳ, ಸಂಗಯ್ಯ ಮಂಗಿ, ಶಿವನಿಂಗ ಬಡವಗೋಳ, ಸಿದ್ದಪ್ಪ ದೊಡ್ಡನಿಂಗಪ್ಪಗೋಳ, ಸಂಗಪ್ಪ ಕರೆಪ್ಪಗೋಳ ಇತರರಿದ್ದರು.