ಬೈಲಹೊಂಗಲ: ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಿಶ್ವಹಿಂದು ಪರಿಷತ್, ಬಜರಂಗದಳ ಆಶ್ರಯದಲ್ಲಿ ರಾಮೋತ್ಸವ ಕಾರ್ಯಕ್ರಮ ಭಾನುವಾರ ಸಡಗರ, ಸಂಭ್ರಮದಿಂದ ನಡೆಯಿತು.ಶಾಸಕ ಮಹಾಂತೇಶ ಕೌಜಲಗಿ, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯ ಪ್ರಮೋದಕುಮಾರ ವಕ್ಕುಂದಮಠ ನೇತೃತ್ವದಲ್ಲಿ ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ಪಾನಕ ವಿತರಿಸಲಾಯಿತು. ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಪ್ರಭು ಅವರು ತ್ರೇತಾಯುಗಲ್ಲಿ ನಡೆಸಿದ ರಾಜ್ಯಭಾರ ಇಂದಿಗೂ ಆದರ್ಶವಾಗಿದೆ. ಶ್ರೀರಾಮಚಂದ್ರ ಪ್ರಭು ಅವರ ಸ್ಮರಣೆಯನ್ನು ಮೈಗೂಡಿಸಿಕೊಂಡು ಧನ್ಯರಾಗೋಣ ಎಂದರು. ಡಾ.ಬಿ.ಎಸ್.ಮಹಾಂತಶೆಟ್ಟಿ, ಪುರಸಭೆ ಸದಸ್ಯ ಗುರು ಮೆಟಗುಡ್ಡ, ಬಿ.ಬಿ.ಗಣಾಚಾರಿ, ಶ್ರೀಶೈಲ ಯಡಳ್ಳಿ, ಸೋಮನಾಥ ಸೊಪ್ಪಿಮಠ, ಶಿವಾನಂದ ಬಡ್ಡಿಮನಿ, ಆನಂದ ಮೂಗಿ, ಗೌತಮ ಇಂಚಲ, ವಿಜಯ ಪತ್ತಾರ, ಆನಂದ ವಾಲಿ, ಗಿರೀಶ ಹರಕುಣಿ, ಸಂಗಮೇಶ ಸವದತ್ತಿಮಠ, ಜಗದೀಶ ಲೋಕಾಪುರ, ಅಶೋಕ ಸವದತ್ತಿ, ರಾಜು ಹರಕುಣಿ, ಲಾಲಚಂದ ಗೋಗಡ, ವಿವೇಕ ಪೂಜಾರ, ದಯಾನಂದ ಗೆಜ್ಜಿ, ವಿರೂಪಾ ವಾಲಿ, ಮಹಾಂತೇಶ ಹೊಸೂರ, ರಾಜು ಬೋಂಗಾಳೆ ಇತರರಿದ್ದರು.