ಮದ್ದೂರಿನ ತಾಲೂಕು ಕಚೇರಿಯಲ್ಲಿ ಸಂತ ಕವಿ ಸರ್ವಜ್ಞನ ಜನ್ಮದಿನ ಆಚರಿಸಲಾಯಿತು. ಸೋಮಶೇಖರ್, ಮಂಚಶೆಟ್ಟಿ, ಚಂದ್ರಶೇಖರ್, ಶಿವಣ್ಣ, ಧನಂಜಯ, ಕೆ.ಟಿ.ಶಿವಕುಮಾರ್ ಇದ್ದರು. 
ಜಿಲ್ಲೆ

ಸರ್ವಜ್ಞ ಜಯಂತಿ ಆಚರಣೆ

ಮದ್ದೂರು: ಪಟ್ಟಣದ ತಾಲೂಕು ಕಚೇರಿಯಲ್ಲಿ ಗುರುವಾರ ಸಂತ ಕವಿ ಸರ್ವಜ್ಞನ ಜಯಂತಿ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್, ಸರ್ವಜ್ಞ ಸಮಾಜ ಸುಧಾರಣೆಗೆ ಶ್ರಮಿಸಿ ಮಹಾನ್ ವ್ಯಕ್ತಿಯಾಗಿದ್ದು, ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ತಾಲೂಕು ಸರ್ವಜ್ಞ ಕುಂಬಾರರ ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮುಂಚ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗೊರವಾಲೆ ಚಂದ್ರಶೇಖರ್, ತಾಲೂಕು ಸರ್ವಜ್ಞ ಕುಂಬಾರರ ಸೇವಾ ಟ್ರಸ್ಟ್ ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಧನಂಜಯ, ಸಹ ಕಾರ್ಯದರ್ಶಿ ರಮೇಶ್, ಶಿವರಾಜ್, ಪ್ರಗತಿಪರ ಸಂಘಟಕ ಕೆ.ಟಿ.ಶಿವಕುಮಾರ್, ಅಹಿಂದ ಸಂರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪಿ.ಶಶಿಕುಮಾರ್, ಮುಖಂಡರಾದ ಮಹಾದೇವ, ರಾಚಯ್ಯ, ಶಂಕರ್, ಮಹದೇವಯ್ಯ, ಪುಟ್ಟ, ಇಂತಿಯಾಜ್, ನಾಗರಾಜ್ ಇದ್ದರು.