ಕಾರ್ಗಿಲ್ ವಿಜಯ ದಿವಸ ಆಚರಣೆ ಸಂದರ್ಭ ಯೋಧರನ್ನು ಸನ್ಮಾನಿಸಲಾಯಿತು. ಕುಸುಮಾಧರ ಬಿ.ಕೆ., ಕರ್ನಲ್ ಜಯಚಂದ್ರನ್ , ಹರೀಶ್ ಕೋಟ್ಯಾನ್, ಹರೀಶ್ ಶೆಟ್ಟಿ ಪಡೀಲ್, ಶಿವಾನಂದ ರೈ ಮೊದಲಾದವರಿದ್ದರು.
ಮಂಗಳೂರು: ಸೇನೆಗೆ ಸೇರಿ ದೇಶ ಸೇವೆ ಮಾಡುವುದು ಜೀವನದ ಅಧ್ಬುತ ಅನುಭವ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಲು ಉತ್ಸುಕರಾಗಬೇಕು ಎಂದು ನಿವೃತ್ತ ಯೋಧ ಕುಸುಮಾಧರ ಬಿ.ಕೆ. ಹೇಳಿದರು.
ಕದ್ರಿ ಹಿಲ್ಸ್‌ನ ಯೋಧ ಸ್ಮಾರಕದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ 27ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಿವಪ್ರಸಾದ್ ಪೊಳಲಿ ದಿಕ್ಸೂಚಿ ಭಾಷಣಗೈದರು. ಕಾರ್ಗಿಲ್ ಯುದ್ಧದ ಬಗ್ಗೆ ಯೋಧರ ತ್ಯಾಗ ಬಲಿದಾನದ ಸನ್ನಿವೇಶಗಳನ್ನು ಸ್ಮರಿಸಿದರು.
ದ.ಕ. ಜಿಲ್ಲೆಯ ಸೈನಿಕರ ಸಂಘದ ಉಪಾಧ್ಯಕ್ಷ ಕರ್ನಲ್ ಜಯಚಂದ್ರನ್ ಯುದ್ದದಲ್ಲಿ ಸೈನಿಕರ ಪಾತ್ರವನ್ನು ವಿವರಿಸಿದರು.
ಎಸ್‌ಪಿವೈಎಸ್‌ಎಸ್ ಜಿಲ್ಲಾ ಸಂಚಾಲಕ ನಾರಾಯಣ ಪಾವಂಜೆ ಅಧ್ಯಕ್ಷತೆ ವಹಿಸಿದ್ದರು.
ಸಂಘಟನಾ ವಿಭಾಗದ ಪ್ರಾಂತ ಸಂಚಾಲಕರಾದ ಹರೀಶ್ ಕೋಟ್ಯಾನ್, ರಾಷ್ಟ್ರೀಯ ಯೋಗ ತರಬೇತಿಯ ಸಂಚಾಲಕ ಹರೀಶ್ ಶೆಟ್ಟಿ ಪಡೀಲ್,ಪ್ರಾಂತಪ್ರತಿನಿಧಿ ಶಿವಾನಂದ ರೈ,ನೇತ್ರಾವತಿ ವಲಯ ಪ್ರಮುಖರಾದ ಅಶೋಕ್ ಜೈನ್, ಜಯರಾಮ ಚೆಂಬುಗುಡ್ಡೆ, ಪ್ರತಾಪ್ ಕೆ.ಎಸ್, ಗಣೇಶ್ ಕೋಡಿಕಲ್ ಮಾರ್ಗದರ್ಶನ ಮಾಡಿದರು.
ಜಿಲ್ಲಾ ಪ್ರಮುಖರಾದ ಕನಕಾ ಅಮೀನ್, ಅನಿತಾ,ಲೋಕೇಶ್ ಪೊಳಲಿ, ಹರೀಶ್ ಅಂಚನ್, ಈಶ್ವರ್ ಕೊಟ್ಟಾರಿ,ಸುಬ್ರಹ್ಮಣ್ಯ ಭಟ್,ಶ್ರೀಕಲಾ ಸುವರ್ಣ,ಸೂರಜ್ ಎಕ್ಕೂರು,ಶೋಭ ಬೈಕಂಪಾಡಿ,ದಯಾನಂದ ಕಟೀಲ್, ನಗರ ಪ್ರಮುಖರಾದ ಗುರುರಾಜ್ ಶೆಟ್ಟಿ, ಸುಂದರ ಉಳ್ಳಾಲ, ಶ್ರೀನಿವಾಸ ಕಾವೂರು, ಜನಾರ್ದನ ಪೊಳಲಿ,ಸದ್ಯೋಜಾತ,ನಾರಾಯಣ ಬಂಟ್ವಾಳ, ಹರ್ಷ ಕಾವೂರು,ಜೀವನ್ ಕಾವೂರು,ಜ್ಯೋತಿ ಕೊಲ್ಯ,ಸಂಜನಾ ಕೋಡಿಕಲ್,ಮಲ್ಲಿಕಾ, ಜಯರಾಮ ಉರ್ವಾಸ್ಟೋರ್, ಆನಂದ ಶೆಟ್ಟಿಗಾರ್,ಉಮೇಶ,ನವ್ಯ,ಗೀತಾ ,ಪದ್ಮನಾಭ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 34 ಯೋಧರನ್ನು ಗೌರವಿಸಿ ಸನ್ಮಾನಿಸಲಾಯಿತು. ಯುದ್ದದಲ್ಲಿ ಬಲಿದಾನಗೈದ ಸೈನಿಕರ ಸ್ಮರಣಾರ್ಥ ಯೋಧರ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ನಾರಾಯಣ ಸ್ವಾಗತಿಸಿದರು. ಮಂಜುನಾಥ ವಂದಿಸಿದರು. ದಿವ್ಯ ನಿರೂಪಿಸಿದರು. ಅನ್ನಪೂರ್ಣೇಶ್ವರಿ ವಂದೇ ಮಾತರಂ ಹಾಡಿದರು.
ಕಾರ್ಗಿಲ್ ವಿಜಯ ದಿವಸ ಆಚರಣೆ ಸಂದರ್ಭ ಯೋಧರನ್ನು ಸನ್ಮಾನಿಸಲಾಯಿತು. ಕುಸುಮಾಧರ ಬಿ.ಕೆ., ಕರ್ನಲ್ ಜಯಚಂದ್ರನ್ , ಹರೀಶ್ ಕೋಟ್ಯಾನ್, ಹರೀಶ್ ಶೆಟ್ಟಿ ಪಡೀಲ್, ಶಿವಾನಂದ ರೈ ಮೊದಲಾದವರಿದ್ದರು.