ಬಾಗಲಕೋಟೆ: ಆಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ಆಮಂತ್ರಣ, ಶ್ರೀರಾಮ ಮಂದಿರದ ಭಾವಚಿತ್ರವನ್ನು ವಿಪ ಸದಸ್ಯ ಪಿ.ಎಚ್.ಪೂಜಾರ ಹಾಗೂ ಡಾ.ಶೇಖರ ಮಾನೆ ನೇತೃತ್ವದ ಎರಡು ತಂಡಗಳು ಶನಿವಾರ ನಗರದ ವಿವಿಧೆಡೆ ಸಂಚರಿಸಿ ಭಕ್ತರಿಗೆ ತಲುಪಿಸಿದರು.
ವಿಪ ಸದಸ್ಯ ಪಿ.ಎಚ್.ಪೂಜಾರ ನಗರದ ಹಳೇ ಪ್ರವಾಸಿ ಮಂದಿರ, ಶಾಬಾದಿ ಗಲ್ಲಿ ಸೇರಿದಂತೆ ವಿವಿಧೆಡೆ ಮನೆ ಮನೆಗೆ ತೆರಳಿ ಜ.22 ರಂದು ರಾಮ ನಾಮ ಜಪ ಮಾಡಬೇಕು. ಸಂಜೆ ಮನೆ ಹೊರ, ಒಳ ಆವರಣದಲ್ಲಿ ದೀಪ ಬೆಳಗಿ ಶ್ರೀರಾಮನ ಮಂದಿರಕ್ಕೆ ಶುಭ ಹಾರೈಸಬೇಕು ಎಂದು ಮನವಿ ಮಾಡಿದರು.
ವಿರುಪಾಕ್ಷಿ ಅಮೃತಕರ, ಹಂಸ ರಾಜ, ಗೋಡ್ , ಅಪ್ಪಣ್ಣ ಪೂಜಾರ, ಮಲ್ಲಿಕಾರ್ಜುನ ಕಾಂಬಳೆ, ಶಿವು ಸುರಪುರ, ರಾಜು ಸಾಲಿಮಠ, ನಾಗರಾಜ ವೈಜಾಪೂರ, ಅಮೀತ ನವಲಗುಂದ, ರುದ್ರೇಶ ಬಳೋಳ್ಳಿ, ರಾಜು ನಾಯಕ ಸೇರಿದಂತೆ ಇತರರು ಇದ್ದರು.
ಡಾ.ಶೇಖರ ಮಾನೆ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ನಗರದ ಜೈನಪೇಟೆ, ವಾಡಕರಗಲ್ಲಿ, ಹಳಪೇಟ, ಗಜಾನನ ಚೌಕನಲ್ಲಿ ಮನೆ ಮನೆಗೆ ತೆರಳಿ ಮಂತ್ರಾಕ್ಷತೆ, ಆಮಂತ್ರಣ, ಶ್ರೀರಾಮ ಮಂದಿರದ ಭಾವಚಿತ್ರ ತಲುಪಿಸಿದರು.
ಶ್ರೀರಾಮ ಮಂದಿರ ಮತ್ತು ಪ್ರಸ್ತುತ ಸನ್ನಿವೇಶಗಳ ಬಗ್ಗೆ ಹೇಳಿ, ಮಂತ್ರಾಕ್ಷತೆ , ಭಾವಚಿತ್ರ ಹಾಗೂ ಆಮಂತ್ರಣ ಪತ್ರಿಕೆಯನ್ನು ನೀಡಿದರು. ಜ.22 ರಂದು ಸಂಜೆ ತಪ್ಪದೆ ಮನೆಗಳಲ್ಲಿ ದೀಪ ಬೆಳಗಬೇಕು ಎಂದು ಕೋರಿದರು.
ಆನಂದ ಮೇದಾರ, ನಿತಿನ ಮಿರಜಕರ, ರಾಜು ನಾಯಕ, ದಶರತ ಪತಂಗೆ, ರಾಮ ಗೌಳಿ, ಮಾಧವ ಮೇಲ್ನಾಡ , ಸಾಗರ ಗೀರಡೆ, ಶಾಮ್ ಮಂಚಲಕರ, ನಾಗೇಶ್ ಬಾಸುತಕರ ಇತರರು ಇದ್ದರು.