ಕಿಕ್ಕೇರಿ: ವಿಪ್ರಬಾಂಧವ ಸೇವಾ ಸಮಿತಿಯಿಂದ ಶನಿವಾರ ರಾತ್ರಿ ರಾಮನವಮಿ ಪ್ರಯುಕ್ತ ಸೀತಾರಾಮದೇವರ ಶಯನೋತ್ಸವ ವಿಜೃಂಭಣೆಯಿಂದ ನೆರವೇರಿತು.
ಮಹೋತ್ಸವಕ್ಕೂ ಮುನ್ನ ಸೀತಾ, ಲಕ್ಷ್ಮಣ, ಹನುಮ ದೇವರ ಸಮೇತ ಪಟ್ಟಾಭಿರಾಮನಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ಪೂಜಿಸಲಾಯಿತು. ವಿವಿಧ ಶೋಡಷೋಪಚಾರ ಪೂಜೆ, ಉತ್ಸವ ಜರುಗಿದ ತರುವಾಯ ಸೀತಾರಾಮ ದೇವರ ವಿಗ್ರಹಗಳನ್ನು ತೊಟ್ಟಿಲು ಉಯ್ಯಲೆಯಲ್ಲಿ ಪ್ರತಿಷ್ಟಾಪಿಸಲಾಯಿತು. ಉಯ್ಯಲೆಯಲ್ಲಿ ಅಲಂಕರಿಸಿ ಪೂಜಿಸಿ, ರಾಮಲಾಲಿ ಹಾಡಿನೊಂದಿಗೆ ತೂಗಲಾಯಿತು.
ಸಾಮೂಹಿಕವಾಗಿ ರಾಮಲಾಲಿ ಗೀತೆಯನ್ನು ಹಾಡಿ ದೇವರನ್ನು ಮಲಗಿಸುವ ಮೂಲಕ ಶಯನೋತ್ಸವ ಆಚರಿಸಲಾಯಿತು.
ಮಹಾಮಂಗಳಾರತಿ, ತೀರ್ಥ ಪ್ರಸಾದ, ಅನ್ನ ಪ್ರಸಾದ ಏರ್ಪಡಿಸಲಾಗಿತ್ತು.
ಕೆ.ಎಸ್. ಅನಂತಸ್ವಾಮಿ, ಕೆ.ಬಿ.ವೆಂಕಟೇಶ್, ಮಹಬಲಶರ್ಮ, ಆದಿತ್ಯ ಭಾರಧ್ವಾಜ್, ಗಣೇಶ್ ರಾವ್, ಮಹಬಲರಾವ್, ಪ್ರಭಾಕರ್, ಕೆ.ಎಸ್. ಪರಮೇಶ್ವರಯ್ಯ, ಶ್ರೀಹರಿ, ಶ್ರೀಹರ್ಷ, ಶಂಕರ್, ನರಸಿಂಹ, ಮಧು, ಸುಮಾ, ಭಾಗ್ಯಲಕ್ಷ್ಮೀ, ಗಿರಿಜಾ, ವೇದಾವತಿ, ಅನುರಾಧ, ವಿಜಯಲಕ್ಷ್ಮೀ, ರತ್ನಮ್ಮ, ನಂದಿನಿ, ಕಲಾವತಿ, ಶಶಿಕಲಾ, ರಜಿನಿ, ಸ್ವರ್ಣ ಇತರರಿದ್ದರು.