ಜಿಲ್ಲೆ

ಸಂಭ್ರಮದ ಶ್ರೀ ರೇವಣಸಿದ್ಧೇಶ್ವರಸ್ವಾಮಿ ಜಲ ರಥೋತ್ಸವ

ಸವಣೂರ: ತಾಲೂಕಿನ ಮಂತ್ರೋಡಿ ಗ್ರಾಮದಲ್ಲಿ ಸೋಮವಾರ ಶ್ರೀ ರೇವಣಸಿದ್ಧೇಶ್ವರಸ್ವಾಮಿ ಜಲ ರಥೋತ್ಸವ ಸಂಭ್ರಮದಿಂದ ಜರುಗಿತು.

ಮಂತ್ರೋಡಿ ಗ್ರಾಮದ ಶ್ರೀ ರೇವಣಸಿದ್ಧೇಶ್ವರ ಬೆಟ್ಟದಲ್ಲಿ ನಿರಂತರ ಒಂದು ತಿಂಗಳ ಕಾಲ ಶ್ರಾವಣ ಮಾಸದ ಕಾರ್ಯಕ್ರಮ ಸಾಂಗವಾಗಿ ಜರುಗಿದವು. ಪ್ರತಿದಿನ ರೇವಣಸಿದ್ಧೇಶ್ವರ ಗದ್ದುಗೆಗೆ ಹಾಗೂ ಲಿಂ. ಕೆಂಜಡೇಶ್ವರ ಶಿವಾಚಾರ್ಯರ ಸ್ವಾಮೀಜಿ ಅವರ ಗದ್ದುಗೆಗೆ ಶ್ರೀ ಮಠದ ಪೂಜ್ಯರ ಸಾನ್ನಿಧ್ಯದಲ್ಲಿ ವಿರೂಪಾಕ್ಷಯ್ಯ ಹಿರೇಮಠಶಾಸ್ತ್ರಿ ಅವರಿಂದ ವಿಶೇಷ ಪೂಜಾ ಕಾರ್ಯ ಕೈಗೊಳ್ಳಲಾಯಿತು.

ಶ್ರೀ ರೇವಣಸಿದ್ಧೇಶ್ವರ ಬೆಟ್ಟದಿಂದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯರ ಮೆರವಣಿಗೆಯು ಸಕಲ ವಾಧ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿತು. ನಂತರ ಸಂಜೆ ಗ್ರಾಮದ ಕೆಂಪಿಕೆರೆಯಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಸಮ್ಮುಖದಲ್ಲಿ ಜಲ ರಥೋತ್ಸವ ಜರುಗಿತು. ಗ್ರಾಮದ ಹಿರಿಯರು, ಮುಖಂಡರು ಗ್ರಾಪಂ ಆಡಳಿತ ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು