ಮೈಸೂರು: ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಬ್ಯಾಂಕುಗಳ ಸಹಯೋಗದೊಂದಿಗೆ ಪಿ.ಎಂ ಸ್ವ-ನಿಧಿ ಮತ್ತು ಸ್ವ-ನಿಧಿ ಸೇ ಸಮೃದ್ಧಿ ಮಾಸ ಆಚರಣೆಯನ್ನು ಸೆ.16 ರಂದು ಮಧ್ಯಾಹ್ನ 12 ಗಂಟೆಗೆ ದೊಡ್ಡ ಗಡಿಯಾರದ ಎದುರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸದರಿ ಕಾರ್ಯಕ್ರಮದಲ್ಲಿ ಪಿಎಂ ಶ್ರೀನಿಧಿ ಯೋಜನೆ ಅಡಿ ಬ್ಯಾಂಕುಗಳಿoದ ಸಾಲ ಮಂಜೂರಾತಿ ಮತ್ತು ವಿತರಣೆ ಕ್ಯೂಆರ್ ಕೋಡ್ ವಿತರಣೆ ವಿವಿಧ ಇಲಾಖೆಗಳಿಂದ ಕೇಂದ್ರ ಸರ್ಕಾರದ 8 ಕಲ್ಯಾಣ ಕಾರ್ಯಕ್ರಮಗಳ ಜೋಡಣೆ ಪಿಎಂ ಶ್ರೀನಿಧಿ ಯೋಜನೆಗೆ ಹಾಲು ಮಾರಾಟ ಮತ್ತು ದಿನಪತ್ರಿಕೆ ಮಾರಾಟಗಾರರನ್ನು ಸೇರ್ಪಡೆ ಮಾಡಿಕೊಂಡು ನೋಂದಾಯಿಸಲಾಗುವುದು. ವಿವಿಧ ಬೀದಿಬದಿ ವ್ಯಾಪಾರಿಗಳನ್ನು ಸಹ ನೋಂದಾಯಿಸಲು ಕ್ರಮ ವಹಿಸಲಾಗುವುದು. ಅಲ್ಲದೆ ಬೀದಿಬದಿ ವ್ಯಾಪಾರಿಗಳಿಗೆ ವೈದ್ಯಕೀಯ ಶಿಬಿರ ಏರ್ಪಡಿಸಲಾಗುವುದು.
ಆದ್ದರಿಂದ ಸದರಿ ಕಾರ್ಯಕ್ರಮಕ್ಕೆ ನಗರ ವ್ಯಾಪ್ತಿಯೊಳಗಿನ ಬೀದಿಬದಿ ವ್ಯಾಪಾರಸ್ಥರು ಮತ್ತು ಫಲಾನುಭವಿಗಳು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮೈಸೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.