ಲಿಂಗದಹಳ್ಳಿಯಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆಯಲ್ಲಿ ತರೀಕೆರೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ಎಂ.ಉಮಾಶಂಕರ್, ರಾಜೇಶ್ವರಿ, ಕೆ.ವಿ.ನಾಗೇಶ್ ಗೌಡ, ಶಂಕರಪ್ಪ, ಸುಂದರೇಶ್ ಗೌಡ, ತಮ್ಮಣ್ಣ ಇದ್ದರು.  
ಜಿಲ್ಲೆ

ಜೂ.27ರಂದು ಕೆಂಪೇಗೌಡ ಜಯಂತಿ ಆಚರಣೆ

ಲಿಂಗದಹಳ್ಳಿ: ತರೀಕೆರೆಯಲ್ಲಿ ಜೂ.27ರಂದು ನಾಡಪ್ರಭು ಕೆಂಪೇಗೌಡ ಜಯಂತಿ ಅದ್ದೂರಿಯಾಗಿ ಆಚರಿಸಲಾಗುವುದು. ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ನೂತನ ಸದಸ್ಯರಾದ ಎಸ್.ಎಲ್.ಬೋಜೇಗೌಡ, ಸಿ.ಟಿ.ರವಿ ಹಾಗೂ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರನ್ನು ಆಹ್ವಾನಿಸಲಾಗುವುದು ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ಎಂ.ಉಮಾಶಂಕರ್ ತಿಳಿಸಿದರು.

ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ತರೀಕೆರೆ ತಾಲೂಕಿನಲ್ಲಿ ಕಸಬಾ, ಲಕ್ಕವಳ್ಳಿ, ಲಿಂಗದಹಳ್ಳಿ ಹೋಬಳಿಗಳಲ್ಲಿ ಹೆಚ್ಚಿನ ಸಂಖ್ಯೆಯ ಒಕ್ಕಲಿಗರು ಇದ್ದಾರೆ. ಪ್ರತಿ ವರ್ಷ ಒಂದೊಂದು ಹೋಬಳಿ ಮುಖ್ಯಕೇಂದ್ರಗಳಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮ ನಡೆದರೆ ಆಯಾ ಹೋಬಳಿ ಒಕ್ಕಲಿಗರಿಗೆ ಅನುಕೂಲವಾಗಲಿದೆ ಎಂದರು.
ಇದಕ್ಕೆ ಸ್ಪಂದಿಸಿದ ಲಿಂಗದಹಳ್ಳಿ ಹೋಬಳಿ ಒಕ್ಕಲಿಗರ ಸಂಘದ ಅಧ್ಯಕ್ಷ ತಮ್ಮಯ್ಯ, ಹೋಬಳಿಯಲ್ಲಿ ಕಳೆದ ಬಾರಿ ಭೀಕರ ಬರಗಾಲವಿದ್ದ ಕಾರಣ ಕಾರ್ಯಕ್ರಮ ನಡೆಸಲು ಕಷ್ಟಕರವಾಗಿತ್ತು. ಮುಂಬರುವ ವರ್ಷಗಳಲ್ಲಿ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಡುವುದಾಗಿ ತಿಳಿಸಿದರು.
ಲಕ್ಕವಳ್ಳಿ ಹೋಬಳಿಯಲ್ಲಿಯೂ ಸ್ವಲ್ಪ ಅಡಚಣೆಗಳಿರುವ ಕಾರಣ ಈ ಬಾರಿ ತರೀಕೆರೆಯಲ್ಲೇ ಕಾರ್ಯಕ್ರಮ ನಡೆಸೋಣ ಎಂದು ಲಕ್ಕವಳ್ಳಿ ಹೋಬಳಿ ಒಕ್ಕಲಿಗರ ಸಂಘದ ಪದಾಧಿಕಾರಿಗಳು ತಿಳಿಸಿದರು.
ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಟಿ.ವಿ.ನಾಗೇಶ್ ಗೌಡ, ಶಂಕರೇಗೌಡ, ಎಂ.ಸಿ.ಹಳ್ಳಿ ದೇವೇಗೌಡ, ಕಾರ್ಯದರ್ಶಿ ಸುಂದರೇಶ ಗೌಡ, ಟಿ.ಎಂ.ಕೃಷ್ಣ, ಭೀಮೇಶ್, ನಂದಕುಮಾರ್, ಕುಮಾರ, ಮಹಿಳಾ ಚುಂಚಶ್ರೀ ಘಟಕದ ಅಧ್ಯಕ್ಷೆ ರಾಜೇಶ್ವರಿ, ಕಾರ್ಯದರ್ಶಿ ಕಲಾವತಿ, ಲಿಂಗದಹಳ್ಳಿ ಹೋಬಳಿ ಘಟಕದ ಕಾರ್ಯದರ್ಶಿ ಎಂ.ಆರ್.ಧನಂಜಯ, ಸಿದ್ದಯ್ಯ, ಚಂದ್ರಪ್ಪ ಇದ್ದರು.