ಗುಳೇದಗುಡ್ದದ ಗೋಸ್ವಾಮಿ ಶ್ರೀರಾಮಭಾರತಿ ಮಠದಲ್ಲಿ ದತ್ತ ಜಯಂತಿ ಆಚರಿಸಲಾಯಿತು. 
ಜಿಲ್ಲೆ

ಸಂಭ್ರಮದ ದತ್ತ ಜಯಂತಿ ಆಚರಣೆ

Vijayapura - Desk - Gurappa Lokuri

ಗುಳೇದಗುಡ್ಡ: ಪಟ್ಟಣದ ಗೋಸ್ವಾಮಿ ಶ್ರೀರಾಮಭಾರತಿ ಮಠದಲ್ಲಿ ಶ್ರೀಗುರು ದತ್ತಾತ್ರೆಯ ಜಯಂತಿ ಮಹೋತ್ಸವದಂಗವಾಗಿ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಬೆಳಗ್ಗೆಯಿಂದ ಪುಣ್ಯಾವಾಚನ, ರುದ್ರಾಭಿಷೇಕ, ಮಹಾಪೂಜೆ ಕಾರ್ಯಕ್ರಮಗಳು ನಡೆದವು. ಶ್ರೀಗುರು ದತ್ತಾತ್ರೇಯರಿಗೆ ತೊಟ್ಟಿಲೋತ್ಸವ, ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು. ದೇವರಿಗೆ ವಿಶೇಷ ಹೂಗಳಿಂದ ಅಲಂಕರಿಸಲಾಗಿತ್ತು.

ಕಾಶೀನಾಥ ಮಹಾಸ್ವಾಮಿಗಳು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.

ಚಿದಾನಂದಸಾ ಕಾಟವಾ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಶಿಲ್ಪಾ ಶೀಲವಂತ, ಸರೋಜಾ ಭಾರತಿ, ಸವಿತಾ ಭಾರತಿ, ಪ್ರೇಮಾ ಭಾರತಿ, ಜಾನಕಿ ನರೆಗಲ್ಲ, ಮೀನಾಕ್ಷಿ ಅಂಬೇಕರ, ಸುಜಾತ ಬೋನಗೇರಿ ಸುವರ್ಣ ಅಂಗಡಿ, ಪ್ರತಿಭಾ ಕಠಾರಿಯಾ, ಪದ್ಮಾ ಪಾಟೀಲ ಮತ್ತಿತರರು ದತ್ತ ದೇವರ ತೊಟ್ಟಿಲೋತ್ಸವ ನೆರವೇರಿಸಿದರು.

ಮಾಜಿ ಶಾಸಕ ರಾಜಶೇಖರ ಶೀಲವಂತ, ಚಂದ್ರು ನರೇಗಲ್ಲ, ಪ್ರಭಾಕರ ಜೋಶಿ, ಮಹೇಶ ಭಾರತಿ, ಮಂಜುನಾಥ ಭಾರತಿ, ಶ್ರೀರಾಮ ಭಾರತಿ, ಸಂಪತ್ತಕುಮಾರ ರಾಠಿ, ಕಮಲಕಿಶೋರ ಮಾಲಪಾಣಿ, ಪ್ರಕಾಶ ಮುರಗೋಡ ಮತ್ತಿತರರಿದ್ದರು.