ತೇರದಾಳ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ನಡೆಯಿತು. 
ಜಿಲ್ಲೆ

ಅಲ್ಲಮಪ್ರಭು ಪಲ್ಲಕ್ಕಿ ಉತ್ಸವದ ಸಂಭ್ರಮ

ತೇರದಾಳ: ಸಂಕ್ರಮಣ ನಿಮಿತ್ತ ಮಂಗಳವಾರ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ಪಲ್ಲಕ್ಕಿ ಉತ್ಸವ ಸಕಲ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.

ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜಾದಿಗಳು ನಡೆದವು. ಸಿದ್ಧೇಶ್ವರ ದೇವಸ್ಥಾನ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಸಂಚರಿಸಿತು.

ಪಲ್ಲಕ್ಕಿಯಲ್ಲಿ ಪ್ರಭುವಿನ ಮೂರ್ತಿ ಇಟ್ಟು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಶಾಸ್ತ್ರೋಕ್ತ ಸೇವೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದಿತು. ನಂದಿಕೋಲು ಉತ್ಸವ, ಜಾಂಜ್ ಪಥಾಕೆ ಸೇರಿ ವಿವಿಧ ವಾದ್ಯಗಳು ಉತ್ಸವಕ್ಕೆ ಮೆರುಗು ನೀಡಿದವು. ದಾರಿಯುದ್ದಕ್ಕೂ ಭಕ್ತರು ರಂಗೋಲಿ ಹಾಕಿ, ಉತ್ಸವಕ್ಕೆ ಪುಷ್ಪಮಳೆಗೆರೆದರು.

ಸಾವಿರಾರು ಭಕ್ತರು ನೈವೇದ್ಯ ಹಾಗೂ ಸಂಕ್ರಮಣದ ಸಿಹಿಯನ್ನು ಸಮರ್ಪಿಸಿ, ವರ್ಷಪೂರ್ತಿ ನಮ್ಮನ್ನು ಸುಖವಾಗಿ ನೋಡಿಕೊಳ್ಳುವಂತೆ ಪ್ರಭವಿನಲ್ಲಿ ನೈವೇದ್ಯ ಹಾಗೂ ಸಂಕ್ರಮಣದ ಸಿಹಿ ಸಮರ್ಪಿಸಿ, ಪ್ರಾರ್ಥಿಸಿದರು.