ಜಿಲ್ಲೆ

ಕರ್ನಾಟಕ 50ರ ಸಂಭ್ರಮಕ್ಕೆ ನ. 1ರಂದು ಚಾಲನೆ

ಧಾರವಾಡ: ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ' ಕರ್ನಾಟಕ ಸಂಭ್ರಮ- ೫೦ ಬೆಳಗಾವಿ ವಿಭಾಗ ಮಟ್ಟದ ವರ್ಷವಿಡೀ ಕಾರ್ಯಕ್ರಮಗಳ ಪೂರ್ವಭಾವಿ ಸಭೆ ಜರುಗಿಸಲಾಗಿದೆ. ವಿಭಾಗದ ಸಾಹಿತಿಗಳು, ಸಂಘ- ಸಂಸ್ಥೆಗಳ ಪದಾಽಕಾರಿಗಳಿಂದ ಸಲಹೆ ಪಡೆಯಲಾಗಿದೆ. ನ. ೧ರಂದು ಕಾರ್ಯಕ್ರಮಕ್ಕೆ ಅಽಕೃತವಾಗಿ ಚಾಲನೆ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಂಗಳವಾರ ಜರುಗಿದ ಪೂರ್ವಭಾವಿ ಸಭೆಯ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆ. ೨೮ರಂದು ಕಲಬುರ್ಗಿ ವಿಭಾಗ ಹಾಗೂ ಸೆ. ೪ರಂದು ಮೈಸೂರು ವಿಭಾಗದ ಸಭೆ ಇದೆ. ಎಲ್ಲ ವಿಭಾಗಗಳಲ್ಲಿ ಸಭೆ ಜರುಗಿಸಿ ಸಾಹಿತಿಗಳಿಂದ ಸಲಹೆಗಳನ್ನು ಕ್ರೋಢೀಕರಿಸಿಸಂಭ್ರಮ'ದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ಧಾರವಾಡದ ಸಭೆಯಲ್ಲಿ ೫೦ ವರ್ಷದ ಲೋಗೋ ಮÁಡುವುದು, ೫೦ ವರ್ಷಗಳ ಕಾವ್ಯ ಸಂಪುಟ ತಯÁರಿ ಮತ್ತು ಬಿಡುಗಡೆ ಸೇರಿ ಹಲವಾರು ಸಲಹೆ ಬಂದಿವೆ. ಒಬ್ಬ ಸಾಧಕರಿಗೆ `ಕರ್ನಾಟಕ ಪದ್ಮ' ಪ್ರಶಸ್ತಿ ಕೊಡುವ ಸಲಹೆಯೂ ಬಂದಿದೆ ಎಂದರು.
ಶತಮಾನದ ಹೊಸ್ತಿಲಲ್ಲಿರುವ ಮತ್ತು ಶತಮಾನ ಕಂಡ ಕನ್ನಡ ಶಾಲೆಗಳನ್ನು ಉಳಿಸಲು ಸರ್ಕಾರ ಅಗತ್ಯ ಕ್ರಮ ಕÊಗೊಳ್ಳುತ್ತಿದೆ. ಟ್ರಸ್ಟ್ಗಳ ಕಾರ್ಯಗಳಿಗೆ ಅನುಗುಣವಾಗಿ ಅನುದಾನ ಬಿಡುಗಡೆ ಮÁಡಲಾಗುವುದು. ಹಿರಿಯ ಸಂಶೋಧಕ ದಿ. ಡಾ. ಎಂ.ಎA. ಕಲಬುರ್ಗಿ ಅವರ ಹೆಸರಿನಲ್ಲಿ ಸ್ಮಾರಕ ಟ್ರಸ್ಟ್ ರಚನೆಗೆ ಕಾಂಗ್ರೆಸ್ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.