ಕುಂದಾಪುರ, ಬೈಂದೂರು ವಲಯ ಛಾಯಾಗ್ರಾಹಕ ಸಂಘ ವತಿಯಿಂದ ಉದಯ ಶಂಕರ್ ಪಡಿಯಾರ್, ವಿನ್ಸೆಂಟ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.  
ಜಿಲ್ಲೆ

ವಿಶ್ವ ಛಾಯಾಗ್ರಹಣ ದಿನ ಆಚರಣೆ

ಕುಂದಾಪುರ: ಸೌತ್ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್ ಕುಂದಾಪುರ, ಬೈಂದೂರು ವಲಯ ಛಾಯಾಗ್ರಾಹಕ ಸಂಘ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ, ಸನ್ಮಾನ ಕಾರ್ಯಕ್ರಮ ಸೋಮವಾರ ಕುಂದಾಪುರ ಛಾಯಾಗ್ರಾಹಕರ ಸೊಸೈಟಿ ಸಭಾಂಗಣದಲ್ಲಿ ನಡೆಯಿತು.

ಕುಂದಾಪುರ, ಬೈಂದೂರು ವಲಯ ಛಾಯಾಗ್ರಾಹಕ ಸಂಘ ಅಧ್ಯಕ್ಷ ದಿವಾಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಮಾಜಿ ಅಧ್ಯಕ್ಷ ಉದಯ ಶಂಕರ್ ಪಡಿಯಾರ್, ಹಿರಿಯ ಛಾಯಾಗ್ರಾಹಕ ವಿನ್ಸೆಂಟ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.

ಛಾಯಾಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘ ಕುಂದಾಪುರ ಅಧ್ಯಕ್ಷ ಗಿರೀಶ್ ಜಿ.ಕೆ., ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಸಲಹಾ ಸಮಿತಿ ಅಧ್ಯಕ್ಷ ದಿನೇಶ್ ಗೋಡೆ, ಪ್ರಧಾನ ಕಾರ್ಯದರ್ಶಿ ದಿನೇಶ್ ರಾಯಪ್ಪನಮಠ ಮೊದಲಾದವರು ಉಪಸ್ಥಿತರಿದ್ದರು. ದಿವಾಕರ ಶೆಟ್ಟಿ ಸ್ವಾಗತಿಸಿದರು. ರಾಘ ವಿಠಲವಾಡಿ ನಿರೂಪಿಸಿದರು.