ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತೀಯ ವೈದ್ಯಕೀಯ ಸಂಘ, ಶ್ರೀಯಾ ಕಾಲೇಜ್ ಆಫ್ ನರ್ಸಿಂಗ್ ಮಹಿಳಾ ವೈದ್ಯರ ವಿಭಾಗ ಮತ್ತು ಹು-ಧಾ ಮಹಾನಗರ ಪಾಲಿಕೆ ಆಸ್ಪತ್ರೆ ಸಹಯೋಗದಲ್ಲಿ ಪಾಲಿಕೆ ಆಸ್ಪತ್ರೆಯಲ್ಲಿ ಗುರುವಾರ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಿಸಲಾಯಿತು.
ಶ್ರೀಯಾ ಕಾಲೇಜಿನ ಶೈಕ್ಷಣಿಕ ಆಡಳಿತಾಧಿಕಾರಿ ಡಾ. ವಾಣಿ ಇರಕಲ್, ಎಚ್ಡಿಎಂಸಿ ವೈದ್ಯಕಿಯ ಅಧಿಕಾರಿ ಡಾ. ಅಶ್ವಿನಿ ಎ. ಕಾರ್ಯಕ್ರಮ ಉದ್ಘಾಟಿಸಿದರು. ಸ್ತನಪಾನದ ಮಹತ್ವ ಮತ್ತು ಸ್ತನಪಾನದ ಅಭ್ಯಾಸದ ಕುರಿತು ಮಾಹಿತಿ ನೀಡಲಾಯಿತು. ಶ್ರೀಯಾ ನರ್ಸಿಂಗ್ ಕಾಲೇಜಿನ ಬಿಎಸ್ಸಿ ನರ್ಸಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳು ಸ್ತನಪಾನ ಕುರಿತು ಕಿರುನಾಟಕ ಪ್ರದಶಿರ್ಸಿದರು.
ಡಾ.ವಿನಯ ಕುಲಕರ್ಣಿ, ಡಾ. ಕವಿತಾ ಡಿ., ಕೆ.ಎನ್. ರಾವ್, ರೇಖಾ ಬಿ., ಡಾ. ರೋಡಾ ಜೇಸುರಾಜ್, ಶ್ವೇತಾ ಪುರೋಹಿತ, ಸುಶ್ಮಿತಾ ಹೆಬ್ಬಳ್ಳಿ, ಕಾಲೇಜಿನ ವಿದ್ಯಾರ್ಥಿಗಳು, ಇತರರು ಇದ್ದರು. ತನುಜಾ ನಿರೂಪಿಸಿದರು.