ಜಿಲ್ಲೆ

ಸುಸಂಸ್ಕೃತ ಸಮಾಜಕ್ಕಾಗಿ ಸದೃಢ ಸಂಘಟನೆ : ಆತ್ಮಶಕ್ತಿ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ ಆಶಯ

ಬಂಟ್ವಾಳ: ನಾರಾಯಣ ಗುರುಗಳು ಮನುಕುಲವನ್ನು ಉದ್ಧಾರ ಮಾಡಿದ ಮಹಾನ್ ಮಾನವತಾವಾದಿ. ಅವರ ಸಂದೇಶ ಸರ್ವಾಕಾಲಿಕವಾಗಿದ್ದು, ಸರ್ವರ ಸಂಗದೊಂದಿಗೆ ಸುಸಂಸ್ಕೃತ ಸಮಾಜಕ್ಕಾಗಿ ಸಂಘಟನೆ ಬಲಪಡಿಸೋಣ ಎಂದು ಆತ್ಮಶಕ್ತಿ ಸಹಕಾರಿ ಸಂಘ ಅಧ್ಯಕ್ಷ ಚಿತ್ತರಂಜನ್ ಬೋಳಾರ ಹೇಳಿದರು.

ಪುದು ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆ ಹಾಗೂ ಕುಮ್ಡೇಲ್ ಮಹಿಳಾ ವೇದಿಕೆ ಅಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಜಯಂತಿ ಆಚರಣೆಯಲ್ಲಿ ಮಾತನಾಡಿದರು.

ಬ್ರಹ್ಮಶ್ರೀ ನಾರಾಯಣಗುರು ವೇದಿಕೆಯ ಲಾಂಛನ ಬಿಡುಗಡೆಗೊಳಿಸಲಾಯಿತು. ಗುರು ಸದನದ ಮೇಲ್ವಿಚಾರಕ ಲೋಕೇಶ್ ಕುಮ್ಡೇಲ್ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮಂಗಳೂರು ಬ್ರಹ್ಮಶ್ರೀ ನಾರಾಯಣಗುರು ವೇದಿಕೆ ಅಧ್ಯಕ್ಷ ಸುದರ್ಶನ್ ಡಿ.ಸುವರ್ಣ, ಕುಮ್ಡೇಲ್ ಬ್ರಹ್ಮಶ್ರೀ ನಾರಾಯಣಗುರು ವೇದಿಕೆ ಅಧ್ಯಕ್ಷ ನವೀನ್ ಪೂಜಾರಿ ಮಾರಿಪಳ್ಳ, ಗೌರವಧ್ಯಕ್ಷ ನಾಗಪ್ಪ ಪೂಜಾರಿ ಕಬೇಲ, ಮಹಿಳಾ ವೇದಿಕೆ ಅಧ್ಯಕ್ಷೆ ಭಾಗ್ಯವತಿ ನಾಗೇಶ್ ಕೋಟ್ಯಾನ್, ಗೌರವಾಧ್ಯಕ್ಷೆ ವೇದಾವತಿ ಶೇಖರ್ ಪೂಜಾರಿ, ಜಗದೀಶ್ ಪೂಜಾರಿ ಕುಮ್ಡೇಲ್, ಅಶೋಕ್ ಹೊಯ್ಗೆಗದ್ದೆ ಉಪಸ್ಥಿತರಿದ್ದರು. ಉಪಾಧ್ಯಕ್ಷ ಸಚಿನ್ ಪೂಜಾರಿ ಕೊಡ್ಮಾಣ್ ಸ್ವಾಗತಿಸಿದರು. ಸದಸ್ಯ ಬ್ರಿಜೇಶ್ ಅಂಚನ್ ಪ್ರಸ್ತಾವಿಸಿದರು. ಕಿಶೋರ್ ಕುಮಾರ್ ಸುಜೀರ್ ನಿರೂಪಿಸಿದರು. ಜತೆ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್ ಕುಮ್ಡೇಲ್ ವಂದಿಸಿದರು. ಬೆಳಗ್ಗೆ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಿತು.