ಜಿಲ್ಲೆ

ನಾಳೆ ಕೈಲ್ ಪೊವ್ದ್ ಆಚರಣೆ

ಆದರ್ಶ್. ಎಂ.ಕೆ.

ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಸೆ.೧ರಂದು ಮಡಿಕೇರಿ ಹೊರ ವಲಯದ ಕ್ಯಾಪಿಟಲ್ ವಿಲೇಜ್ ಮಂದ್‌ನಲ್ಲಿ ೩೦ನೇ ವರ್ಷದ ಕೈಲ್ ಪೊವ್ದ್

ಹಬ್ಬವನ್ನು ಸಾರ್ವತ್ರಿಕವಾಗಿ ಆಚರಿಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಮಂದ್‌ನಲ್ಲಿ ಆದಿಮಸಂಜಾತ ಬುಡಕಟ್ಟು ಜನಾಂಗ ಕೊಡವರಿಗೆ ಪ್ರಕೃತಿ ವರವಾಗಿ ನೀಡಿರುವ ತೋಕ್‌ಪೂವ್ ನಿಂದ ಬಂದೂಕುಗಳನ್ನು ಸಿಂಗರಿಸಿ ಪ್ರಾರ್ಥಿಸಲಾಗುವುದು. ನಂತರ ಪೂಜ್ಯ ಸ್ಥಾನದಲ್ಲಿರುವ ಗುರುಕಾರೋಣರಿಗೆ ಮೀದಿ ಅರ್ಪಿಸಿ ಸಿಎನ್‌ಯ ೩೫ ವರ್ಷದ ಹೋರಾಟಕ್ಕೆ ಕೃಪಾಶೀರ್ವಾದ ಕೋರಲಾಗುವುದು. ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್, ಹೆಸರಾಂತ ವೈದ್ಯರು ಹಾಗೂ ಸಮಾಜ ಸೇವಕರೂ ಆದ ಡಾ.ಮಾತಂಡ ಅಯ್ಯಪ್ಪ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.