ಜಿಲ್ಲೆ

ಅಲ್ತಾಫ್ ನಗರದಲ್ಲಿ ಈದ್ ಮೆರವಣಿಗೆ

Dharwada - Santosh Vaidya

ಹುಬ್ಬಳ್ಳಿ: ಈದ್ ಮಿಲಾದ್ ನಿಮಿತ್ತ ಅಲ್ತಾಫ್ ನಗರ ಮುಸ್ಲಿಂ ಪಂಚ ಕಮಿಟಿ ಹಾಗೂ ಯಂಗ್ ಕಮಿಟಿ ವತಿಯಿಂದ ಅಲ್ತಾಫ್ ನಗರದಲ್ಲಿ ಗುರುವಾರ ಮೆರವಣಿಗೆ ನಡೆಸಲಾಯಿತು.

ಮದರಸಾ ವಿದ್ಯಾರ್ಥಿಗಳು, ಯುವಕರು ಪಾಲ್ಗೊಂಡಿದ್ದರು. ಮೆರವಣಿಗೆಯ ಬಳಿಕ ಸಿಹಿ ವಿತರಿಸಲಾಯಿತು. ಅಂಜುಮನ್ ಮುಖಂಡ ಅಲ್ತಾಫ್ ಕಿತ್ತೂರ, ಅಲ್ಲಾಭಕ್ಷ ಸವಣೂರ, ಎಸ್.ಎಸ್. ಪಠಾಣ, ಎಂ.ಎ. ಅಣ್ಣಿಗೇರಿ, ಆಸೀಫ್ ಪಲ್ಲಾನ, ಶಾಕೀರ ಅಲಿ, ಅಬ್ದುಲ್ ಹಕೀಂ ತಹಸೀಲ್ದಾರ, ಶರೀಫ್ ಕಲಾದಗಿ, ಅಬ್ದುಲ್ ಖಾದರ , ಇತರರು ಇದ್ದರು.

ಮೆರವಣಿಗೆ ಬಳಿಕ ಸಮಾಜದ ಪ್ರಮುಖರು ಆಸಾರ ಮೊಹಲ್ಲಾಗೆ ತೆರಳಿ, ಪ್ರವಾದಿ ಹಜರತ್ ಮಹ್ಮದ್ ಪೈಗಂಬರ್​ರ ಕೇಶ ದರ್ಶನ ಮಾಡಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಇಕ್ಬಾಲ್ ನವಲೂರ, ಜಹೀರುದ್ದಿನ್ ಕಿಲ್ಲೆದಾರ, ನಜೀರ ಮೀರಜಕರ್, ಅಹ್ಮದ್ ಕಿತ್ತೂರ, ಬಶೀರ ಅರಳಿಕಟ್ಟಿ, ಇತರರು ಇದ್ದರು.