ಕೊಲ್ಹಾರ: ಹೋಳಿ ಹಬ್ಬವನ್ನು ಎಲ್ಲರೂ ಸೌಹಾರ್ದ ಹಾಗೂ ಶಾಂತಿಯುತವಾಗಿ ಆಚರಿಸಬೇಕೆಂದು ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ ಸಲಹೆ ನೀಡಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಬ್ಬದಲ್ಲಿ ವಿನಾಕಾರಣ ಸಾರ್ವಜನಿಕರ ಬಣ್ಣ ಎರಚಬಾರದು. ಸದ್ಯ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿದ್ದರಿಂದ ಪರೀಕ್ಷೆಗೆ ತೆರಳುವ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಯಾರಾದರೂ ಬಣ್ಣ ಎರಚಿದರೆ ಅಂತವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಹಬ್ಬದ ಸಂದರ್ಭ ಡಿಜೆ ಸೌಂಡ್ ಹಚ್ಚಿ ಕಿರಿಕಿರಿ ಮಾಡಬಾರದು. ಯಾರಾದರೂ ಶಾಂತಿ- ಕೋಮು-ಗಲಭೆ ಸೃಷ್ಟಿಸಲು ಮುಂದಾದರೆ ಅಂತವರ ವಿರುದ್ಧ ಪೊಲೀಸ್ ಠಾಣೆಗೆ ಅಥವಾ ಸಹಾಯವಾಣಿ 112ಕ್ಕೆ ಕರೆ ಮಾಡಿ ತಿಳಿಸಬೇಕೆಂದು ಮನವಿ ಮಾಡಿದರು.
ಉಸ್ಮಾನ್‌ಪಟೇಲ್, ಪಿಎಸ್‌ಐ ಎಂ. ಬಿ. ಬಿರಾದಾರ, ರಫೀಕ್ ಪಕಾಲಿ, ಸಿ. ಎಸ್. ಗಿಡ್ಡಪ್ಪಗೋಳ, ಪಪಂ ಮುಖ್ಯಾಧಿಕಾರಿ ಉಮೇಶ ಚಲವಾದಿ, ಶಂಕ್ರಯ್ಯ ಗಣಕುಮಾರ, ಟಿ.ಟಿ. ಹಗೇದಾಳ, ಮಂಜುನಾಥ ತುಂಬರಮಟ್ಟಿ, ರಾಘವೇಂದ್ರ ಬಡಿಗೇರ, ತೌಶೀಫ್ ಗಿರಗಾವಿ ಇತರರಿದ್ದರು.