ಕೂಡ್ಲಿಗಿ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಹಾಗೂ ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ವಿ.ಕೆ.ನೇತ್ರಾವತಿ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ, ಬಿಇಒ ಎಸ್.ಎಸ್.ಜಗದೀಶ್, ವಿಶ್ವಕರ್ಮ ಸಮಾಜದ ಬಿ.ನಾಗರಾಜ, ಪ್ರಮುಖರಾದ ಶ್ರೀಧರ ಆಚಾರಿ, ಮಂಜುನಾಥ ಆಚಾರಿ, ಮೌನೇಶ್ ಆಚಾರಿ, ನಾಗರಾಜ ಆಚಾರಿ, ಚನ್ನಬಸವ ಆಚಾರಿ ಇದ್ದರು. 
ಜಿಲ್ಲೆ

ಮಹನೀಯರ ಜಯಂತಿ ಅರ್ಥಪೂರ್ಣವಾಗಿ ಆಚರಿಸಿ

ಕೂಡ್ಲಿಗಿ: ಮನು ಕುಲದ ಸುಂದರ ಶಿಲ್ಪಿ ವಿಶ್ವಕರ್ಮ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಹೇಳಿದರು.

ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜದಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕೇವಲ ಆಚರಣೆಗೆ ಸೀಮಿತ ಮಾಡದೇ ಸರ್ಕಾರ ಈಗಾಗಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುವ ಸೌಲಭ್ಯಗಳ ಬಗ್ಗೆ ಬಿಸಿಎಂ ಅಧಿಕಾರಿಗಳು ಜಯಂತಿ ದಿನದಂದು ವಿಸ್ತಾರವಾಗಿ ತಿಳಿಸಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಇಲಾಖೆಯಲ್ಲಿ ಆಚರಿಸಿ ಜತೆಗೆ ತಾಲೂಕು ಆಡಳಿತದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ನಿಮಿತ್ತ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ಮಾಡಿ ಸರ್ದಾರ್ ವಲ್ಲಭಭಾಯಿ ಪಟೇಲ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆಚರಣೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ನಿಮಿತ್ತ ಸೆ.15 ರಂದು ಬೆಳಗ್ಗೆ 7:30 ಕ್ಕೆ ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರಿಗೆ ಸೈಕಲ್ ಜಾಥಾ ಹಾಗೂ ಬೈಕ್ ರ‌್ಯಾಲಿ ಆಯೋಜಿಸಿಸಲಾಗಿದೆ. ಅಂಬೇಡ್ಕರ್ ವೃತ್ತ, ಸಂತೆ ಮಾರ್ಕೆಟ್ ರಸ್ತೆ ಹಾಗೂ ಪ್ರಮುಖ ಸ್ಥಳದಲ್ಲಿ ಸಂವಿಧಾನದ ಪೀಠಿಕೆ ಓದಲು ತೀರ್ಮಾನಿ ಸಲಾಗಿದೆ ಎಂದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ, ನಿಕಟಪೂರ್ವ ಅಧ್ಯಕ್ಷ ಪಿ.ಶಿವರಾಜ, ಬಿಇಒ ಎಸ್.ಎಸ್.ಜಗದೀಶ್, ಜಿಪಂ ಎಇಇ ಮಲ್ಲಿಕಾರ್ಜುನ, ಪಪಂ ಮುಖ್ಯಾಧಿಕಾರಿ ಎಚ್.ದಾದಾಪೀರ್, ಎಸ್‌ಎವಿಟಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಷಣ್ಮುಖನ ಗೌಡ, ವಿಶ್ವಕರ್ಮ ಸಮಾಜದ ಬಿ.ನಾಗರಾಜ, ಪ್ರಮುಖರಾದ ಶ್ರೀಧರ ಆಚಾರಿ, ಮಂಜುನಾಥ ಆಚಾರಿ, ಮೌನೇಶ್ ಆಚಾರಿ, ನಾಗರಾಜ ಆಚಾರಿ, ಚನ್ನಬಸವ ಆಚಾರಿ, ಬಸವರಾಜ ಆಚಾರಿ ಇತರರಿದ್ದರು.