ರಬಕವಿ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಶಾಂತಿಪಾಲನಾ ಸಭೆಯಲ್ಲಿ ತೇರದಾಳ ಪೊಲೀಸ್ ಠಾಣೆ ಪಿಎಸ್‌ಐ ಅಪ್ಪು ಐಗಳಿ ಮಾತನಾಡಿದರು. ರಾಮಣ್ಣ ಹುಲಕುಂದ, ಮಹಾದೇವ ದೂಪದಾಳ, ಸಂಜು ತೆಗ್ಗಿ ಮತ್ತಿತರರಿದ್ದಾರೆ. 
ಜಿಲ್ಲೆ

ಶಾಂತಿ ಸೌಹಾರ್ದದಿಂದ ಹೋಳಿ ಆಚರಿಸಿ

ವಿನಯ ಆಶೋಕ ನಾಯ್ಕ

ರಬಕವಿ/ಬನಹಟ್ಟಿ: ರಾಸಾಯನಿಕ ಬಣ್ಣಗಳನ್ನು ಬಳಸದೆ, ಕಾನೂನಿನ ಚೌಕಟ್ಟಿನಲ್ಲಿಯೇ ಶಾಂತಿ ಸೌಹಾರ್ದದಿಂದ ಹೋಳಿ ಆಚರಿಸಬೇಕು ಎಂದು ತೇರದಾಳ ಪೊಲೀಸ್ ಠಾಣೆ ಪಿಎಸ್‌ಐ ಅಪ್ಪು ಐಗಳಿ ತಿಳಿಸಿದರು.

ರಬಕವಿಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ಹೋಳಿ ಹಾಗೂ ರಂಜಾನ್ ಹಬ್ಬಗಳ ಆಚರಣೆ ವೇಳೆ ಯಾರೊಬ್ಬರಿಗೂ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಜತೆಗೆ ಪಿಯು ಪರೀಕ್ಷೆಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳ ಮೇಲೆ ಬಣ್ಣ ಎರಚಬೇಡಿ ಎಂದರು.

ಯುವಕರು ದ್ವಿಚಕ್ರ ವಾಹನದಲ್ಲಿ ವಿಪರೀತ ಧ್ವನಿ ಹೊರಡಿಸಿದರೆ ಅಂಥ ವಾಹನಗಳನ್ನು ಸೀಜ್ ಮಾಡಲಾಗುವುದು. ನಗರದ ಶಂಕರಲಿಂಗ ದೇವಸ್ಥಾನ ಆವರಣದಲ್ಲಿ ಆಯೋಜಿಸಿರುವ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಹೋಳಿ ಆಚರಣೆ ಅಚ್ಚುಕಟ್ಟಾಗಿ ನೆರವೇರಬೇಕು. ಸಾರ್ವಜನಿಕರು ತಮ್ಮ ಜವಾಬ್ದಾರಿಗಳನ್ನು ಅರಿತು ಇಲಾಖೆಗೆ ಸಹಕಾರ ನೀಡಬೇಕು ಎಂದರು.

ರಾಮಣ್ಣ ಹುಲಕುಂದ, ಮಹಾದೇವ ದುಪದಾಳ, ಸಂಜು ತೆಗ್ಗಿ, ಮಾರುತಿ ನಾಯಿಕ, ಧರೆಪ್ಪ ಉಳ್ಳಾಗಡ್ಡಿ, ಪ್ರಭು ಪೂಜಾರಿ, ಉಸಮಾನಸಾಬ ಲೇಂಗ್ರೆ ಮಾತನಾಡಿದರು.

ಮಾರುತಿ ನಾಯಿಕ, ಮೋನಪ್ಪ ಹೆಗ್ಗಣ್ಣವರ, ಬಾಬು ಮಹಾಜನ, ಸುನೀಲ ಸಿಕ್ಕಲಗಾರ, ರವಿ ಮುತ್ತೂರ, ಚಂದ್ರಪ್ಪ ಹರಿಜನ, ಯಲ್ಲಪ್ಪ ಕಟಗಿ, ಚಂದ್ರು ಇಮ್ಮಡಿ, ಪ್ರಕಾಶ ಸಣಕಾಲ, ಈಶ್ವರ ನಾಗರಾಳ, ಮಲ್ಲಿಕಾರ್ಜುನ ಕುಚನೂರ, ಕೆ. ಎಸ್. ರಜಪುತ, ಮಲ್ಲಪ್ಪ ದೊಡ್ಡಟ್ಟಿ, ಪರಶುರಾಮ ಭಸ್ಮೆ ಮತ್ತಿತರರಿದ್ದರು.