ಜಿಲ್ಲೆ

4 ದಿನದ ಬಳಿಕ ನನ್ನ ಮಗಳನ್ನ ವಿಚಾರಣೆ ಮಾಡಿ, ಸದ್ಯ ಅವಳನ್ನು ನಮ್ಮ ವಶಕ್ಕೆ ಕೊಡಿ: ಸಿಡಿ ಲೇಡಿ ಪೋಷಕರ ಮನವಿ

arunakunigal

ಬೆಳಗಾವಿ: ಬೆಂಗಳೂರಿನ ಮ್ಯಾಜಿಸ್ಟ್ರೇಟ್​ ನ್ಯಾಯಾಲಯಕ್ಕೆ ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ಸಂತ್ರಸ್ತ ಯುವತಿ ಹಾಜರ್​ ಆಗ್ತಾಳೆ ಎಂಬ ಬೆನ್ನಲ್ಲೇ ಆಕೆಯ ಪೋಷಕರು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ನನ್ನ ಮಗಳಿಗೆ ಅನ್ಯಾಯ ಆಗಿದೆ. ಅವಳ ಮೇಲೆ ಒತ್ತಡ ಇರೋದ್ರಿಂದ ಆಕೆ ಹಾಗೆ ಹೇಳುತ್ತಿದ್ದಾಳೆ. ಒತ್ತಡಲ್ಲಿ ಹೇಳಿಕೆ ಪಡೆಯುವುದು ಬೇಡ. ನಾಲ್ಕು ದಿನ ಆದ ಮೇಲೆ ಆಕೆ ಸತ್ಯ ಹೇಳ್ತಾಳೆ. ಮಗಳಿಗೆ ಎಷ್ಟು ಚಿತ್ರಹಿಂಸೆ ಕೊಟ್ಟಿದ್ದಾರೋ ಗೊತ್ತಿಲ್ಲ. ಡಿಕೆಶಿ ಅವರಿಂದ ನನ್ನ ಮಗಳನ್ನು ಕಾಪಾಡಿ ಎಂದು ಕೈಮುಗಿದು ಕೇಳಿಕೊಂಡರು. ಇದನ್ನೂ ಓದಿರಿ ಬೆಳಗಾವಿ ಲೋಕಸಭೆ ಉಪಚುನಾವಣೆ: ಡಿಕೆಶಿ ಸಮ್ಮುಖದಲ್ಲೇ ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ

ನನ್ನ ಮಗಳನ್ನು ರಾಜಕೀಯ ದಾಳವಾಗಿದ್ದಾಳೆ. ಆಕೆ ನ್ಯಾಯಾಧೀಶರ ಮುಂದೆಯೇ ಬರಲಿ. ನನ್ನ ಮಗಳು ನಮ್ಮೊಂದಿಗೆ ಇರಲು ಬಯಸಿದರೆ ನಾನು ಆಕೆಯನ್ನು ಒಪ್ಪಿಕೊಳ್ಳಲು ಸಿದ್ಧರಿದ್ದೇವೆ ಎಂದು ಯುವತಿಯ ತಂದೆ ಹೇಳಿದರು. ಫೆ.6ರಂದು ನಮ್ಮ ಮಾವನ ಪುಣ್ಯತಿಥಿ ಕಾರ್ಯಕ್ರಮಕ್ಕೆ ನನ್ನ ಮಗಳು ಬಂದಿದ್ದಳು. ನನ್ನ ಪುತ್ರಿಗೆ ನಮ್ಮೊಂದಿಗೆ ಮಾತನಾಡಲು ಬಿಡುತ್ತಿಲ್ಲ. ನಾವು ಮಾನಸಿಕವಾಗಿ ಜರ್ಜರಿತರಾಗಿದ್ದೇವೆ ಎಂದು ಯುವತಿಯ ತಂದೆ ಕಣ್ಣೀರಿಟ್ಟರು.

ನಮಗೆ ಮನಗಳು ಮುಖ್ಯ. ನನ್ನ ಮಗಳಿಗೆ ಸ್ವಲ್ಪ ಫ್ರೀಮೈಂಡ್​ ಆಗಿರಲು ಬಿಡಿ. ಮೂರ್ನಾಲ್ಕು ದಿನದ ಆದ ಮೇಲೆ ಆಕೆ ಯಾವ ಹೇಳಿಕೆ ಕೊಡ್ತಾಳೋ ಅದನ್ನು ದಾಖಲಿಸಿಕೊಳ್ಳಿ. ಆಕೆ ಮೇಲಿನ ಒತ್ತಡದಿಂದ ಕೊಡುವ ಹೇಳಿಕೆ ಕೇಸ್​ ದಿಕ್ಕುತಪ್ಪಲಿದೆ ಎಂದು ಯುವತಿ ತಂದೆ ಹೇಳಿದರು.

ಆ ಪುಣ್ಯಾತ್ಮ ಹೇಳುತ್ತಿದ್ದ. ವಿಜಯಪುರದಲ್ಲಿ ದೂರು ಕೊಡಬೇಕಿತ್ತು ಎಂದು. ಬೆಳಗಾವಿಯಲ್ಲಿ ಕೊಡುವ ಬದಲು ಕನಕಪುರದಲ್ಲಿ ದೂರು ಕೊಡಬೇಕಿತ್ತೇ? ನಾವು 12 ವರ್ಷದಿಂದ ಬೆಳಗಾವಿಯಲ್ಲೇ ವಾಸವಿದ್ದೇವೆ. ಮೊದಲು ಆ ಡಿಕೆಶಿಯನ್ನ ಒಳಗೆ ಹಾಕಬೇಕು ಎಂದು ಯುವತಿ ಸಹೋದರ ಕಿಡಿಕಾರಿದರು.