ಜಿಲ್ಲೆ

ಕೋರ್ಟ್​ಗೆ ಬರ್ತಾಳೆ ಸಿಡಿ ಲೇಡಿ, ಕಾದುನಿಂತ 300 ಪೊಲೀಸರು! ಅದು ಯಾವ ಕೋರ್ಟ್​ ಗೊತ್ತಾ?

arunakunigal

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಕೇಸ್​ ಇಂದು ಸ್ಫೋಟಕ ತಿರುವು ಪಡೆದುಕೊಳ್ಳುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿದೆ. ನ್ಯಾಯಾಧೀಶರಿಗೆ ಪತ್ರ ಬರೆದಿರುವ ಯುವತಿ ಇಂದು ನೇರವಾಗಿ ಕೋರ್ಟ್​ಗೆ ಹಾಜರ್​ ಆಗ್ತಾಳಂತೆ.

ಯುವತಿ ನ್ಯಾಯಾಲಯಕ್ಕೆ ಬರುತ್ತಿದ್ದಾರೆ. ಅವರ ಜೊತೆ ಬೇರೆ ವಕೀಲರು ಬರುತ್ತಿದ್ದಾರೆ ಎಂದು ಸಿಡಿ ಲೇಡಿ ಪರ ವಕೀಲ ಜಗದೀಶ್ ತಿಳಿಸಿದ್ದಾರೆ. ಯುವತಿ ಹಾಜರಾಗುವ ಸಾಧ್ಯತೆ ಹಿನ್ನೆಲೆ ನೃಪತುಂಗ ರಸ್ತೆಯ ಎಸಿಎಂಎಂ ಕೋರ್ಟ್ ಬಳಿ ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್​ದ ಮುಂಭಾಗ ಮುನ್ನೂರಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಎರಡು ಕೆಎಸ್​ಆರ್​ಪಿ ತುಕಡಿಯೂ ಮೊಕ್ಕಾಂ ಹೂಡಿದೆ. ಯುವತಿ ಆಗಮಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಕೂಡ ಕೋರ್ಟ್ ಬಳಿ ದೌಡಾಯಿಸಿದ್ದಾರೆ.

ಇತ್ತ ಸೋಮವಾರ ಬೆಳಗ್ಗೆ 10 ಗಂಟೆಗೆ ರಮೇಶ್​ ಜಾರಕಿಹೊಳಿ ಆಡುಗೋಡಿಯ ಟೆಕ್ನಿಕಲ್ ಸೆಂಟರ್‌ಗೆ ಆಗಮಿಸಿದ್ದು, ಎಸ್​ಐಟಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಈಗಾಗಲೇ 2 ಬಾರಿ ರಮೇಶ್ ಜಾರಕಿಹೊಳಿ ಹೇಳಿಕೆ ಪಡೆದಿರುವ ಎಸ್‌ಐಟಿ, ಇದೀಗ ಮೂರನೇ ಬಾರಿ ವಿಚಾರಣೆ ನಡೆಸುತ್ತಿದೆ.

ಸದಾಶಿವನಗರದ ರಮೇಶ್ ಜಾರಕಿಹೊಳಿ‌ ನಿವಾಸದ‌ ಬಳಿಯೂ ಪೊಲೀಸ್​ ಭದ್ರತೆ ಕಲ್ಪಿಸಲಾಗಿದೆ. ನಿನ್ನೆ-ಮೊನ್ನೆ ರಮೇಶ್ ಜಾರಕಿಹೊಳಿ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಯತ್ನಿಸಿದ್ದರು. ಹಾಗಾಗಿ ಹೆಚ್ಚಿದ ಭದ್ರತೆ ಮಾಡಲಾಗಿದೆ.