ಜಿಲ್ಲೆ

ಇಂದಿನಿಂದ ಸಿಡಿ ಹಬ್ಬ, ಬ್ರಹ್ಮ ರಥೋತ್ಸವ

ಪ್ರಸಿನ್ ಕೆ.ಆರ್

ಕೆ.ಆರ್.ಪೇಟೆ: ತಾಲೂಕಿನ ಕಸಬಾ ಹೋಬಳಿಯ ಅಗ್ರಹಾರಬಾಚಹಳ್ಳಿ ಗ್ರಾಮ ದೇವತೆ ಶ್ರೀ ಲಕ್ಷ್ಮೀ ದೇವಮ್ಮನವರ ಸಿಡಿ ಹಬ್ಬ ಹಾಗೂ ಬ್ರಹ್ಮ ರಥೋತ್ಸವ ಮೇ 4ರಿಂದ ಮೇ 6ರವರೆಗೆ ಜರುಗಲಿದೆ.

ಹಬ್ಬಹ ಹಿನ್ನೆಲೆಯಲ್ಲಿ ಗ್ರಾಮವು ನವ ವಧುವಿನಂತೆ ಸಿಂಗಾರಗೊಂಡಿದೆ. ಮೇ 4ರಂದು ಶ್ರೀ ಲಕ್ಷ್ಮೀದೇವಿ ಅಮ್ಮನವರ ಬ್ರಹ್ಮ ರಥೋತ್ಸವ ಮಧ್ಯಾಹ್ನ 3ಗಂಟೆಗೆ ನಡೆಯಲಿದೆ. ರಾತ್ರಿ 8ಗಂಟೆಗೆ ಶ್ರೀ ಲಕ್ಷ್ಮೀದೇವಿ ನಾಟಕ ಮಂಡಳಿ ವತಿಯಿಂದ ಕುರುಕ್ಷೇತ್ರ ನಾಟಕ ಪ್ರದರ್ಶನ ಇರುತ್ತದೆ. ಮೇ 5ರಂದು ಓಕುಳಿಯಾಟ, ಜಾತ್ರೆ, ಇತರ ಕಾರ್ಯಕ್ರಮಗಳು ಜರುಗಲಿವೆ.

ಮೇ 6ರಂದು ಸೋಮವಾರ ಸೋಮನ ಕುಣಿತ, ಮನೆ ಮನೆಗಳಲ್ಲಿ ಸೋಮ ದೇವರ ಪೂಜೆ, ಕೋಸಂಬರಿ ಪ್ರಸಾದ, ಮಜ್ಜಿಗೆ, ಪಾನಕ ವಿತರಣೆ, ಕಾರ್ಯಕ್ರಮಗಳು ನೆರವೇರಲಿದೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಥೋತ್ಸವ, ಜಾತ್ರಾ ಮಹೋತ್ಸವ ಹಾಗೂ ಸಿಡಿ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಲಕ್ಷ್ಮೀದೇವಿ ಸಿಡಿ ಹಬ್ಬ ಆಚರಣ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.