ಕೆರೂರ : ಗಣೇಶ-ಈದ ಮಿಲಾದ ಹಬ್ಬದ ಹಿನ್ನಲೆಯಲ್ಲಿ, ಅಪರಾಧಿ ಕೃತ್ಯಗಳನ್ನು ತಡೆಗಟ್ಟಲು ಪಟ್ಟಣದ ವಿವಿಧ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಡಿವೈಎಸ್ ಪಿ ವಿಶ್ವನಾಥರಾವ ಕುಲಕರ್ಣಿ ಹೇಳಿದರು.
ಅವರು ಸೋಮವಾರ ಪಟ್ಟಣದಲ್ಲಿ ಗಣೇಶ-ಈದ ಮಿಲಾದ ಹಬ್ಬದ ಹಿನ್ನೆಲೆಯಲ್ಲಿ ನಡೆದ ಪೋಲೀಸ್ ಪಥ ಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು.
ಹಬ್ಬ ಹಾಗೂ ಇನ್ನಿತರ ದಿನಗಳಲ್ಲಿ ನಡೆಯುವ ಅಹಿತಕರ ಘಟನೆ,ಕಳ್ಳತ,ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಉದ್ದೇಶದಿಂದ ಪಟ್ಟಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ 16 ಸಿಸಿ ಕ್ಯಾಮರಾ,ಪಟ್ಟಣ ಪಂಚಾಯಿತಿ ವತಿಯಿಂದ 25 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಕರಿಯಪ್ಪ ಬನ್ನೆ, ಪಿಎಸ್ ಐ ಭೀಮಪ್ಪ ರಬಕವಿ, ಕ್ರೈಂ ಪಿಎಸ್‌ಐ ಐ.ಎಂ.ಹಿರೇಗೌಡರ ಇದ್ದರು.