ಕಾಸರಗೋಡು: ಪೈವಳಿಕೆ ಪಂಚಾಯಿತಿ ಕಳಾಯಿ ನಿವಾಸಿ ಅಶೋಕ್ ಕುಮಾರ್ ಶೆಟ್ಟಿ ಅವರ ಮನೆಯಿಂದ 50 ಸಾವಿರ ರೂ. ನಗದು, ಸಿಸಿ ಕ್ಯಾಮರಾ ಸಲಕರಣೆ ಕಳವುಗೈದಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಅಶೋಕ್ ಕುಮಾರ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಅವರ ತಂದೆ ಮಾತ್ರ ವಾಸಿಸುತ್ತಿದ್ದಾರೆ. ಜೂನ್ 8ರಂದು ಬೆಳಗ್ಗೆ ಅಶೋಕ್‌ಕುಮಾರ್ ಅವರ ತಂದೆಗೆ ಆಹಾರ ನೀಡಲು ನಿತ್ಯ ಮನೆಗೆ ಆಗಮಿಸುತ್ತಿದ್ದ ಅವರ ಸಂಬಂಧಿ ಮನೆಗೆ ಬಂದಾಗ ಅಡುಗೆ ಕೊಠಡಿ ಬಾಗಿಲು ತೆರೆದಿರುವುದು ಕಂಡುಬಂದಿತ್ತು. ನಂತರ ಅಶೋಕ್ ಕುಮಾರ್ ಆಗಮಿಸಿ ತಪಾಸಣೆ ನಡೆಸಿದಾಗ ಕಳವು ಬೆಳಕಿಗೆ ಬಂದಿದೆ. ಅಶೋಕ್ ಕುಮಾರ್ ನೀಡಿದ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.