ಜಿಲ್ಲೆ

ಸಿಸಿಐಎಂ ಕ್ರಮ ಅವೈಜ್ಞಾನಿಕ ; ಡಿಸಿಗೆ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳಿಂದ ದೂರು

Tumakuru

ತುಮಕೂರು:ಆಯುರ್ವೇದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಎಂಎಸ್ ಜನರಲ್ ಸರ್ಜನ್ ಎಂದು ಪದವಿ ನೀಡುವಂತೆ ಸಿಸಿಐಎಂ ತೆಗೆದುಕೊಂಡಿರುವ ಕ್ರಮ ಅವೈಜ್ಞಾನಿಕವಾಗಿದ್ದು, ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಪತ್ರ ರವಾನಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದ ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ಡಾ.ಶ್ರೀನಾಥ್, ಕೇಂದ್ರ ಸರ್ಕಾರ, ಸಿಸಿಐಎಂ ತನ್ನ ವಿದ್ಯಾರ್ಥಿಗಳಿಗೆ ಆಧುನಿಕ ಔಷಧ ಶಸ್ತ್ರಚಿಕಿತ್ಸೆ ಮತ್ತು ಅವರ ಅಭ್ಯಾಸವನ್ನು ಸ್ವತಂತ್ರವಾಗಿ ಅಭ್ಯಾಸ ವಾಡಲು ಅವಕಾಶ ನೀಡಿ ಆದೇಶ ಹೊರಡಿಸಿರುವುದು ಅವೈಜ್ಞಾನಿಕವಾಗಿದ್ದು, ಆರ್ಯುವೇದ ಮತ್ತು ಆಧುನಿಕ ವೈದ್ಯ ಪದ್ಧತಿ ಸಮ್ಮಿಶ್ರಗೊಳಿಸಿ ಹೈಬ್ರಿಡ್ ವೈದ್ಯ ನಿರ್ಮಿಸಲು ಹೊರಟಿದೆ ಎಂದು ದೂರಿದರು.

ಸಿಸಿಐಎಂ ಆಯುರ್ವೇದ ವೈದ್ಯರು ವಾಡಬಹುದಾದ ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳ ಪಟ್ಟಿ ನೀಡಿದ್ದು, ಕೆಲ ಆಯುರ್ವೇದ ವೈದ್ಯರು ಶಸ್ತ್ರ ಚಿಕಿತ್ಸೆಯನ್ನು ವಾಡುತ್ತಿದ್ದು ಸಿಸಿಐಎಂನ ಆದೇಶ ಪ್ರಕಾರ ಇನ್ನು ಮುಂದೆ ಅಧಿಕೃತವಾಗಿಯೇ ಶಸ್ತ್ರ ಚಿಕಿತ್ಸೆಯಲ್ಲಿ ಪಾಲ್ಗೊಳ್ಳುತ್ತಾರೆ ಇದು ಹಿಮ್ಮುಖ ಹೆಜ್ಜೆಯಾಗಿದ್ದು, ಆಧುನಿಕ ವೈದ್ಯ ಪ್ರಕಾರಕ್ಕೆ ಹಿನ್ನಡೆ ಎಂದರು.

ಎನ್‌ಎಂಸಿ ಕಾಯ್ದೆ ಸೆಕ್ಷನ್ 32ರ ಪ್ರಕಾರ ವೈದ್ಯಕೀಯೇತರರಿಗೆ ಸಮುದಾಯ ಆರೋಗ್ಯ ರಕ್ಷಕರ ಹೆಸರಿನಲ್ಲಿ ಸ್ವತಂತ್ರವಾಗಿ ಪ್ರಾಥಮಿಕ ಚಿಕಿತ್ಸೆ ಯನ್ನು ನೀಡಲು ಅವಕಾಶ ಕಲ್ಪಿಸಿ, ನಕಲಿ ವೈದ್ಯರ ಸೃಷ್ಟಿಗೆ ಕಾರಣವಾಗುತ್ತದೆ, ಎಲ್ಲ ಔಷಧಗಳ ಪಠ್ಯಕ್ರಮವನ್ನು ಮಿಶ್ರ ವಾಡಿ ಮಿಶ್ರ ವೈದ್ಯಕೀಯ ವಾಡಲು ಅವಕಾಶ ಕಲ್ಪಿಸುವುದರಿಂದ ಆತಂಕಕಾರಿ ಎಂದರು.

ಆಯುರ್ವೇದ, ಯುನಾನಿ ಮತ್ತಿತರ ವೈದ್ಯ ಪದ್ಧತಿ ತಮ್ಮದೇ ಆದ ಇತಿಹಾಸ ಮತ್ತು ಪರಂಪರೆ ಹೊಂದಿವೆ ಮತ್ತು ಐಎಂಎ ಇದರ ಬಗ್ಗೆ ಹೆಮ್ಮೆ ಪಡುತ್ತದೆ. ಈ ನಿಟ್ಟಿನಲ್ಲಿ ಸರಕಾರ ಈ ಪ್ರಾಚೀನ ವೈದ್ಯಕೀಯ ಸಂಪತ್ತಿನ ಅತ್ಯಂತ ಶುದ್ಧ ರೂಪದ ಸಂರಕ್ಷಣೆಗೆ ಶ್ರಮವಹಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಜಾರಿಗೆ ತಂದಿರುವ ಮಿಕ್ಸೋ ಪದ್ಧತಿಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಡಿ.11ರಂದು ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಖಾಸಗಿ ವೈದ್ಯರು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ತುರ್ತು ಚಿಕಿತ್ಸೆ, ಕೋವಿಡ್, ಹೆರಿಗೆ ಚಿಕಿತ್ಸೆಯನ್ನು ಹೊರತು ಪಡಿಸಿ ಒಪಿಡಿ ಚಿಕಿತ್ಸೆಯನ್ನು ಕೈಗೆ ಕಪ್ಪುಪಟ್ಟಿ ಧರಿಸಿ ಬಹಿಷ್ಕರಿಸುವುದಾಗಿ ತಿಳಿಸಿದರು. ಐಎಎಂ ಕಾರ್ಯದರ್ಶಿ ಡಾ.ಜಿ.ಕೆ.ಸನತ್‌ಕುವಾರ್, ರಾಷ್ಟ್ರೀಯ ಭಾರತೀಯ ವೈದ್ಯಕೀಯ ಸಂದ ಉಪಾಧ್ಯಕ್ಷ ಡಾ.ಜಿ.ಎನ್.ಪ್ರಭಾಕರ್ ಮತ್ತಿತರರ ವೈದ್ಯರು ಇದ್ದರು.