ನರಗುಂದ: ಬಿಜೆಪಿಯ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಈ ಬಾರಿಯ ನನ್ನ ಚುನಾವಣೆ ಕೊನೆಯ ಚುನಾವಣೆ ಎಂದು ಈಗಾಗಲೇ ಸಂಕಲ್ಪ ಮಾಡಿದ್ದೇನೆ. ಮತಕ್ಷೇತ್ರದ ಜನರು ೧೫ ರಿಂದ ೨೦ ಸಾವಿರ ಮತಗಳ ಅಂತರದಿAದ ಗೆಲ್ಲಿಸಿದರೆ ಉಪ ಮುಖ್ಯಮಂತ್ರಿಯಾಗಿ ಐದು ವರ್ಷದ ಅವಧಿಯಲ್ಲಿ ೫ ಸಾವಿರ ಕೋಟಿ ರೂಪಾಯಿ ಅನುದಾನ ತರುತ್ತೇನೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಭರವಸೆ ನೀಡಿದರು.
ಪಟ್ಟಣದ ಗಾಂಧಿ ಸರ್ಕ್ಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೋಡ್ ಶೋ, ಚುನಾವಣೆ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
೨೫ ವರ್ಷದ ಹಳೆಯ ಸ್ನೇಹಿತ ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಂತ್ರಿಯಾದ ಬಳಿಕ ನನಗೆ ಲೋಕೋಪಯೋಗಿ ಮಹತ್ವದ ಖಾತೆ ದೊರೆತಿದೆ. ಮತಕ್ಷೇತ್ರದ ಎಲ್ಲ ರಸ್ತೆ, ಚರಂಡಿ, ಸಮುದಾಯ ಭವನಗಳ ನಿರ್ಮಾಣ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ೨ಸಾವಿರ ಕೋಟಿ ರೂಪಾಯಿ ಅನುದಾನ ತಂದು ಸಂಪೂರ್ಣ ಅಭಿವೃದ್ಧಿಪಡಿಸಿದ್ದೇನೆ. ನಾನು ಮಾಡಿರುವ ಯಾವುದೇ ಅಭಿವೃದ್ಧಿ ಕೆಲಸಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದುವರೆಗೆ ಪ್ರಶ್ನಿಸಿಲ್ಲ. ಆದರೆ, ಮಾಜಿ ಶಾಸಕ ಬಿ.ಆರ್.ಯಾವಗಲ್ಲ್ ಅವರು ನಾನು ಮಾಡಿದ ಸಿ.ಸಿ. ರಸ್ತೆಗಳ ಮೇಲೆಯೇ ನಿಂತು ಚುನಾವಣೆ ಪ್ರಚಾರ ಭಾಷಣಗಳನ್ನು ಮಾಡಿದ್ದಾರೆ. ಆದರೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ತಮ್ಮ ಪಕ್ಷದ ಹಿಂಬಾಲಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಮಾಡುತ್ತಿರುವುದು ಸರಿಯಲ್ಲ. ನರಗುಂದದ ಐತಿಹಾಸಿಕ ಕೆಂಪಗಸಿ, ಬಾಬಾಸಾಹೇಬರ ಅರಮನೆ, ಮಿನಿವಿಧಾನಸೌಧ, ೧೦೦ ಹಾಸಿಗೆಗಳ ಸುಸಜ್ಜಿತ ಸರ್ಕಾರಿ ಆಸ್ಪತ್ರೆ, ಸಮುದಾಯ ಭವನ, ಕ್ಷೇತ್ರದ ಎಲ್ಲ ಸಿಮೆಂಟ್ ರಸ್ತೆಗಳು ಸಿ.ಸಿ.ಪಾಟೀಲರ ಹೆಸರನ್ನೇ ಹೇಳುತ್ತವೆ. ಇವುಗಳನ್ನು ಮಾಡಿದರ‍್ಯಾರು ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು. ಮಲಪ್ರಭಾ ಕೋಮಲ್ ಆಯಿಲ್‌ಮಿಲ್ ಅನ್ನು ತಮ್ಮ ಕುಟುಂಬಕ್ಕೆ ಬಳಸಿಕೊಂಡಿದ್ದು ಬಿಟ್ಟರೆ ದಶಕಗಳ ಬೇಡಿಕೆಗೆ ಬಿ.ಆರ್.ಯಾವಗಲ್ಲ್ ಅವರು ಕಿಂಚಿತ್ತೂ ಸ್ಪಧಿಸಲಿಲ್ಲ. ದಿ.ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಶೇ,೮೫ ರಷ್ಟು ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಆದರೀಗ ಬಿಜೆಪಿಯನ್ನು ೪೦ ಪರ್ಸೆಂಟ್ ಸರ್ಕಾರವೆಂದು ಆರೋಪಿಸುತ್ತಿರುವುದು ಶುದ್ಧ ಸುಳ್ಳು. ಪ್ರಧಾನಮಂತ್ರಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ ಯೋಜನೆ ಬಟನ್ ಒತ್ತಿದರೆ ಕ್ಷಣಮಾತ್ರದಲ್ಲಿ ರೈತರ ಖಾತೆಗೆ ಹಣ ಜಮೆಯಾಗುತ್ತದೆ. ಇದರಲ್ಲಿ ನಯಾಪೈಸೆ ಭ್ರಷ್ಟಾಚಾರ ಇಲ್ಲ ಎಂದರು. ಬಿಜೆಪಿಯ ಎಲ್ಲ ಕಾರ್ಯಕರ್ತರ ಪರಿಶ್ರಮದ ಪುಣ್ಯದಿಂದ ನಾನು ಅಧಿಕಾರಕ್ಕೆ ಬಂದಿದ್ದೇನೆ. ಹೀಗಾಗಿ ಅವರಿಗೆ ಹಣ ನೀಡದೆ ಎಲ್ಲರಿಗೂ ಆದ್ಯತೆಯ ಮೇರೆಗೆ ಕೆಲಸಗಳನ್ನು ಕೊಟ್ಟಿದ್ದೇನೆ. ಆದರೆ, ನಿಮ್ಮಂತೆ ಊರ ಹೊರಗಿನ ಢಾಬಾದಲ್ಲಿ ಇಸ್ಫೀಟ್ ಆಡಿಸೋದು, ಮಧ್ಯ ಕುಡಿಸುವ ಕೆಲಸ ನಾನು ಮಾಡಿಲ್ಲ ಎಂದು ಯಾವಗಲ್ಲ್ ಅವರ ಟೀಕೆಗೆ ಮಾರ್ಮಿಕವಾಗಿ ನುಡಿದರು. ನೀವು ತಂದಿದ್ದ ಜಿಟಿಟಿಸಿ ಕಾಲೇಜ್ ಗದಗಕ್ಕೆ ಹೋಗಿತ್ತು. ಅದನ್ನು ನರಗುಂದಕ್ಕೆ ಮರಳಿ ನಾನು ತಂದಿದ್ದೇನೆ. ಕೋವಿಡ್ ಸಂಕಷ್ಟದಲ್ಲಿದ್ದ ಪ್ರತಿಯೊಬ್ಬರಿಗೂ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದ್ದೇನೆ. ಗುಣಮಟ್ಟ ಆರೋಗ್ಯ ವ್ಯವಸ್ಥೆಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿದ್ದೇನೆ. ಆಗ ನೀವು ಎಲ್ಲಿದ್ದಿçÃ. ನೀವು ತಿಂದ ಕೈ ಮುಸುರೆ ಕೂಡ ಕಾಗೆಗೆ ತೋರಿಸಲಿಲ್ಲ. ಹೀಗಾಗಿ ನಿಮ್ಮ ಹಿಂದೆ ಈಗ ಯಾರೊಬ್ಬರೂ ಇಲ್ಲದಂತಾಗಿ ಒಬ್ಬರೇ ನಾಯಿಯಂತೆ ಇದ್ದೀರಿ ಎಂದು ಹಿಗ್ಗಾಮುಗ್ಗಾ ಟೀಕಿಸಿದರು.
ನಾನು ಶಾಸಕನಾದರೆ ೧೦೫೮ ಕೋಟಿ ರೂಪಾಯಿ ವೆಚ್ಚದಲ್ಲಿ ಮಲಪ್ರಭಾ ನದಿ ಹಾಗೂ ಬೆಣ್ಣಿಹಳ್ಳದಲ್ಲಿನ ಸಂಪೂರ್ಣ ಹೂಳು ತೆಗೆಸುತ್ತೇನೆ. ಪ್ಯಾರಾಮೆಡಿಕಲ್ ಕಾಲೇಜ್ ಸ್ಥಾಪನೆ, ಯುವಕರಿಗೆ ಐಎಎಸ್, ಕೆಎಎಸ್ ಉಚಿತ ತರಬೇತಿ ಕೇಂದ್ರ, ಕೈಗಾರಿಕೆಗಳ ಸ್ಥಾಪನೆ, ೧೦ ಎಕರೆ ವಿಸ್ತಾರದಲ್ಲಿ ಅಂತರಾಷ್ಟಿçÃಯ ಕ್ರೀಡಾಂಗಣ ನಿರ್ಮಿಸುತ್ತೇನೆ ಎಂದು ಭರವಸೆ ನೀಡಿದರು. ಪಟ್ಟಣದ ಉಡಚಾ ಪರಮೇಶ್ವರ ದೇವಸ್ಥಾನದಿಂದ ಗಾಂಧಿ ವರ್ತುಲದವರೆಗೆ ತೆರೆದ ವಾಹನದಲ್ಲಿ ಸಚಿವ ಸಿ.ಸಿ.ಪಾಟೀಲ ಭರ್ಜರಿ ರೋಡ್ ಶೋ ನಡೆಸಿದರು.
ವಸಂತ ಜೋಗಣ್ಣವರ, ಎಸ್.ಆರ್.ಪಾಟೀಲ, ಎಂ.ಎಚ್.ತಿಮ್ಮನಗೌಡ್ರ ಮಾತನಾಡಿದರು. ಪ್ರಕಾಶ ತಿರಕನಗೌಡ್ರ, ಬಿ.ಬಿ.ಐನಾಪೂರ, ಶೋಭಾ ಪಾಟೀಲ, ಎಂ.ಎಸ್.ಪಾಟೀಲ, ಶಂಕರಗೌಡ ಪಾಟೀಲ, ಎಸ್.ಬಿ.ಪಾಟೀಲ. ಮಹೇಶಗೌಡ ಪಾಟೀಲ, ಪಿ.ಎಲ್.ಪಾಟೀಲ, ರವಿ ಹೊಂಗಲ, ಭಾರತಿ ಹೊಂಗಲ್. ಸುಕನ್ಯಾ ಸಾಲಿ, ಕಾಶವ್ವ ಮಳಗಿ, ರಾಜೇಶ್ವರಿ ಹವಾಲ್ದಾರ, ಅನ್ನಪೂರ್ಣ ಯಲಿಗಾರ, ಉಮೇಶಗೌಡ ಪಾಟೀಲ, ಈಶ್ವರಗೌಡ ಪಾಟೀಲ, ಚಂಬಣ್ಣ ವಾಳದ, ಪಿ.ಎಲ್.ಪಾಟೀಲ, ಶಿವನಗೌಡ ಪಾಟೀಲ, ಭಾವನಾ ಪಾಟೀಲ, ಚಂದ್ರು ದಂಡಿನ, ಮಲ್ಲಪ್ಪ ಮೇಟಿ, ಅಜ್ಜನಗೌಡ ಪಾಟೀಲ, ಸಿದ್ದು ಹೂಗಾರ, ಸುನೀಲ್ ಕುಷ್ಟಗಿ ಉಪಸ್ಥಿತರಿದ್ದರು.