ಜಿಲ್ಲೆ

ಅಹಮದಾಬಾದ್​ಗೆ ತೆರಳಿದ ಸಿಬಿಎಸ್ ವಿದ್ಯಾರ್ಥಿಗಳು

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಚೇತನ್ ಬಿಜಿನೆಸ್ ಸ್ಕೂಲ್ (ಸಿಬಿಎಸ್)ನ 7 ಜನ ವಿದ್ಯಾರ್ಥಿಗಳು ಸಮ್ಮರ್ ಇಂಟರ್ನ್​ಶಿಪ್ ವರ್ಕ್​ಗಾಗಿ ಬೆಂಗಳೂರಿನ ಮ್ಯಾಥ್ಸ್ ಕ್ರಿಯೇಷನ್ ಕಂಪನಿ ವೆಚ್ಚದಲ್ಲಿ ಸೋಮವಾರದಂದು ಹುಬ್ಬಳ್ಳಿಯಿಂದ ಪುಣೆ ಮಾರ್ಗವಾಗಿ ವಿಮಾನದಲ್ಲಿ ಅಹಮದಾಬಾದ್​ಗೆ ತೆರಳಿದರು.

ವಿದ್ಯಾರ್ಥಿಗಳಾದ ಭೀಮಲ್, ಕಾರ್ತಿಕ ಬಳ್ಳಾರಿ, ನರೇಂದ್ರ, ಸಿರಿನ್, ಸುನಿಧಿ ಹಿರೇಮಠ, ಮಂಜುನಾಥ ಹಾಗೂ ಕುಶಾಲ್ ಅವರು 2 ತಿಂಗಳ ಪ್ರೊಜೆಕ್ಟ್ ವರ್ಕ್​ಗಾಗಿ ಜಾಪ್ ಟು ಕಂಪನಿ ವತಿಯಿಂದ ಅಹ್ಮದಾಬಾದ್​ಗೆ ಪ್ರಯಾಣಿಸಿದರು.

ವಿದ್ಯಾರ್ಥಿಗಳಿಗೆ ವಿಮಾನ ವೆಚ್ಚ, ಪ್ರವಾಸದ ಸೌಕರ್ಯದ ಜತೆಗೆ ಪ್ರತಿ ತಿಂಗಳು 10 ಸಾವಿರ ಸ್ಟೈಫಂಡ್ ಹಣವನ್ನು ಸಹ ಮ್ಯಾಥ್ಸ್ ಕ್ರಿಯೇಷನ್ ಕಂಪನಿ ನೀಡಲಿದೆ.

ಎಂಬಿಎ ಪಠ್ಯಕ್ರಮದ ಪ್ರಕಾರ ಎಲ್ಲ ವಿದ್ಯಾರ್ಥಿಗಳು 2 ತಿಂಗಳ ಪ್ರಾಜೆಕ್ಟ್ ವರ್ಕ್ ಅನ್ನು ಕಡ್ಡಾಯವಾಗಿ ಮಾಡಬೇಕಾಗುತ್ತದೆ. ಇದೇ ಮೊದಲ ಬಾರಿಗೆ ಇಂಟರ್ನಶಿಪ್​ಗಾಗಿ ಕಂಪನಿಯೊಂದು ನಮ್ಮ ಹೆಮ್ಮೆಯ ವಿದ್ಯಾರ್ಥಿಗಳಿಗೆ ಅಹಮದಾಬಾದ್​ಗೆ ಹಾರಲು ವಿಮಾನ ಟಿಕೆಟ್​ಗಳನ್ನು ಕಾಯ್ದಿರಿಸಿರುವುದು ವಿಶೇಷ ಎಂದು ಸಿಬಿಎಸ್ ಸಂಸ್ಥಾಪಕ ನಿರ್ದೇಶಕ ಡಾ. ವಿ.ಎಂ. ಕೊರವಿ ತಿಳಿಸಿದರು.

ಪ್ರವಾಸೋದ್ಯಮ ಮತ್ತು ಆತಿಥ್ಯ, ರಿಟೇಲ್ ವ್ಯಾಪಾರ, ಡಿಜಿಟಲ್ ಮಾರ್ಕೆಟಿಂಗ್, ಹೆಲ್ತ್ಕೇರ್, ಸಿಮೆಂಟ್, ಹಣಕಾಸು ಸೇವೆಗಳು, ಬ್ಯಾಂಕಿಂಗ್, ಆಟೋಮೊಬೈಲ್ ಮುಂತಾದ ಇಂಡಸ್ಟ್ರಿಯಲ್ ಸೆಕ್ಟರ್ ಗಳಲ್ಲಿ ನಮ್ಮ ವಿದ್ಯಾರ್ಥಿಗಳು ಪ್ರಾಜೆಕ್ಟ್ ವರ್ಕ್ ಮಾಡಲಿದ್ದಾರೆ. ಇಂಟರ್ನ್​ಶಿಪ್ ಪ್ರೋಗ್ರಾಂ ‘ಸ್ವಧ್ಯಾಯ’ ಪ್ರಾರಂಭದ ಹಂತವಾಗಿದೆ ಮತ್ತು ‘ನನ್ನ ಕಂಪನಿ ಮತ್ತು ನನ್ನ ಉತ್ಪನ್ನ‘ ಎಂಬ ಅಡಿಬರಹದೊಂದಿಗೆ ಕೊನೆಗೊಳ್ಳುತ್ತದ ಎಂದು ಹೇಳಿದರು.

ಡಾ. ವಿ.ಎಂ. ಕೊರವಿ, ನಿರ್ದೇಶಕ ಡಾ. ರಮಾ ಕುಲಕರ್ಣಿ, ಎಸ್​ಐಪಿ ಸಂಯೋಜಕರಾದ ಡಾ. ಮಂಗಳಾ ಯರಗಟ್ಟಿ, ಪ್ಲೇಸ್​ವೆುಂಟ್ ನಿರ್ದೇಶಕಿ ಡಾ. ಅನಿರುದ್ಧಾ ಅಂಕೋಲೇಕರ, ಡಾ. ಕೆ.ಸಿ. ಪಾಂಗಿ, ಡಾ. ಎಂ.ಬಿ. ಹೂಲಿ, ಡಾ. ಶ್ರದ್ಧಾ ಸಜ್ಜನರ, ಪ್ರೊ. ಶ್ರೇಯಸ್ ಮುರಡೇಶ್ವರ, ಭರಮಪ್ಪ, ಜಾಫರ್, ವಿದ್ಯಾರ್ಥಿಗಳು ಹಾಗೂ ಪಾಲಕರು ಅಹಮದಾಬಾದ್​ಗೆ ತೆರಳುತ್ತಿರುವ ವಿದ್ಯಾರ್ಥಿಗಳಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶುಭ ಹಾರೈಸಿ, ಬೀಳ್ಕೊಟ್ಟರು.