ಹುಬ್ಬಳ್ಳಿ: ಇಲ್ಲಿಯ ಜೈನ್ ಕಾಲೇಜಿನ ಆಶ್ರಯದಲ್ಲಿ ಅಂತರ್ಕಾಲೇಜು ಯೂಥ್ ಫೆಸ್ಟ್ "ಕ್ಯಾವಲ್ಕೇಡ್&24' ಅನ್ನು ಜೂನ್ 21ರಿಂದ ಎರಡು ದಿನಗಳವರೆಗೆ ನಗರದಲ್ಲಿ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದ ಮೂಲಕ ಕಾಲೇಜು ವಿದ್ಯಾಥಿರ್ಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸುವುದು, ಸಾಹಸ ಪ್ರವೃತ್ತಿ ಹೆಚ್ಚಿಸಲು ವಿವಿಧ ಬಗೆಯ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ. ಸ್ಪರ್ಧೆಯ ಜತೆಗೆ ಶೈಕ್ಷಣಿಕ ಅಗತ್ಯ ಪೂರೈಸುವುದು, ಸಾಂಸ್ಕೃತಿಕ ಪ್ರತಿಭೆ ಅನಾವರಣ ಮಾಡಲು ಸಹಾಯಕವಾಗಲಿದೆ.
ವಿದ್ಯಾರ್ಥಿ ಕೇಂದ್ರಿತ ಸ್ಪರ್ಧೆಯ ವೈವಿದ್ಯಮಯ ವಿಷಯಗಳು ಶೈಕ್ಷಣಿಕ ಜ್ಞಾನ ಗಳಿಸಲು ಅನುಕೂಲವಾಗಲಿವೆ. ರಾಜ್ಯದ ವಿವಿಧ ಕಾಲೇಜುಗಳು ಮಾತ್ರವಲ್ಲ, ಹೊರ ರಾಜ್ಯಗಳ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುವರು.
ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿ ಸಲುವಾಗಿ ಪ್ರತಿ ವರ್ಷ ಆಯೋಜಿಸುವ ಕಾರ್ಯಕ್ರಮದಲ್ಲಿ ವ್ಯವಹಾರ, ಮಾಹಿತಿ ತಂತ್ರಜ್ಞಾನ, ವಾಣಿಜ್ಯ, ಸಂಸತಿ, ಸಾಹಿತ್ಯ ಹಾಗೂ ಇತರ ಚಟುವಟಿಕೆಗಳಲ್ಲಿ ಪ್ರತಿಭೆ ಪ್ರದರ್ಶನ ಮಾಡಬಹುದು.
ವಿವಿಧ ಕಂಪನಿ, ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಕ್ಯಾವಲ್ಕೇಡ್ ಫೆಸ್ಟ್ ನಡೆಯುತ್ತಿದ್ದು, ಜೂನ್ 21ರಂದು ಆಯೋಜಿಸಿರುವ "ಆರ್ಕಿವಿಯೋ' ವಾಣಿಜ್ಯ ಉತ್ಸವದಲ್ಲಿ ಬಿ.ಕಾಂ ಪದವಿ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು.
ಇದರಲ್ಲಿ ಬೆಸ್ಟ್ ಮ್ಯಾನೇಜರ್, ಕ್ವಿಜ್, ಫೈನಾನ್ಸ್, ಮಾರ್ಕೆಟಿಂಗ್, ಹ್ಯೂಮನ್ ರಿಸೋರ್ಸ್, ಸಿಎಸ್ಆರ್ ವಿಷಯಗಳ ಮೇಲೆ ಸ್ಪರ್ಧೆಗಳು ನಡೆಯಲಿವೆ.
ಜೂನ್ 22ರಂದು "ಪ್ರುಡೆನ್ಸ್' ಹಾಗೂ ಮ್ಯಾನೇಜಮೆಂಟ್ ಇವೆಂಟ್ ಗಳನ್ನು ಏರ್ಪಡಿಸಲಾಗಿದೆ.
ಸ್ವರಃ ವಿಮುಕ್ತ ಸಾಂಸ್ಕೃತಿಕ ಕಾರ್ಯಕ್ರಮ, "ಛಾಯಾಚಿತ್ರಕಲಾ' ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿದೆ. ಎರಡೂ ಕಾರ್ಯಕ್ರಮಗಳಲ್ಲಿ ಜನರಲ್ ಚಾಂಪಿಯನ್ಶಿಪ್ ನೀಡಲಾಗುವುದು.
ಜೂನ್ 21ರ ಇವೆಂಟ್ ಗಳು ಜೈನ್ ಕಾಲೇಜಿನಲ್ಲಿ, ಜೂನ್ 22ರ ಇವೆಂಟ್ ಗಳು ಹುಬ್ಬಳ್ಳಿಯ ಅಮರಗೋಳದ ರಾಯಲ್ ರಿಟ್ಜ ಹೋಟೆಲ್ನಲ್ಲಿ ನಡೆಯಲಿವೆ.
ಸೇವಕರಾಮ ಗ್ರುಪ್ ನ ಕರಣ ಅಗರವಾಲ್, ಪ್ರಾಚಾರ್ಯ ಡಾ. ಪ್ರಶಾಂತ ಬಣಕಾರ, ವೆಂಕಟೇಶ ಗೋವಿಂದರಾಜನ್, ಮಜೇಥಿಯಾ ಫೌಂಡೇಷನ್ ಅಧ್ಯಕ್ಷೆ ನಂದಿನಿ ಮಜೇಥಿಯಾ, ಡಾ. ವಿ.ಎಸ್.ವಿ. ಪ್ರಸಾದ, ಪ್ರೊ. ದಿನೇಶ ನೀಲಕಂಠ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಾಚಾರ್ಯ ಪ್ರೊ. ಮಾಯಾ ಕುಲ್ಹಳ್ಳಿ ತಿಳಿಸಿದ್ದಾರೆ.