ಮೈಸೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ಈ ವರ್ಷ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಕಾವೇರಿ ನದಿ ನೀರು ಹಂಚಿಕೆಯ ಬಿಕ್ಕಟ್ಟು ಉದ್ಭವಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು
.
ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೆಆರ್‌ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳು ಭರ್ತಿಯಾಗಿವೆ. ಇತ್ತೀಚೆಗೆ ತಮಿಳುನಾಡು, ನಮಗೂ ಕಾವೇರಿ ಸಮಸ್ಯೆ ಉಂಟಾಗಿತ್ತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 47 ಟಿಎಂಸಿ ನೀರು ಬಿಡುವಂತೆ ಆದೇಶ ನೀಡಿತ್ತು. ಈಗಾಗಲೇ ತಮಿಳುನಾಡಿಗೆ 80 ಟಿಎಂಸಿಗಿಂತ ಹೆಚ್ಚು ನೀರು ಬಿಡಲಾಗಿದೆ. ಇದರಿಂದಾಗಿ ಈ ಸಲ ನೀರಿನ ಹಂಚಿಕೆ ಸಮಸ್ಯೆ ಸೃಷ್ಟಿಯಾಗುವುದಿಲ್ಲ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕಪಿಲಾ ನದಿ ನಮ್ಮೆಲ್ಲರ ಗೌರವವನ್ನು ಉಳಿಸಿದೆ. ಹೀಗಾಗಿ ಸರ್ಕಾರದ ಪರವಾಗಿ ವಂದನೆಗಳು. ಕಾವೇರಿ ತೀರ್ಪನಂತೆ ಬಿಕ್ಕಟ್ಟು ಸಮಸ್ಯೆ ಉಲ್ಬಣಿಸಿದಾಗ ಕಬಿನಿ ಜಲಾಶಯದಿಂದ ಅತಿ ಹೆಚ್ಚು ನೀರನ್ನು ಬಿಡುವುದರ ಮೂಲಕ ನಮ್ಮ ಗೌರವವನ್ನು ಕಾಪಾಡಿದೆ ಎಂದರು.