ಜಿಲ್ಲೆ

ನೆಲಮಂಗಲಕ್ಕೂ ಕಾವೇರಿ ನೀರು

ಬೆಂಗಳೂರು ಗ್ರಾಮಾಂತರ ಡೆಸ್ಕ್

ನಗರಸಭೆ ಸಾಮಾನ್ಯಸಭೆಯಲ್ಲಿ ಶಾಸಕ ಶ್ರೀನಿವಾಸ್​ ಭರವಸೆ

ನೆಲಮಂಗಲ: ಶ್ರೀದಲ್ಲಿ ಒಳಚರಂಡಿ ಯೋಜನೆಗೆ ಚಾಲನೆ ನೀಡುವ ಜತೆಗೆ ನಗರಕ್ಕೆ ಕಾವೇರಿ ನೀರು ಸರಬರಾಜು ಮಾಡಿ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಶಾಸಕ ಎನ್​.ಶ್ರೀನಿವಾಸ್​ ಭರವಸೆ ನೀಡಿದರು.
ತಾಲೂಕಿನ ಬಸವನಹಳ್ಳಿ ನಗರಸಭೆ ಪ್ರಾದೇಶಿಕ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ನಗರಸಭೆ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಒಳಚರಂಡಿ ಯೋಜನೆಗೆ ಈಗಾಗಲೇ ಸರ್ಕಾರದಿಂದ 35 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಕನಿಷ್ಠ 75 ರಿಂದ 100 ಕೋಟಿ ರೂ. ಅನುದಾನ ಮೀಸಲಿರಿಸಿ ಕಾಮಗಾರಿ ಕೈಗೆತ್ತಿಕೊಳ್ಳುವ ಉದ್ದೇಶದಿಂದ ಯೋಜನೆ ವಿಳಂಬವಾಗುತ್ತಿದೆ ಎಂದ ಅವರು, 3 ವರ್ಷಗಳಲ್ಲಿ ಬೆಂಗಳೂರು ಉಪನಗರ ವ್ಯಾಪ್ತಿಯ ನೆಲಮಂಗಲಕ್ಕೆ ಕಾವೇರಿ ನೀರು ತರಲು ಶ್ರಮಿಸಲಾಗುವುದು. ಈಗಾಗಲೇ ಯುಜಿ ಕೇಬಲ್​ ಅಳವಡಿಕೆಗಾಗಿ 200 ಕೋಟಿ ರೂ.ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರಿಂದ ಅರ್ಜಿ ಸ್ವೀಕಾರ: ನಗರಸಭಾ ಕಚೇರಿಯಲ್ಲಿ ಪ್ರತಿತಿಂಗಳು ವಿಶೇಷ ಸಭೆ ಆಯೋಜಿಸಿ, ನಾಗರಿಕರಿಂದ ಅರ್ಜಿ ಸ್ವೀಕರಿಸಿ, ತ್ವರಿತಗತಿಯಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು.
ನಗರಸಭೆ ಅಧ್ಯೆ ಪೂರ್ಣಿಮಾ ಸುಗ್ಗರಾಜು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಚಾಲನೆ ನೀಡಲಿರುವ ನಗರಸಭೆ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಸೌಕರ್ಯಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಪಾತೀತವಾಗಿ ಸಹಕರಿಸುವುದಾಗಿ ತಿಳಿಸಿದ ಶಾಸಕರ ನಡೆ ಶ್ಲಾನೀಯ ಎಂದರು.

ಭೂಸ್ವಾಧಿನ ಪ್ರಕ್ರಿಯೆ ಜೀವಂತ: ಒಳಚರಂಡಿ ಯೋಜನೆ ಪೂರ್ವದಲ್ಲಿ ಮಲೀನ ನೀರು ಶುದ್ಧೀಕರಣ ಟಕ ನಿರ್ಮಾಣಕ್ಕೆ ಸರ್ಕಾರಿ ಜಾಗದ ಕೊರತೆ ಎದುರಾಗಿದ್ದು, ಖಾಸಗಿ ವ್ಯಕ್ತಿಗಳ ಜಮೀನು ಭೂಸ್ವಾಧಿನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಒಳಚರಂಡಿ ಡಿಪಿಆರ್​ಗೆ ನಗರಸಭೆ ಅನುದಾನ ಬಳಕೆ ಮಾಡಿ ಸದಸ್ಯರೆಲ್ಲರೂ ಸೇರಿ ನಗರದ ಸೊಂಡೆಕೊಪ್ಪ ರಸ್ತೆಯ ರಾಜಕಾಲುವೆ ಮೇಲೆ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ತೆರವು ಮಾಡಿಕೊಟ್ಟಲ್ಲಿ ಸೊಂಡೆಕೊಪ್ಪ ವೃತ್ತದವರೆಗೂ ರಸ್ತೆ ವಿಸ್ತರಣೆ ಮಾಡಿ, ಜೋಡಿ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕರು ತಿಳಿಸಿದರು. ನಗರೋತ್ಥಾನ ಯೋಜನೆಯಡಿ ಕಾಮಗಾರಿಯನ್ನು ಗುತ್ತಿಗೆದಾರರು ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾಗಿರುವ ಕಾರಣ ಸ್ಥಗಿತಗೊಳಿಸಿರುವ ವಿಚಾರ, ನಗರಸಭೆ ವ್ಯಾಪ್ತಿಯಲ್ಲಿ ಜಾಗ ಲಭ್ಯವಿದ್ದಲ್ಲಿ ಶಾಪಿಂಗ್​ ಕಾಂಪ್ಲೆಕ್ಸ್​ ನಿರ್ಮಿಸುವುದು, ಕ್ರೀಡಾಂಗಣ ರಸ್ತೆ ಅಭಿವೃದ್ಧಿ, ದಸರಾ ಮುಗಿಯುತ್ತಿದ್ದಂತೆ ಪ್ರತಿ ವಾರ್ಡ್​ಗೂ ಭೇಟಿ ನೀಡಿ, ಸಮರ್ಪಕ ಚರಂಡಿ ನಿರ್ಮಾಣಕ್ಕೆ ತಲಾ 50 ಲ ರೂ. ಅನುದಾನ ನೀಡುವುದು, ವಿದ್ಯುತ್​ ಶವಾಗಾರ ನಿರ್ಮಾಣದ ಬಗ್ಗೆ ಶಾಸಕರು ಸದಸ್ಯರ ಗಮನಕ್ಕೆ ತಂದರು.


ಚರ್ಚೆಯಾದ ವಿಷಯಗಳು
: ನತ್ಯಾಜ್ಯ ವಿಲೇವಾರಿ ಟಕಕ್ಕೆ ಅವಶ್ಯವಿರುವ ಸಾಮಗ್ರಿ ಖರೀದಿಸಿ, ವಿಶ್ವೇಶ್ವರಪುರ 3ನೇ ವಾರ್ಡ್​ನಲ್ಲಿ ಬಾಬು ಜಗಜೀವನ ರಾಮ್​ ಭವನ ನಿರ್ಮಾಣ ಕಾಮಗಾರಿ ಟೆಂಡರ್​ ದರ ಅನುಮೋದನೆ, ನಗರದ ಎಂ.ಜಿ.ರಸ್ತೆ ಅಭಿವೃದ್ಧಿ ಚರಂಡಿ ನಿರ್ಮಾಣ ಕಾಮಗಾರಿ ಕಾರ್ಯಾದೇಶ, ಎಲ್​ಇಡಿ ವಿದ್ಯುತ್​ ದೀಪ ಖರೀದಿಸಿ ಅಳವಡಿಕೆ, ಟಿ.ಬಿ ಬಳಿ ಇರುವ ಇಂದಿರಾ ಕ್ಯಾಂಟೀನ್​ ಅನ್ನು ತಾಲೂಕು ಕಚೇರಿ ಸಮೀಪಕ್ಕೆ ಸ್ಥಳಾಂತರಿಸುವುದು, ಬೇಸಿಗೆಯಲ್ಲಿ ನೀರಿನ ಅಭಾವದಿಂದ ಟ್ಯಾಂಕರ್​ ನೀರು ಪೂರೈಕೆ ವೆಚ್ಚ ಭರಿಸುವುದು, ರಾಮ್ಕಿ ಬಡಾವಣೆಯಲ್ಲಿ ನೆಲಮಟ್ಟದ ಜಲಸಂಗ್ರಾಹಗಾರ ನಿರ್ಮಾಣ, ವಾಹನಗಳಿಗೆ 21 ಚಾಲಕರು, 42 ಸಹಾಯಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸುವುದು ಸೇರಿ ವಿವಿಧ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು.

ಉಪಾಧ್ಯೆ ಸುಜಾತಾ ಮುನಿಯಪ್ಪ, ಪೌರಾಯುಕ್ತ ಎಚ್​.ಎಂ.ಮನುಕುಮಾರ್​, ಸದಸ್ಯರಾದ ಕೆ.ಎಂ.ಶಿವಕುಮಾರ್​, ಗಂಗಾಧರ್​ ರಾವ್​, ಎನ್​.ಗಣೇಶ್​, ಆಂಜಿನಪ್ಪ, ನರಸಿಂಹಮೂರ್ತಿ, ಜಿ.ಆನಂದ್​, ಸಿ.ಪ್ರದಿಪ್​, ಪದ್ಮನಾಭ್​, ಪುರುಷೋತ್ತಮ್​, ಅಂಜನಾಮೂರ್ತಿ, ಚೇತನ್​, ಪುಷ್ಪಲತಾ, ರಾಜಮ್ಮಪಿಳ್ಳಪ್ಪ, ಸುಧಾಕೃಷ್ಣಪ್ಪ, ಲೋಲಾ ಗಂಗಾಧರ್​, ಭಾಗ್ಯಾ ನರಸಿಂಹಮೂರ್ತಿ, ಶಾರದಾ ಉಮೇಶ್​, ಹೆಚ್ಚುವರಿ ಸದಸ್ಯ ರಾಮಮೂರ್ತಿ, ಕೃಪಾನಂದ್​, ಆಂಜಿನಮೂರ್ತಿ, ಮುನಿರಾಜು, ಕಚೇರಿ ವ್ಯವಸ್ಥಾಪಕ ಮಂಮ್ತಾಜ್​, ಎಇಇ ನಾಗಲಿಂಗ ಬಡಿಗೇರ್​, ಕಂದಾಯ ಅಧಿಕಾರಿ ಸರಸ್ವತಿ, ಸಮುದಾಯ ಸಂಟಕ ನಾರಾಯಣಸ್ವಾಮಿ ಇದ್ದರು.