ಜಿಲ್ಲೆ

ಕಾವೇರಿ ಹೋರಾಟಕ್ಕೆ ನಾಯಕನ ಅವಶ್ಯಕತೆ ಇತ್ತು

ಪ್ರಸಿನ್ ಕೆ.ಆರ್

ಹಲಗೂರು: ಶೇಕಡ 80ರಷ್ಟು ಜನರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮತ ನೀಡಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಮಾಜಿ ಶಾಸಕ ಅನ್ನದಾನಿ ಹೇಳಿದರು.

ಹುಸ್ಕೂರು ಗ್ರಾಮದ ಮತಗಟ್ಟೆಗೆ ಪುತ್ರನ ಜತೆ ಬಂದು ಮತ ಚಲಾಯಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು. ಕಾವೇರಿ ಹೋರಾಟಕ್ಕೆ ಒಬ್ಬ ಉತ್ತಮ ನಾಯಕನ ಅವಶ್ಯಕತೆ ಇತ್ತು. ಅದು ಈಗ ಸಾಧ್ಯವಾಗಿದೆ. ಕುಮಾರಸ್ವಾಮಿ ಅವರು, ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.