ಶ್ರೀರಂಗಪಟ್ಟಣ: ಪಟ್ಟಣದ ಕಾವೇರಿ ನದಿಯಲ್ಲಿ ಮೊಸಳೆಗಳು ಪ್ರತ್ಯಕ್ಷವಾಗಿದ್ದು, ನದಿ ತೀರಗಳಲ್ಲಿ ಇದೀಗ ಆತಂಕ ಸೃಷ್ಟಿಯಾಗಿದೆ.
ಕೆಆರ್‌ಎಸ್ ಜಲಾಶಯದಿಂದ ಅಧಿಕ ನೀರನ್ನು ಕಾವೇರಿ ನದಿಗೆ ಹರಿಸಿದ ಹಿನ್ನೆಲೆಯಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ರಂಗನತಿಟ್ಟು ಪಕ್ಷಿಧಾಮಲ್ಲಿದ್ದ ಮೊಸಳೆಗಳು ಹೊರಬಂದಿವೆ. ಮಂಗಳವಾರ ನದಿ ನೀರಿನ ಹೊರಹರಿವನ್ನು ಇಳಿಕೆ ಮಾಡಿದ ಮೇಲೆ ಪ್ರವಾಹದಲ್ಲಿ ಮೊಸಳೆಗಳು ಹೊರಬಂದಿರುವುದು ಕಂಡುಬಂದಿದೆ. ಇದೀಗ ಕಾವೇರಿ ನದಿಯಲ್ಲಿ ಪುರಜನರು ಸೇರಿದಂತೆ ಪ್ರವಾಸಿಗರು ನದಿಗೆ ಇಳಿಯದಂತೆ ಅಧಿಕಾರಿಗಳು ಮಾಹಿತಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ.