ಸಿಂಧನೂರು ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನ್ಯಾಷನಲ್ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಾನುವಾರುಗಳ ಕುಡಿವ ನೀರಿನ ತೊಟ್ಟಿ ಸ್ವಚ್ಛಗೊಳಿಸಿ ನೀರು ತುಂಬಿಸಿರುವುದು. 
ಜಿಲ್ಲೆ

ದನಗಳ ನೀರಿನ ತೊಟ್ಟಿ ಸ್ವಚ್ಛಗೊಳಿಸಿದ ವಿದ್ಯಾರ್ಥಿಗಳು

ನರೇಶ್ ಕುಮಾರ್

ಸಿಂಧನೂರು: ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ವರ್ಷಗಳಿಂದ ಹಾಳು ಬಿದ್ದಿದ್ದ ಜಾನುವಾರುಗಳ ಕುಡಿವ ನೀರಿನ ತೊಟ್ಟಿಯನ್ನು ನ್ಯಾಷನಲ್ ಪದವಿ ಮಹಾವಿದ್ಯಾಲಯದ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಸ್ವಚ್ಛಗೊಳಿಸಿ ಸುಣ್ಣ ಬಣ್ಣ ಬಳಿದು ದನಗಳು ನೀರು ಕುಡಿಯುವಂತೆ ಮಾಡಿದ್ದಾರೆ.

ಮಲ್ಲಾಪುರದಲ್ಲಿ ವಾರಗಳ ಕಾಲ ಹಮ್ಮಿಕೊಂಡಿದ್ದ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಹಳ್ಳಕ್ಕೆ ಹೋಗುವ ಮಾರ್ಗದಲ್ಲಿ ಇರುವ ನೀರಿನ ತೊಟ್ಟಿಯನ್ನು ಸ್ವಚ್ಛಗೊಳಿಸಲಾಗಿದೆ. ಹಳ್ಳದ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದ್ದು, ಸ್ವಚ್ಛ ಮಾಡುವ ಮೂಲಕ ಜನಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ.

ವನಸಿರಿ ಫೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಸಹಕಾರದೊಂದಿಗೆ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಹಾಳಾಗಿದ್ದ ನೀರಿನ ತೊಟ್ಟಿಯನ್ನು ಇಡೀ ದಿನ ಸ್ವಚ್ಛಗೊಳಿಸಿದ್ದಾರೆ. ಬಳಿಕ ನೀರಿನ ತೊಟ್ಟಿಗೆ ಜಾನುವಾರುಗಳು ಬಂದು ನೀರು ಕುಡಿವ ವ್ಯವಸ್ಥೆಯನ್ನೂ ಮಾಡಿದ್ದು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಎನ್ನೆಸ್ಸೆಸ್ ಅಧಿಕಾರಿ ರವಿಕುಮಾರ ಎಸ್.ಮಸ್ಕಿ ತಿಳಿಸಿದರು.